ನೆನಪಿನ ಹುಡುಗಿಯೇ...

ಮನವ ತೊರೆದ ಮನದರಸಿ ಹೇಗಿದ್ದೀ..? ಹೇಗಿದ್ದರೇನಂತೇ, ಹೇಳದೆ ಕೇಳದೇ ಹೊರಟವಳ ಕಥೆ ನನಗೇಕೇ ಬಿಡು.ಅದರು ಕೇಳುತ್ತಿರುವೆ ಹೇಗಿದ್ದೀ.?! ನೀ ನನ್ನ ಮನದ ಅರಮನೆ ತೊರೆದು ವರ್ಷಗಳೇ ಕಳೆದಿವೆಯಾದರು ಅಂತಃಪುರದಲ್ಲಿ ನೀನ್ನ ಹೆಸರು ಶಾಶ್ವತವಾಗಿ ಉಳಿದುಬಿಟ್ಟಿದೆ. ಯಾರು ಸಹ ಪ್ರೇವೆಶಿಸದ ಹೃದಯ ದೇಗಲುದಲ್ಲಿ ಮೊದಲು ಘಂಟೇ ನಾದ ಮೊಳಗಿಸಿದ್ದವಳೇ ನೀನು. ನಿನ್ನ ಅಗಮನ-ನಿರ್ಗಮನ ವಿಧಿಲಿಖಿತವಾದರು, ನನ್ನಲಿರುವ ನೀನು, ನೀನ್ನ ನೆನಪುಗಳು ಮಾತ್ರ ಸದಾ ಶಾಶ್ವತ.
 

ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು. ಕನಸುಗಳಿಲ್ಲದ ದಾರಿಯಲ್ಲಿ ನಡೆಯಲು ಒಂದು ಟ್ರೈ ಮಾಡಬಹುದೆನೋ, ಆದರೆ ನೆನಪೇ ಇಲ್ಲದ ದಾರಿಯಲ್ಲಿ? ಅಸಾಧ್ಯ. ಮನುಷ್ಯ ನಾಳೆಯ ಕನಸ ಕಾಣದೇ ಬೇಕಾದರೆ ಬದುಕುತ್ತಾನೆ ಆದರೆ ನಿನ್ನೆಯ ನೆನಪುಗಳಿಲ್ಲದೆ ಬದುಕಲಾರ. ಆ ನೆನಪುಗಳು ಸುಂದರವಿದ್ದಷ್ಟು ಆತ ಸುಖಿಃ. ನೀ ಕೊಟ್ಟ ನೆನಪುಗಳಿಂದ ಬದುಕೆಷ್ಟು ಸೊಗಸಾಗಿದೆರೆಂದರೆ, ಒಂದು ವೇಳೆ ನೀ ಜೊತೆಗಿದ್ದಿದ್ದರೂ, ಈ ಪರಿ ಖಷಿಯಾಗುತ್ತಿರಲಿಲ್ಲವೆನೋ.

ತ್ಯಾಗವೋ, ಅನಿವಾರ್ಯವೋ, ಸಮಯದ ಕ್ರೌರ್ಯವೋ,  ಗೋತ್ತಿಲ್ಲ. ನೀ ನನ್ನೀಂದ ದೂರಾದೆ. ನೀ ಎದ್ದು ಹೋದ ಹಾದಿಯಲ್ಲೇ ನಿನಗಾಗಿ ಅದೆಷ್ಟೇ ಕಾದು ಕೂತರು ನೀ ಮರಳಿ ಬರಲೇ ಇಲ್ಲ. ಭಾವನೆಗಳು ಬತ್ತಿಹೋದವು.. ಅಸೆಗಳು ಊರು ಬಿಟ್ಟವು..ರಾಶಿ ರಾತ್ರಿಗಳು ಕಾಯುವದರಲ್ಲೇ ಕಳೆದು ಹೋದವು.. ನೀನೀಲ್ಲದೆ ಬದುಕುವುದೇಗೇ ಎಂದಾಗ  ಜೊತೆಯಾಗಿದ್ದೇ ನಿನ್ನ ನೆನಪುಗಳು. ನೀ ನನ್ನ ತೊರೆದು ಹೋದರು, ನಿನ್ನ ನೆನಪುಗಳು ನನ್ನ ತೊರೆಯಲಿಲ್ಲ. ಗೋಡೆಗಳಿಲ್ಲದ ಅನಂತ ಬಯಲಿನಂತ ನೆನಪುಗಳಿಂದಲೇ ನಮ್ಮ ಪ್ರೇಮವನ್ನು ಜೀವಂತವಾಗಿಡಲು ಪ್ರಯತ್ನಿಸುತ್ತಿದ್ದೇನೆ.

ನೆನಪಿದೆಯಾ.. ನಿನ್ನೊಂದಿಗೆ ಕಳೆದ ಕ್ಷಣಗಳು ಅದೇಷ್ಟು ಚೆಂದವಿತ್ತು . ಪ್ರೀತಿಯ ಆ ಹಾದಿಯಲ್ಲಿ ನಡೆಯುವಾಗ ಕಾಲ ಸರಿದಿದ್ದೇ ಗೊತ್ತಾಗಲಿಲ್ಲ. ಜೊತೆಗೆ ಇದ್ದಿದ್ದಾದರು ಎಷ್ಟು ದಿನ? just ಮೂರೇ ತಿಂಗಳು! ಆದರೂ ಇರುವುದರಲ್ಲೇ ಪಟ್ಟ ಸಂತಸವೇಷ್ಷು, ಕುಣಿದಾಡಿದೆಷ್ಟು, ಕಟ್ಟಿದ ಕನಸುಗಳೆಷ್ಟು.. ನಾನಂತೂ ಅಷ್ಟೂ ಲೆಕ್ಕವಿಟ್ಟಿದ್ದೇನೆ! ನೀನು?. 

ಸ್ವಲ್ಪ ಕೋಪ, ಜಾಸ್ತಿ ಪ್ರೀತಿ, ಬೇಕಂತಲೇ ಮಾಡಿದ ಒಂದೆರಡು ಜಗಳ, ಬೇಡವಾದರು ಮಾಡಿದ ಹಲವು ಕೋಳಿ-ಜಗಳ, ರಾತ್ರಿಯೆಲ್ಲಾ ಪಿಸುಗುಡುತ್ತಿದ್ದ ಮೇಸೇಜುಗಳು, ರಾತ್ರಿ-ಹಗಲ ಕೂಡಿಸುತ್ತಿದ್ದ ಕರೆಗಳು, ಎದುರಿಗೆ ಕಿತ್ತಾಡಿ ವಾಟ್ಸಪ್ ಸ್ಟೇಟಸಿನಲ್ಲಿ ಮಾಡಿಕೊಂಡ ರಾಜಿ..ಹೀಗೇ ಪ್ರೀತೀ ಖಾತೆಯಲ್ಲಿ ಜಮಾ ಮತ್ತು ಹಿಂತಗೇತವಾಗುತ್ತಿದ್ದ ಹಲವು ಕ್ಷಣಗಳು ಅದೇಷ್ಟು ಮಜಬೂತಾಗಿತ್ತು. ನಿನ್ನೋಂದೀಗಿನ ಪ್ರತಿಕ್ಷಣವು ನನಗೆ ಅಮೂಲ್ಯವಾದದು, ಹಾಗಾಗೀ ಅವಷ್ಟನ್ನು ಜತನವಾಗಿ ನೆನಪಿನ ಖಾಜೆನೆಯಲ್ಲಿ ಶಾಶ್ವತ ಠೇವಣಿಯಾಗಿ ಜಮಾ ಮಾಡಿದ್ದೀನೀ.

ಪ್ರೀತಿ ಸೆಳತಕೇ 'ಸೋಶಿಯಲ್ ಡಿಸ್ಟೇನ್ಸ್' ಮೈಂಟೇನ್ ಮಾಡದೇ ಬೇಕಂತಲೇ ಕೂತಾಗಿನ ಸ್ಪರ್ಷ ಈಗಲೂ ಹಸಿಯಾಗಿದೆ.. ನಿನ್ನ ಕೂದಲೆಳೆಗಳ ಗುಂಪಲ್ಲಿ ನಿನ್ನ ಕಣ್ತಪಿಸಿ ನನ್ನ ಮುಂಗುರುಳು ಕದ್ದ ಕೂದಲೆಳೆಯೊಂದು ನನ್ನ  ಕಪಾಟಿನಲ್ಲಿ ಕೂತಿದೆ.. ನೀನಂದು ಮುಡಿದಿದ್ದ ಮಲ್ಲಿಗೆಯ ಒಂದು ಮೊಗ್ಗು ನನ್ನ ಜೇಬಿನಲ್ಲಿ ಇನ್ನೂ ಭದ್ರವಾಗಿದೆ.. ಸ್ಯಾಂಕೀಕೆರೆಯ ಮರಳುಗಾಡಿನ ಮೇಲೇ ನಿನ್ನ ನಗ್ನ ಪಾದಗಳು ಬೇರೂರಿದ ಮರಳ ಹಿಡಿ ನನ್ನ ಪರ್ಸಿನಲ್ಲಿ ಅಜೀವ ಸದಸ್ಯತ್ವ ಪಡೆದಿದೆ..  ನಿನ್ನ ಮುಗ್ದ ನಗುವಿನ ಒಂದು ಸ್ತಬ್ದಚಿತ್ರ ಮನದಲಿ ಅಳಿಯದ ಅಚ್ಚೇಯಾಗಿದೆ.. ವಿದಾಯವೆಂಬತೆ ಎದೆಗೇ ಒರಗಿ ಹಾಕಿದ ಕಣ್ಣ ಹನಿಗಳು.. ಎಲ್ಲವೂ  ಇವೇ. ನಿನೊಬ್ಬಳನ್ನು ಬಿಟ್ಟು!.

ಅಂದಹಾಗೇ ನನ್ನ ಪ್ರೀತಿಗೇ ಈಗ ನಿನ್ನ ಅವಶ್ಯಕತೆ ಇಲ್ಲ. ನೀ ಇಲ್ಲದೇಯೂ ನಿನ್ನ ಪ್ರೀತಿಸುವುದು ನಾನು ಕಲಿತಾಗಿದೆ. ನೀನು ಪುನಃ ಮರಳಿ ಬಾರದಿರು, ಒಂದು ವೇಳೆ ನೀ ಬಂದರೆ ಯಾವ ಅಡಚಣೆಯಿಲ್ಲದ ನದಿಯಂತೆ ಹರಿಯುತ್ತಿರುವ ನನ್ನ ಪ್ರೀತಿಗೇ ನಿನ್ನ ವಾಸ್ತವಗಳು ಅಣೆಕಟ್ಟಿನಂತೆ ಅಡ್ಡಿಯಾಗಬಹುದು. ನಾನು ಸ್ವತಂತ್ರ ಪಕ್ಷಿಯಂತೆ ಭಾನೆತ್ತರದಲ್ಲಿ ನಿನ್ನ ಪ್ರೀತಿಸುತ್ತಿದ್ದೇನೆ. ಯಾವ ಪ್ರೇಮಿಯು ಪ್ರೇಮಿಸಲಾರದಷ್ಟು.

ಈ   ಮುರಿದ ಪ್ರೀತಿ ಕೊಡುವ ಹಿತವಾದ ನೋವುಗಳಿಗೆ ಅದೇಷ್ಟೇ ಗೀಚಿದರು ಸಾಲದು ನೋಡು, ಅಷ್ಟಕ್ಕೂ ನಾ ಬರೆಯಲು ಶುರು ಮಾಡಿದ್ದೇ ನಿನ್ನಗಾಗಿ. ಕಾಲೇಜು ದಿನಗಳಲ್ಲಿ ಯಾವ ನೋಟ್ಸನ್ನೂ, ಲ್ಯಾಬ್ ರೆಕಾರ್ಡನ್ನೂ ಎಳ್ಳಷ್ಟು ಸಹನೆಯಿಟ್ಟು ಬರೆಯದ ನನ್ನಂತವನನ್ನು ಪ್ರೇಮಪತ್ರಗಳ ಅಂಕಣಕ್ಕೆ ಖಾಯಂ ಬರಹಗಾರನಾಗಿ ಮಾಡಿಬಿಟ್ಟೆಯಲ್ಲಾ.. ನಿಜಕ್ಕೂ ನಿನ್ನ ಅಪರಾಧವಾದರು ಎಂಥದ್ದು! ನಿನ್ನ ಪ್ರೇಮ ಪಾತಕಗಳಿಗೆ ಕಾನೂನಿನಲ್ಲಿ ಶಿಕ್ಷೆಗಳೇನು ಇಲ್ಲವೇ? ಹೋಗಲಿಬಿಡು ಇದ್ದರೂ ನಿನ್ನ ಕಣ್ಣಿನ ವಿರುದ್ದ ನನ್ನ ಭಾವನೆಗಳು ಸಾಕ್ಷಿ ಹೇಳಲಾರವು. 

ಗೆಳತಿ.. ನಿನ್ನ  ನಿರ್ಗಮನ ನಿರೀಕ್ಷಿತವಾದರು ನೀರೀಕ್ಷೀಸಿದಂತೆ ಇರಲಿಲ್ಲ ಎನ್ನುವ ಬೇಸರ ಸದಾ ಕಾಡುತ್ತದೆ. ಬದುಕಿನ ಬಂಡಿಯಲ್ಲಿ ಜೊತೆಯಾಗಿ ಸಾಗದಿದ್ದರು  ಪ್ರೇಮರಥದ ಸಣ್ಣ ಪಯಣವನ್ನಾದರು ನೀಡಬಹುದಿತ್ತು. ಆದರೆ,  ನೀನೂ ನನಗೂ-ನನ್ನ ಪ್ರೀತಿಗೂ 'ಸಂಭಂದವೇ' ಇಲ್ಲದ ಕಾರಣಗಳು ನೀಡಿ ನೀನೇ ಕಟ್ಟಿದ ಪ್ರೇಮಪಲ್ಲಕಿಯನ್ನು ಸಲೀಸಾಗಿ ಇಳಿದುಬಿಟ್ಟೆ!. ನೀನೇ ನನಗಿಷ್ಟವಾದ ಮೇಲೇ ನೀನ್ನ ಸರಿ-ತಪ್ಪುಗಳೆಲ್ಲ ನನ್ನಿಷ್ಟವೇ ಅಗಿತ್ತು. ಇದನ್ನರಿಯದೇ, ಜಗವ ಮರೆತಂತಿದ್ದ ನನ್ನೊಲವಿಗೆ ಒಂದೊಳ್ಳೇ ಕ್ಲೈಮ್ಯಾಕ್ಸ್ ಕೂಡ ನೀಡದೇ ಹೊರಟು ಹೋದೇಯಲ್ಲ..ಒಬ್ಬ ಪ್ರೇಮಿಯಾಗಿ ಸಾಧ್ಯವಾದಷ್ಟು ದಿನ ಜೊತೆಯಾಗಿರಬೇಕೇಂದು ಬಯಸಿದ್ದೇ ತಪ್ಪಾಯ್ತ? ಅಗಿದಾಯ್ತು ಬಿಡು ಆ ಕುರಿತು ಹೆಚ್ಚೇನೂ ದಾಖಲಿಸಲಾರೆ. ಕೆಲ ದಿನಗಳಿಗಾದರು ನನ್ನ ಗೆಳತಿಯಾಗಿದ್ದಕ್ಕೆ ಧನ್ಯವಾದಗಳನ್ನು ಸಲ್ಲಿಸುವೇ!. ಕೊನೇ ಸಾಲು..

ನೆನಪಿನ ಹುಡುಗಿಯೇ..
ಕೊನೆಯಲಿ ನುಡಿಯುವೆ
ಕೇಳಿಬಿಡು ಸರಿಯಾಗಿ..
ಕನಸಿನ ಕೆಲಸವು
ಮುಗಿದರು ಅನುವೆನು
ನಾ ನಿನ್ನ ಅನುರಾಗಿ..
ಈ ಮುಗಿಯದ ಕಥೆಯಲ್ಲಿ
ಮೊದಲ ಸಾಲು ನನದೆ
ಕೊನೆ ಸಾಲು ಕೂಡ ನನದೆ..
ನಿಂದೇನಿದೆ?

ಇಂತಿ ನೀನು ಕರೆವಂತೆ,
'ಡುಮ್ಮ'

ರೂಪೇಶ್ ಸುಮ್ಮನೆ.