ತಮಿಳುನಾಡಿನ ಸಿಎಂ ಆಗಿ ಡಿಎಂಕೆ ನಾಯಕ ಸ್ಟಾಲಿನ್ ಪ್ರಮಾಣವಚನ ಸ್ವೀಕಾರ

ಪ್ರಮಾಣವಚನ ಬೋಧಿಸಿದ ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್

 

ಚೆನ್ನೈ: ತಮಿಳುನಾಡಿದ ಮುಖ್ಯಮಂತ್ರಿಯಾಗಿ ಡಿಎಂಕೆ ನಾಯಕ ಎಂ.ಕೆ ಸ್ಟಾಲಿನ್ ಶುಕ್ರವಾರ ಬೆಳ್ಳಗ್ಗೆ ಪ್ರಮಾಣವಚ ಸ್ವೀಕಾರ ಮಾಡಿದರು. ಚೆನ್ನೈನ ರಾಜಭವನದಲ್ಲಿ ನಡೆದ ಸರಳ ಸಮರಂಭದಲ್ಲಿ ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಅವರು ಪ್ರಮಾಣವಚನ ಬೋಧಿಸಿದರು.

ತಮಿಳುನಾಡಿದ  ತಿಹಾಸದಲ್ಲೇ 68 ವರ್ಷದ ಸ್ಟಾಲಿನ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ಮೂಲಕ ಅತ್ಯಂತ ಹಿರಿಯ ವಯಸ್ಸಿನ ನಾಯಕನೋರ್ವ ಸಿಎಂ ಆಗುವ ಮೂಲಕ ತಮಿಳುನಾಡಿನ ಅಧಿಕಾರದ ಚುಕ್ಕಾಣಿ ಹಿಡಿದ್ದಿದ್ದಾರೆ. ಸ್ಟಾಲಿನ್ ಜೊತೆ 33 ಮೂರು ಶಾಸಕರು ಸಚಿವ ಸಂಪುಟ ಸಚಿವರಾಗಿ ಅಧಿಕಾರಿ ವಹಸಿಕೊಂಡಿದ್ದಾರೆ.

ಈ ಸರಳ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ, ಕಾಂಗ್ರೆಸ್ ನ ಹಿರಿಯ ನಾಯಕ ಪಿ. ಚಿದಂಬರಂ ಸರ್ಕಾರದ ಹಿರಯ ಅಧಿಕಾರಿಗಳು, ಸ್ಟಾಲಿನ್ ಅವರು ಪುತ್ರ ಉದಯನಿಧಿ ಸೇರಿದಂತೆ ಸುಮಾರು 250 ಮಂದಿ ಭಾಗಿಯಾಗಿದ್ದರು.