ಕೊರೋನಾ, ಬ್ಲಾಕ್ ಫಂಗಸ್ ನಂತರ ಈಗ “ವೈಟ್ ಫಂಗಸ್” ಪತ್ತೆ

ಉತ್ತರಪ್ರದೇಶದ ಮೌನಲ್ಲಿ 70 ವರ್ಷದ ವ್ಯಕ್ತಿಯಲ್ಲಿ ವೈಟ್ ಫಂಗಸ್ ಪತ್ತೆ

 

ಲಕ್ನೋ: ಕೊರೋನಾ ವೈರಸ್ ಮಹಾಮಾರಿ ಈಗಾಗಲೇ ದೇಶದಲ್ಲಿ ಲಕ್ಷಾಂತರ ಜನರನ್ನು ಬಲಿ ಪಡೆದಿದೆ. ಆನಂತರ ಬ್ಲಾಕ್ ಫಂಗಸ್ ಬಂದು ಹಲವರನ್ನು ಕಾಡ್ತಾ ಇದೆ, ಇದರ ನಡುವೆ ಭಾರತದಲ್ಲಿ ಇನ್ನೊಂದು ರೋಗ ಕಂಡುಬಂದಿದೆ.

ಉತ್ತರಪ್ರದೇಶದ ಮೌನಲ್ಲಿ ಕೊರೋನಾಗೆ ಚಿಕಿತ್ಸೆ ಪಡೆದಿದ್ದ 70 ವರ್ಷದ ವ್ಯಕ್ತಿಯಲ್ಲಿ ವೈಟ್ ಫಂಗಸ್ ಎಂಬ ಖಾಯಿಲೆ ಕಾಣಿಸಿಕೊಂಡಿದೆ ಕೋವಿಡ್ ನಿಂದ ಗುಣಮುಖರಾದವರಲ್ಲಿ ವೈಟ್ ಫಂಗಸ್ ಕಾಣಿಸಿಕೊಂಡಿರುವುದು. ಭಾರತದಲ್ಲಿ ಬಹುಶಃ ಇದೇ ಮೊದಲ ಪ್ರಕರಣ ಎಂದು ಹಳಲಾಗುತ್ತಿದೆ.

ಕೊರೋನಾ ಬಂದ ನಂತರ ದೆಹಲಿಯ ಆಸ್ಪತ್ರೆಯೊಂದರಲ್ಲಿ ದಾಖಲಾಗಿ ಏಪ್ರಿಲ್ ತಿಂಗಳಿನಲ್ಲಿ ಗುಣಮುಖರಾಗಿ ಆಸ್ಪತ್ರೆಯಿಂದ ಹೊರಬಂದಿದ್ದ 70 ವರ್ಷದ ವ್ಯಕ್ತಿಯಲ್ಲಿ ಈ ವೈಟ್ ಫಂಗಸ್ ರೋಗ ಕಾಣಿಸಿಕೊಂಡಿದೆ.

ಈ ಬಗ್ಗೆ ಇಂಡಿಯಾ ಟುಡೆ ಜೊತೆ ಮಾತನಾಡಿರುವ ವಿಟ್ರಿಯೋ ರೆಟಿನಾ ತಜ್ಞ ಕ್ಷಿತಿಜ್ ಆದಿತ್ಯಾ ಅವರು, ಕೋವಿಡ್ ನಿಂದ ಗುಣಮುಖರಾಗಲು 70 ವರ್ಷದ ವ್ಯಕ್ತಿಗೆ ನಿರಂತರ ಸ್ಟಿರಾಯ್ಡ್ಸ್ ನೀಡಿಲಾಗಿದೆ.  ಹಿನ್ನೆಲೆ ಸ್ವಲ್ಪ ದಿನಗಳ ನಂತರ ಕಣ್ಣಿನ ಒಳಗೆ ಜೆಲ್ಲಿ ರೀತಿಯ ವಸ್ತು ಕಾಣಿಸಿಕೊಂಡಿದೆ ಮತ್ತು ಅವರು ದೃಷ್ಟಿ ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಈ ರೋಗಿ ಸತತವಾಗಿ ಸ್ಟಿರಾಯ್ಡ್ಸ್ ನಲ್ಲಿದ್ದರು ಒಂದು ವಾರದ ತರುವಾಯ ಅವರ ಕಣ್ಣಿನ ಒಳಗಡೆ ಲೋಳೆ ಬೆಳವಣಿಗೆಯಾಗಿದೆ ಕ್ರಮೇಣ ಅವರು ತಮ್ಮ ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡಿದ್ದಾರೆ. ಈ ಪ್ರಕರಣ ನನ್ನ ಬಳಿಗೆ ಬಂದಾಗ ಇದು ಅಂತರ್ವಧಕ ಶಿಲೀಂಧ್ರ ಎಂಡೋಫ್ಪಲ್ಮಿತಿಸ್ ನಂತೆ ಕಾಣಸಿಕೊಂಡಿತು ಎಂದು ತಿಳಿಸಿದ್ದಾರೆ.

ಕೋವಿಡ್ ನಿಂದ ಗುಣಮುಖರಾದವರು ಸ್ಟಿರಾಯ್ಡ್ಸ್ ತೆಗೆದುಕೊಂಡವರು ಸಕ್ಕರೆ ಕಾಯಿಲೆ ಇರುವವರಲ್ಲಿ ಏನಾದರೂ ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳು ಕಣ್ಣಿನ ದೃಷ್ಟಿ ಸಮಸ್ಯೆ, ಕಣ್ಣಿನಲ್ಲಿ ನೋವು, ಬಾಧೆ, ಕಣ್ಣಿನಲ್ಲಿ ಜೆಲ್ಲಿ ಕಾಣಿಸಿಕೊಂಡರೆ ತಕ್ಷಣವೇ ಕಣ್ಣೀನ ತಜ್ಞರನ್ನು ಅದರಲ್ಲೂ ರೆಟಿನಾ ತಜ್ಞರನ್ನು ಕಾಣುವುದು ಉತ್ತಮ ಎಂದು ಡಾ. ಕ್ಷಿತಿಜ್ ತಿಳಿಸಿದ್ದಾರೆ.

ತಜ್ಞರ ಪ್ರಕಾರ, ದುರ್ಬಲ ರೋಗನಿರೋದಕ ಶಕ್ತಿ ಹೊಂದಿರುವ ಸಕ್ಕರೆ ಖಾಯಿಲೆ ಇರುವ ರೋಗಿಗಳು ಈ ವೈಟ್ ಫಂಗಸ್ ಹೆಚ್ಚು ತುತ್ತಾಗಬಹುದು, ಕಣ್ಣು, ಶ್ವಾಸಕೋಶ, ಮೆದುಳು, ಉಗುರು, ಚರ್ಮ, ಕಿಡ್ನಿ ಮತ್ತು ಖಾಸಗಿ ಭಾಗಗಳಿಗೆ ವೈಟ್ ಫಂಗಸ್ ಸುಲಭವಾಗಿ ಹರಡುವ ಸಾಧ್ಯತೆ ಇದೆ ಎಂದಿದ್ದಾರೆ.