ಬಾಲಿವುಡ್ ನಟಿ ಕಂಗನಾಗೆ ಕೊರೋನಾ ದೃಢ
ಕೊರೋನಾ ವೈರಸ್ ನಾಶ ಮಾಡ್ತೀನಿ ಎಂದ ನಟಿ
ಬಾಲಿವುಡ್ ನಟಿ ಕಂಗನಾ ರನಾವತ್ ಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ವಿಚಾರವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆ ಮೂಲಕ ಹಂಚಿಕೊಂಡಿದ್ದಾರೆ.
ಸದಾ ವಿವಾದಾತ್ಮಕ ಟ್ವೀಟ್ ಮೂಲಕ ಹೆಸರು ಮಾಡಿದ್ದ ಕಂಗನಾ ಪಶ್ಚಿಮ ಬಂಗಾಳ ಚುನಾವಣೆ ನಂತರ ಹಿಂಸೆಗೆ ಪ್ರಚೋದಿಸುವ ಟ್ವೀಟ್ ಮಾಡಿದ್ದರು ನಂತರ ಅವರ ಟ್ವಿಟ್ಟರ್ ಅಕೌಂಟನ್ನು ಟ್ವಿಟ್ಟರ್ ಶಾಶ್ವತವಾತಿ ಅಮಾನತ್ತು ಮಾಡದೆ ಈ ಹಿನ್ನೆಲೆ ಅವರು ತಮ್ಮ ಸದ್ಯದ ಸ್ಥಿತಿಯನ್ನು ಇನ್ಸ್ಟಾಗ್ರಾಂ ಮೂಲಕ ಹಂಚಿಕೊಂಡಿದ್ದಾರೆ.
ಕೆಲ ದಿನಗಳಿಂದ ನನಗೆ ಸುಸ್ತು ಮತ್ತು ನಿಶಕ್ತಿ ಕಾಣಿಸಿಕೊಂಡಿತ್ತು, ಕಣ್ಣಿನಲ್ಲಿ ಸ್ವಲ್ಪ ಉರಿ ಕಾಣಸಿಕೊಂಡಿತ್ತು ಆದ್ದರಿಂದ ನಿನ್ನೆ ಹಿಮಾಚಲ್ ಗೆ ಕೊರೊನಾ ಟೆಸ್ಟ್ ಮಡಿಸಿದ್ದೆ ಇಂದು ಅದರ ವರಿ ಪಾಸಿಟಿವ್ ಎಂದು ಬಂದಿದೆ ಎಂದು ಇನ್ಸ್ಟಾಗ್ರಾಂ ನಲ್ಲಿ ಬೆರದುಕೊಂಡಿದ್ದಾರೆ.
ನಾನು ಕ್ವಾರಂಟೈನ್ ಗೆ ಒಳಗಾಗಿದ್ದು, ವೈರಸ್ ನನ್ನ ದೇಹದಲ್ಲಿ ಪಾರ್ಟಿ ನಡೆಸುತ್ತದೆ ಎಂದು ನನಗೆ ತಿಳಿದಿಲ್ಲ, ನಾನು ಅದನ್ನು ನಾಶ ಮಾಡುತ್ತೇನೆ ಎಂದು ಹೇಳಿರುವ ಕಂಗನಾ, ಜನ ತನ್ನ ಮೇಲೆ ಸವಾರಿ ಮಾಡಲು ಯಾರಿಗೂ ಅವಕಾಶ ಮಾಡಿಕೊಡಬಾರದು, ನೀವು ಭಯಪಟ್ಟರೆ ಅದು ನಿಮ್ಮನ್ನು ಮತ್ತಷ್ಟು ಭಯಪಡಿಸುತ್ತದೆ. ಹಾಗಾಗಿ ಎಲ್ಲಾ ಬನ್ನಿ ಆ ವೈರಸನ್ನು ನಾಶ ಮಾಡೋಣ,ಕೋವಿಡ್ ಒಂದು ಸಣ್ಣ ಜ್ವರವಷ್ಟೇ ಅದು ಒತ್ತಡವನ್ನುಂಟು ಮಾಡಿ ಭಯಪಡಿಸುತ್ತದೆ ಎಂದು ತಿಳಿಸಿದ್ದಾರೆ.
">