ಭಾರತದಲ್ಲಿ ಕೊರೋನಾಗೆ 24ಗಂಟೆಯಲ್ಲಿ ದಾಖಲೆಯ 3,780 ಬಲಿ

ಕಳೆದ 24ಗಂಟೆಯಲ್ಲಿ 3,82,315 ಕರೋನಾ ಪ್ರಕರಣ ದಾಖಲು

 

ನವದೆಹಲಿ: ಕಳೆದ 24 ಗಂಟೆಯಲ್ಲಿ 3,82,315 ಹೊಸಾ ಕರೋನಾ ಪ್ರಕರಣಗಳು ದಾಖಲಾಗಿವೆ, ದೇಶದಲ್ಲಿ ಈವರೆಗೆ ಒಟ್ಟು 2,06,65,348 ಕೊರೋನಾ ಪ್ರಕರಣಗಳು ಕಂಡುಬಂದಿದ್ದು, 34,87,229 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ 1,69,51,731 ಜನ ಕೊರೋನಾದಿಂದ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಲಯದ ದಾಖಲೆಯಿಂದ ತಿಳಿದುಬಂದಿದೆ.  

ಭಾರತದಲ್ಲಿ ಕಳೆದ 24 ಗಂಟೆಯಲ್ಲಿ ಕೊರೋನಾ ಮಹಾಮಾರಿಗೆ ದಾಖಲೆಯ 3780 ಜನ ಬಲಿಯಾಗಿದ್ದಾರೆ. ಇದರಲ್ಲಿ 891ಕ್ಕೂ ಹೆಚ್ಚು ಪ್ರಕರಣಗಳು ಮಹಾರಾಷ್ಟ್ರದಲ್ಲಿ, ದೆಹಲಿ ಮತ್ತು ಉತ್ತರಪ್ರದೇಶದಲ್ಲಿ ಕ್ರಮವಾಗಿ 338 ಮತ್ತು 351 ಕರ್ನಾಟಕ ಸೇರಿದಂತೆ 13 ರಾಜ್ಯಗಳಲ್ಲಿ 100ಕ್ಕೂ ಹೆಚ್ಚು ಕರೋನಾದಿಂದ ಸಾವಗಳು ಸಂಭವಿಸಿವೆ. ದೇಶಾದ್ಯಂತ  ಈವರೆಗೆ 2,26,188 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ.

ಮಹಾರಾಷ್ಟ್ರದಲ್ಲಿ 51,880 ಪ್ರಕರಣಗಳು ಕರ್ನಾಟಕದಲ್ಲಿ 44,631 ಪ್ರಕರಣಗಳು, ಕೇರಳದಲ್ಲಿ 37,190 ಪ್ರಕರಣಗಳು, ಉತ್ತರಪ್ರದೇಶದಲ್ಲಿ, 25,770 ಪ್ರಕರಣಗಳು, ತಮಿಳುನಾಡಿನಲ್ಲಿ 21,228 ಪ್ರಕರಣಗಳು ದಾಖಲಾಗಿವೆ. ಭಾರತದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಗಗನ ಮುಟ್ಟುತ್ತಿದೆ.