ಮೃಗಾಲಯಗಳ ರಕ್ಷಣೆಗೆ ನಿಂತ ದರ್ಶನ್ ಗೆ ಸಚಿವರಿಂದ ಧನ್ಯವಾದ

ಚಾಲೆಂಜಿಂಗ್ ಸ್ಟಾರ್ ಗೆ ಧನ್ಯವಾದ ತಿಳಿಸಿದ ಸಚಿವ ಅರವಿಂದ ಲಿಂಬಾವಳಿ

 

ಬೆಂಗಳೂರು: ಕೊರೋನಾ ಹಿನ್ನೆಲೆ ಸಂಕಷ್ಟಕ್ಕೆ ಸಿಲುಕಿದ ಮೃಗಾಲಯದ ರಕ್ಷಣೆಗೆ ನಿಂತ ನಟ ಚಾಲೆಂಜಿಂಗ್ ದರ್ಶನ್ ಅವರ ಮಹತ್ಕಾರ್ಯಕ್ಕೆ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಧನ್ಯವಾದ ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟ್ಟರ್ ಮೂಲಕ ವಿಡಿಯೋವೊಂದನ್ನು ಹಂಚಿಕೊಂಡಿರುವ ಸಚಿವ ಅರವಿಂದ ಲಿಂಬಾವಳಿ ಅವರು, ರಾಜ್ಯದ ಮೃಗಾಲಯಗಳ ಪ್ರಾಣಿಗಳ ಬಗ್ಗೆ ನಟ ದರ್ಶನ್ ಅವರು ವಿಶೇಷ ಪ್ರೀತಿ ಮತ್ತು ಆಸಕ್ತಿ ಹೊಂದಿದ್ದಾರೆ. ಪ್ರಾಣಿ ಪ್ರಿಯರು ಮೃಗಾಲಯದ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳಬೇಕೆಂದು ಕೊಟ್ಟ ಕರೆಗೆ ಬಾರಿ ಸ್ಪಂದನೆ ವ್ಯಕ್ತವಾಗಿದ್ದು, ಈ ವರೆಗೆ ಸುಮಾರು 40 ಲಕ್ಷ ರೂಪಾಯಿಗಳು ಸಂಗ್ರಹವಾಗಿದೆ ಎಂದು ತಿಳಿಸಿದ್ದಾರೆ.

ಕೊರೋನಾದ ಕಷ್ಟದ ಪರಿಸ್ಥಿತಿಯಲ್ಲಿ ಮನುಷ್ಯರನ್ನು ರಕ್ಷಣೆ ಮಾಡುವ ಜವಾಬ್ದಾರಿಯನ್ನು ತೆಗೆದುಕೊಂಡ ಸರ್ಕಾರಕ್ಕೆ, ಅದೇ ರೀತಿ ಪ್ರಾಣಿಗಳನ್ನು ರಕ್ಷಿಸಬೇಕೆಂದು ಹೆಚ್ಚು ಕಾಳಜಿ ವಹಿಸಿರುವ ದರ್ಶನ್ ಆವರಿಗೆ ಹೃತ್ಪೂರ್ವಕ ವಂದನೆಗಳನ್ನು ತಿಳಿಸುತ್ತೇನೆ ಎಂದು ಹೇಳಿದ್ದಾರೆ. ಹಾಗೆ, ದರ್ಶನ್ ಆವರ ಕರೆಗೆ ಓಗೊಟ್ಟು ಮುಂದೆ ಬಂದು ಪ್ರಾಣಿಗಳನ್ನು ದತ್ತು ಪಡೆದವರೆಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿರುವ ಅವರು, ಮತ್ತಷ್ಟು ಜನರಿಗೆ ಪ್ರಾಣಿಗಳನ್ನು ದತ್ತು ಪಡೆದು ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.

read this: https://kannada.newslati.com/cinema/good-response-for-darshan-call-over-animals-adoption/cid3170378.htm?fbclid=IwAR3_pHhkclPHFQ_BQXL7ZItJc5kaJ9MRk-RwvWBKIdE3DBMGK97a41BjYD4

ನಟ ದರ್ಶನ್ ಅವರು ಕೋವಿಡ್ ನಿಂದ ಮೃಗಾಲಯಗಳಲ್ಲಿರುವ ಪ್ರಾಣಿಗಳು ಸಂಕಷ್ಟಕ್ಕೆ ಸಿಲುಕಿವೆ, ಈ ಹಿನ್ನೆಲೆ ರಾಜ್ಯ ಮೃಗಾಲಯಗಳ ಪ್ರಾಣಿ ಪಕ್ಷಿಗಳನ್ನು ದತ್ತು ಪಡೆಯುವಂತೆ ಮನವಿ ಮಾಡಿದ್ದರು, ಈ ಮನವಿಗೆ ರಾಜ್ಯದೆಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ದರ್ಶನ್​ ಮನವಿ ಮಾಡಿದ ಒಂದು ದಿನದಲ್ಲೇ 29 ಲಕ್ಷ ಹಣ ಹರಿದು ಬಂದಿದ್ದು, ಮೂರು ದಿನಗಳಲ್ಲಿ 40 ಲಕ್ಷ ಸಂಗ್ರಹವಾಗಿದೆ ಎಂಬ ಮಾಹಿತಿ ಸಿಕ್ಕಿದೆ. ದರ್ಶನ್ ಮಾಡಿದ ಒಂದು ಮನವಿಯಿಂದಾಗಿ ಈಗ ಮೃಗಾಲಯಗಳು ಉಸಿರಾಡುವಂತಾಗಿದೆ.

ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ಶ್ರೀ @dasadarshan ಅವರು ರಾಜ್ಯದ ಮೃಗಾಲಯಗಳ ಪ್ರಾಣಿಗಳನ್ನು ದತ್ತು ಪಡೆಯಲು ಮತ್ತು ದೇಣಿಗೆ ಮೂಲಕ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಪ್ರಾಣಿಗಳ ಹಿತಕ್ಕಾಗಿ ಶ್ರಮಿಸುತ್ತಿರುವ ಶ್ರೀ ದರ್ಶನ್ ತೂಗದೀಪ್ ಅವರಿಗೆ ಹಾಗೂ 1/2 @aranya_kfd #ChallengingStar pic.twitter.com/TreiyjbK1U

— Aravind Limbavali (@ArvindLBJP) June 7, 2021 ">

">ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ಶ್ರೀ @dasadarshan ಅವರು ರಾಜ್ಯದ ಮೃಗಾಲಯಗಳ ಪ್ರಾಣಿಗಳನ್ನು ದತ್ತು ಪಡೆಯಲು ಮತ್ತು ದೇಣಿಗೆ ಮೂಲಕ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಪ್ರಾಣಿಗಳ ಹಿತಕ್ಕಾಗಿ ಶ್ರಮಿಸುತ್ತಿರುವ ಶ್ರೀ ದರ್ಶನ್ ತೂಗದೀಪ್ ಅವರಿಗೆ ಹಾಗೂ 1/2 @aranya_kfd #ChallengingStar pic.twitter.com/TreiyjbK1U

— Aravind Limbavali (@ArvindLBJP) June 7, 2021

https://kannada.newslati.com/cinema/actor-darshan-call-for-adopt-animals-in-zoo/cid3166095.htm?fbclid=IwAR2yw7PHRQn_33IW94TAzzWKZpDG9MgDR07iKHPCATQjzo8He5Fows2ABu4