ಕೊರೋನಾ ವಿರುದ್ಧದ ಹೋರಾಟಕ್ಕೆ ಒಂದು ಕೊಟಿ ರೂ ದೇಣಿಗೆ ನೀಡಿದ ರಜನಿ

ತಮಿಳು ಚಿತ್ರರಂಗದಿಂದ ತಮಿಳುನಾಡು ಸರ್ಕಾರಕ್ಕೆ ಭರಪೂರ ಧನ ಸಹಾಯ

 

ಚೆನ್ನೈ: ಮಹಾಮಾರಿ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ತಮಿಳು ಚಿತ್ರರಂಗ ಸಾಥ್ ನೀಡುತ್ತಿದೆ. ಕೊರೋನಾ ಹೋರಾಟಕ್ಕಾಗಿ ಕಾಲಿವುಡ್ ನಟರಿಂದ ತಮಿಳುನಾಡು ಸರ್ಕಾರಕ್ಕೆ ಧನ ಸಹಾಯ ಹರಿದು ಬರುತ್ತಿದೆ. ಇದೀಗ ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ಸಹ ಕೊರೋನಾ ವಿರುದ್ಧದ ಹೋರಾಟಕ್ಕೆ ತಮಿಳುನಾಡು ಸರ್ಕಾರಕ್ಕೆ ಜೊತೆ ಕೈಜೋಡಿಸಿದ್ದಾರೆ.  

ಕೆಲ ದಿನಗಳಿಂದ ಕಾರ್ತಿ, ಸುರ್ಯ, ಅಜಿತ್, ಎ.ಆರ್ ಮುರುಗದಾಸ್, ಶಿವಕುಮಾರ್, ಉದಯನಿಧಿ ಸ್ಟಾಲಿನ್ ಸೇರಿದಂತೆ ಹಲವು ನಟರು ಮುಖ್ಯಮಂತ್ರಿ ಪರಿಹಾರ ನಿಧಿಗೆ ಧನಸಹಾಯ ನೀಡಿದ್ದರು, ಈಗ ಸೂಪರ್ ಸ್ಟಾರ್ ರಜನಿಕಾಂತ್ ಅವರು ಒಂದು ಕೋಟಿ ರೂಪಾಯಿಗಳನ್ನು ತಮಿಳುನಾಡು ಸರ್ಕಾರಕ್ಕೆ ನೀಡಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರನ್ನು ಭೇಟಿ ಮಾಡಿರುವ ರಜನಿಕಾಂತ್ ಅವರ ಪುತ್ರಿ ಐಶ್ವರ್ಯ ಅವರು ರಜನಿಕಾಂತ್ ಅವರ ಪರವಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ಒಂದು ಕೋಟಿ ರೂಪಾಯಿಗಳನ್ನು ನಿಡಿದ್ದಾರೆ.