ಆಮೀರ್ ಖಾನ್ ಮತ್ತು ಕಿರಣ್ ರಾವ್ ವಿಚ್ಛೇದನಕ್ಕೆ ನಿರ್ಧಾರ

ವಿಚ್ಛೇದನ ಕುರಿತು ಸ್ಪಷ್ಟಪಡಿಸಿದ ಆಮೀರ್ ಖಾನ್ ಮತ್ತು ಕಿರಣ್ ರಾವ್

 

ಮುಂಬೈ: ಬಾಲಿವುಡ್ ನಟ ಆಮಿರ್ ಖಾನ್ ಮತ್ತು ಕಿರಣ್ ರಾವ್ ದಂಪತಿಗಳ ದಾಂಪತ್ಯ ಜೀವನ ಅಂತ್ಯವಾಗಲಿದೆ. ಏಕೆಂದರೆ, ಆಮಿರ್ ಖಾನ್ ಮತ್ತು ಕಿರಣ್ ರಾವ್ ವಿವಾಹ ವಿಚ್ಛೇದನ ನೀಡುತ್ತಿರುವುದಾಗಿ ಜಂಟಿ ಹೇಳಿಕೆ ನೀಡುವ ಮೂಲಕ ಸ್ಪಷ್ಟಪಡಿಸಿದ್ದಾರೆ.

ಇವರ ದಾಂಪತ್ಯ ಜೀವನ ಅಂತ್ಯವಾದರೂ ಅವರಿಬ್ಬರ ಸ್ನೇಹ ಸಂಬಂಧ ಪರೋಕ್ಷವಾಗಿ ಮುಂದುವುರಿಯಲಿದೆ. ಅವರು ಮಗ ಅಜಾದ್ ನನ್ನು ಇಬ್ಬರೂ ಪೋಷಿಸುವ ಜವಾಬ್ದಾರಿಯನ್ನು ಹಂಚಿಕೊಂಡಿದ್ದು, ಸಿನೆಮಾ ಕಾರ್ಯಗಳು ಮತ್ತು ಪಾನಿ ಫಂಡೇಷನ್ ಮೂಲಕ ನಡೆಸುವ ಸಾಮಾಜಿಕ ಕಾರ್ಯಗಳನ್ನು ಜೊತೆಗೆ ನಡೆಸಿಕೊಂಡು ಹೋಗುವುದಾಗಿ ತಿಳಿಸಿದ್ದಾರೆ.

15 ವರ್ಷಗಳ ದಾಂಪತ್ಯ ಜೀವನವನ್ನು ಖುಷಿಯಾಗಿ ಕಳೆದಿದ್ದೇವೆ. ಕೆಲ ದಿನಗಳ ಹಿಂದೆ ನಾವು ವಿಚ್ಛೇದನಕ್ಕೆ ಪಡೆಯಲು ನಿರ್ಧರಿಸಿದ್ದು, ಈಗ ನಾವು ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಲಿದ್ದೇವೆ. ನಮ್ಮ ಸಂಬಂಧದಲ್ಲಿ ಆಗರುವ ಪರಿವರ್ತನೆಗೆ ನಿರಂತರ ಬೆಂಬಲ ನೀಡಿದ ಕುಟುಂಬ ವರ್ಗ ಮತ್ತು ಸ್ಹೇಹಿತ ವರ್ಗದವರಿಗೆ ಧನ್ಯವಾದ ಹೇಳಿದ್ದಾರೆ.