#ಕೋವಿಡ್ಎಂಬಜೀವವೋ...!!!   #ಹಸಿವೆಂಬ_ಜೀವನವೋ....!!!

ಚಾಮರಾಜನಗರ ಜಿಲ್ಲೆಯ ಒಂದೇ‌ ಕುಟುಂಬದ ನಾಲ್ವರು ನೇಣಿಗೆ ಶರಣಾಗಿದ್ದಾರೆ. ಭಾವ ಚಿತ್ರದಲ್ಲಿ ಅವರನ್ನು ನೋಡಿದರೆ ಗೋತ್ತಾಗುತ್ತದೆ. ಲಾಕಡೌನಲ್ಲಿ ಕಿತ್ತಿ ತಿನ್ನುವ ಬಡತನದಿಂದ ಬೆಂದು ಹೋದ ಕುಟುಂಬ ಎಂದು..
 

ಕೋವಿಡ್ ಎಂಬ ವೈರಸ್ ಜಾಗತಿಕ ಮಟ್ಟದಲ್ಲಿ ಹರಡಿರುವ ರೋಗವಾಗಿದೆ.. ಆದರೆ ಜಗತ್ತಿನ ಅದೆಷ್ಟೋ ದೇಶಗಳಲ್ಲಿ ಈಗ ಕೋವಿಡ್ ನ್ನು ನಿಯಂತ್ರಣಕ್ಕೆ ತರಲಾಗಿದ್ದು, ಜನರು ತಮ್ಮ ಸುರಕ್ಷತೆಯೊಂದಿಗೆ ನಿತ್ಯದ ಜೀವನ ನಡೆಸುತ್ತಿದ್ದಾರೆ. ದುಡಿಯುತ್ತಿದ್ದಾರೆ.... ಹೀಗಿರುವಾಗ ಭಾರತದಂತಹ ಬೃಹತ್ ಜನಸಂಖ್ಯೆ ಹೊಂದಿರುವ ದೇಶದಲ್ಲೀಗ ಕೋವಿಡ್ ನಿಂದ ಸಾವನ್ನಪ್ಪುವುದಲ್ಲದೇ ಹಸವಿನಿಂದಲೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಈ ಸರ್ಕಾರದ ದುರಾಡಳಿತದಿಂದ. ಲಾಕ್ಡೌನ್ ಲಾಕ್ಡೌನ್ ಅಂತ ಬೊಬ್ಬೆ ಹೊಡೆಯುತ್ತಿರುವ ಸರ್ಕಾರವು ಲಾಕ್ಡೌನ್ ಮಾಡುವ ಮೊದಲು ಜನರ ಜೀವನದ ಬಗ್ಗೆ ಪರಿಹಾರ ಕೊಟ್ಟಿರಬೇಕಿತ್ತು. ಇಲ್ಲವಾಗಿದ್ದಲ್ಲಿ ದುಡಿದು ತಿನ್ನಲಾದರೂ ಬಿಡಬೇಕಿತ್ತು.... ಇದ್ಯಾವುದನ್ನೂ ಮಾಡದೇ ಮನಸ್ಸಿಗೆ ಬಂದಂತೆ ಲಾಕ್ಡೌನ್ ನನ್ನು ಹಾಕುತ್ತಿರುವ ಈ ಸರ್ಕಾರಗಳು ಜನರ ಹಸಿವಿನ ವೈರಸ್ಸಿನಿಂದ ಮುಕ್ತಿ ಕೊಡಿಸೋದು ಯಾವಾಗ...??!! ಇದ್ದ ಎಲ್ಲಾ ವಸ್ತು, ದವಸ-ಧಾನ್ಯಗಳ ಬೆಲೆಗಳನ್ನ ಗಗನಕ್ಕೇರಿಸಿ, ದುಡಿಯಲೂ ಬಿಡದೇ ಜನರ ಮೇಲೆ ಲಾಕ್ಡೌನ್ ಹೇರುವುದು ಎಷ್ಟರ ಮಟ್ಟಿಗೆ ಸರಿ...??

ಇಲ್ಲಿ‌ನೋಡಿ ಚಾಮರಾಜನಗರ ಜಿಲ್ಲೆಯ ಒಂದೇ‌ ಕುಟುಂಬದ ನಾಲ್ವರು ನೇಣಿಗೆ ಶರಣಾಗಿದ್ದಾರೆ. ಭಾವ ಚಿತ್ರದಲ್ಲಿ ಅವರನ್ನು ನೋಡಿದರೆ ಗೋತ್ತಾಗುತ್ತದೆ. ಲಾಕಡೌನಲ್ಲಿ ಕಿತ್ತಿ ತಿನ್ನುವ ಬಡತನದಿಂದ ಬೆಂದು ಹೋದ ಕುಟುಂಬ ಎಂದು.... ಈ ಜೀವಗಳಿಗೆ ಬೆಲೆ ಕಟ್ಟಲಾಗುವುದೇ ಅಥವಾ ಹಸಿವಿನಿಂದ ಸಾವಿಗೀಡಾದವರನ್ನು ಹೊಟ್ಟೆ ತುಂಬಾ ಉಣ್ಣಿಸಿ ಮತ್ತೆ ಜೀವ ತುಂಬಲಾಗುವುದೇ...??!!