ಕೊರೋನಾ ಸೋಂಕಿತರ ನೋವಿಗೆ ಮಿಡಿದ ‘ಯುವರತ್ನ’ ನಟ ಅರ್ಜುನ್

ಆಂಬ್ಯುಲೆನ್ಸ್ ಚಾಲಕನಾಗಿ ಸಂಕಷ್ಟದಲ್ಲಿರುವ ಸೋಂಕಿತರಿಗೆ ಸೇವೆ

 

ಕೊರೋನಾ ಮಹಾಮಾರಿಯಿಂದ ಜನ ಇನ್ನಿಲ್ಲದ ತೊಂದರೆ ಅನುಭವಿಸುತ್ತಿದ್ದಾರೆ. ಕೆಲ ಸ್ಯಾಂಡಲ್ ವುಡ್ ಸೆಲಬ್ರಿಟಿಗಳು ಸುಮ್ಮನ್ನಿದ್ದರೆ, ಕೆಲವು ಸೆಲೆಬ್ರಿಟಿಗಳು ತಮ್ಮ ಕೈಲಾದ ಸಹಾಯ ಮಾಡ್ತಾ ಇದ್ದಾರೆ. ಆದರೆ ನಟ ಅರ್ಜುನ್ ಗೌಡ ಮಾತ್ರ ಕೊರೋನಾ ಸೋಂಕಿತರಿಗೆ ವಿಭಿನ್ನವಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಯುವರತ್ನ, ಒಡೆಯ, ರುಸ್ತುಂ, ಮತ್ತು ಹಲವು ಚಲನಚಿತ್ರಗಳಲ್ಲಿ ನಟಿಸಿರುವ ನಟ ಅರ್ಜುನ್ ಗೌಡ, ಲಾಕ್ ಡೌನ್ ಸಮಯವನ್ನು ಕೋವಿಡ್ ರೋಗಿಗಳ ಸೇವೆಯಲ್ಲಿ ತೊಡಗಿಸಿಕೊಂಡದ್ದು, ತಮ್ಮ ಸುತ್ತಾಮುತ್ತ ಅಗತ್ಯವಿರುವ ಕೋವಿಡ್ ರೋಗಿಗಳ ಆಂಬ್ಯುಲೆನ್ಸ್ ಚಾಲಕರಾಗಿ ನೆರವಿಗೆ ನಿಂತಿದ್ದಾರೆ.

‘ಸ್ಮೈಲ್ ಟ್ರಸ್ಟ್’ ಎಂಬ ಯೋಜನೆ ಇಟ್ಟುಕೊಂಡು, ಸಾಂಕ್ರಮಿಕ ರೋಗಕ್ಕೆ ತುತ್ತಾಗಿ ಅಸಹಾಯಕರಾಗಿರುವವರನ್ನು ತಲುಪಿ ಅವರಿಗೆ ಸಹಾಯ ಮಾಡುವ ಉದ್ದೇಶದೊಂದಿಗೆ ತಮ್ಮ ಆಂಬ್ಯುಲೆನ್ಸ್ ಸೇವೆಯನ್ನು ನಿಸ್ಸಹಾಯಕರಿಗೆ ನೀಡುತ್ತಿದ್ದಾರೆ.

ತಮ್ಮ ಆಂಬ್ಯುಲೆನ್ಸ್ ಸೇವೆಯನ್ನು ವೈಧ್ಯಕೀಯ ಸಹಾಯ ಅಂದರೆ ಕೊರೋನಾ ರೋಗಿಗಳನ್ನು ಆಸ್ಪತ್ರೆಗೆ ಸೇರಿಸುವುದು ಮತ್ತು ಕೊರೋನಾ ರೋಗಕ್ಕೆ ಬಲಿಯಾದವರ ಮೃತದೇಹ ಅಂತಿಮ ಸಂಸ್ಕಾರ ನಡೆಸಲು ಬಳಸಲಾಗುತ್ತಿದೆ. ನಾನು ಕಳೆದ ಕೆಳೆದೆರಡು ದಿನಗಳಿಂದ ಆರು ಶವಗಳ ಅಂತಿಮ ಸಂಸ್ಕಾರಕ್ಕೆ ನೆರವಾಗಿದ್ದೇನೆ.

ಈ ರೀತಿಯ ಸೇವೆ ಈ ಸಂದರ್ಭದಲ್ಲಿ ಅತೀ ಮುಖ್ಯವಾಗಿದ್ದು, ಕೋವಿಡ್ ಸೋಂಕಿತರ ಸಹಾಯಕ್ಕೆ ಇನ್ನೂ ಹೆಚ್ಚು ಜನ ಸ್ವಯಂಸೇವಕರ ಅವಶ್ಯಕತೆ ಇದೆ. ನಾನು ಈ ಸೇವೆಯನ್ನು ಇನ್ನೆರಡು ತಿಂಗಳುಗಳ ಕಾಲ ಮುಂದುವರಿಸಲು ಸಿರ್ಧರಿಸಿದ್ದೇನೆ. ನನ್ನ ಕೈಲಾದ ಸಹಾಯವನ್ನು ಮಾಡಬೇಕೆಂದುಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.