ಕದನ ಕೂಪದಲ್ಲಿ ಕನ್ನಡಿಗ ಸಾವು: ನವೀನ್ ಸಾವಿಗೆ ಮೋದಿ,ಬೊಮ್ಮಾಯಿ ಸಂತಾಪ: ಮೃತದೇಹ ಹೊತ್ತು ತರುವುದೇ ಅನುಮಾನ?

ನವೀನ್ ಸಾವಿನ ಬೆನ್ನಲ್ಲೇ ಉಕ್ರೇನಿನಲ್ಲಿ ಸಿಲುಕಿರುವ ಸಾವಿರಾರು ಭಾರತೀಯರು ಅತಂಕಕ್ಕೀಡಾಗಿದ್ದು, ಜೀವ ಭಯದಲ್ಲಿದ್ದಾರೆ. ಈ ಮಧ್ಯೆ ನವೀನ್  ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ಕೇಂದ್ರ ಮತ್ತು ರಾಜ್ಯ ಸರ್ಕಾರ  ಪ್ರಯತ್ನಿಸುತ್ತಿದ್ದು. ನವೀನ್ ಮೃತಪಟ್ಟ ಸ್ಥಳ ಸಂಘರ್ಷ ಪೀಡೀತ ಪ್ರದೇಶವಾಗೀದ್ದು, ರಷ್ಯಾ ಸೈನಿಕರು
 

ರಷ್ಯಾದ ಶೆಲ್ ದಾಳಿಗೆ ಹಾವೇರಿಯ ನವೀನ್ ಸಾವು..

ಅಹಾರ ತರಲು ಸೂಪರ್ ಮಾರ್ಕೆಟ್ ಗೆ ಹೋದಾಗ ರಷ್ಯಾ ಪಡೆಗಳಿಂದ ಶೆಲ್ ದಾಳಿ, ಸ್ಥಳದಲ್ಲೆ ಸಾವು..

ಮೃತ ನವೀನ್ ಪೋಷಕರಿಗೆ ಪ್ರಧಾನಿ ಮೋದಿ, ಬೊಮ್ಮಯಿ, ಮಾಜಿ ಸಿಎಂ ಬಿ.ಎಸ್ ವೈ ದೂರವಾಣಿ ಕರೆ..

ನವೀನ್ ಮೃತಪಟ್ಟ ಸ್ಥಳ ಅಕ್ರಮಿಸಿರುವ ರಷ್ಯಾ ಪಡೆ ಮೃತದೇಹ ತರುವುದೆ ಅನುಮಾನ?..
 
ಇಂದು ದಾಳಿ ಮತ್ತಷ್ಟು ತೀವ್ರಗೊಳಿಸಿದ ರಷ್ಯಾ ಸೇನೇ, ಟಿವಿ ಟವರ್  ದ್ವಂಸ ಉಕ್ರೇನಿನ ಎಲ್ಲಾ ಮಾಧ್ಯಮಗಳು ಸ್ಥಗಿತ!

ರಷ್ಯಾದ ಶೆಲ್ ದಾಳಿಯಿಂದ ಉಕ್ರೇನಿನಲ್ಲಿ ಕರ್ನಾಟಕದ ವಿದ್ಯಾರ್ಥಿ ನವೀನ್ ಶೇಖರಪ್ಪ(21) ಮೃತಪಟ್ಟಿದ್ದಾರೆ.  ಹಾವೇರಿ ಜಿಲ್ಲೆಯ ನವೀನ್ ಶೇಖರಪ್ಪ ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಯಾಗಿದ್ದು, ಮಂಗಳವಾರ ಬೆಳಗ್ಗೆ ಅಹಾರ ತರಲೆಂದು ಹತ್ತಿರದ ಸೂಪರ್ ಮಾರ್ಕೆಟ್ ಗೆ ತೆರಳಿದಾಗ ರಷ್ಯಾ ಪಡೆಗಳಿಂದ ಶೆಲ್ ಬಾಂಬ್ ದಾಳಿ ನಡೆದು ನವೀನ್ ಸ್ಥಳದಲ್ಲೆ ಸಾವನಪ್ಪಿದ್ದಾನೆ.


ಈ ಕುರಿತು ವಿದೇಶಾಂಗ ಸಚಿವಾಲಯ ಟ್ವೀಟ್ ಮಾಡಿದ್ದು, "ಖಾರ್ಕಿವ್‌ನಲ್ಲಿ ಭಾರತೀಯ ವಿದ್ಯಾರ್ಥಿ ನವೀನ್ ಶೆಲ್ ದಾಳಿಯಲ್ಲಿ ಸಾವನ್ನಪ್ಪಿದ್ದಾನೆ. ನಾವು ತೀವ್ರ ದುಃಖದಿಂದ ಇದನ್ನು ದೃಢೀಕರಿಸುತ್ತೇವೆ. ಸಚಿವಾಲಯವು ಅವರ ಕುಟುಂಬದ ಸಂಪರ್ಕದಲ್ಲಿದೆ. ನಾವು ಕುಟುಂಬಕ್ಕೆ ನಮ್ಮ ಸಂತಾಪವನ್ನು ತಿಳಿಸುತ್ತೇವೆ" ಎಂದು ಹೇಳಿದೆ.


ಇನ್ನೂ, ಮೃತ ನವೀನ್ ಪೋಷಕರೊಂದಿಗೆ ಪ್ರಧಾನಿ ಮೋದಿ, ಸಿಎಂ ಬಸವರಾಜ ಬೊಮ್ಮಯಿ, ಮಾಜಿ ಸಿಎಂ ಬಿ.ಎಸ್ ವೈ ದೂರವಾಣಿ ಕರೆ ಮಾಡಿ ಮಾತನಾಡಿದ್ದರೆ. "ಇದು .. ದೊಡ್ಡ ಹೊಡೆತ. ನವೀನ್ ಅತ್ಮಕ್ಕೆ  ದೇವರು ಚಿರಶಾಂತಿ ದಯಪಾಲಿಸಲಿ. ದುಖಃವನ್ನು  ಸಹಿಸಿಕೊಳ್ಳುವ ಧೈರ್ಯವನ್ನು ನೀವು ತೊರಬೇಕು" ಎಂದು ದುಃಖಿತ ನವೀನ್ ತಂದೆ ಶೇಖರಪ್ಪಗೆ ಸಿಎಂ ಬೊಮ್ಮಾಯಿ ಸಾಂತ್ವನ ಹೇಳಿದ್ದಾರೆ.


ನವೀನ್ ಸಾವಿನ ಬೆನ್ನಲ್ಲೇ ಉಕ್ರೇನಿನಲ್ಲಿ ಸಿಲುಕಿರುವ ಸಾವಿರಾರು ಭಾರತೀಯರು ಅತಂಕಕ್ಕೀಡಾಗಿದ್ದು, ಜೀವ ಭಯದಲ್ಲಿದ್ದಾರೆ. ಈ ಮಧ್ಯೆ ನವೀನ್  ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ಕೇಂದ್ರ ಮತ್ತು ರಾಜ್ಯ ಸರ್ಕಾರ  ಪ್ರಯತ್ನಿಸುತ್ತಿದ್ದು. ನವೀನ್ ಮೃತಪಟ್ಟ ಸ್ಥಳ ಸಂಘರ್ಷ ಪೀಡೀತ ಪ್ರದೇಶವಾಗೀದ್ದು, ರಷ್ಯಾ ಸೈನಿಕರು ಈಗಾಗಲೇ ಈ ಪ್ರದೇಶವನ್ನು ಅಕ್ರಮಿಸಿರುವ ಕಾರಣ ಮೃತದೇಹ ತರವದು ಬಹುತೇಕ ಅನುಮಾನ ಎನ್ನಲಾಗುತ್ತಿದೆ.ಈ ಮಧ್ಯೇ, 7 ದಿನವಾದ ಇಂದು ರಷ್ಯಾ ತನ್ನ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದೆ. ಖಾರ್ಕೀವ್ ನಗರದಲ್ಲಿರುವ ಟಿವಿ ಟವರ್ ಅನ್ನು ರಷ್ಯಾ ಪಡೆಗಳು ದ್ವಂಸಗೊಳಿಸಿದ್ದು ಉಕ್ರೇನಿನ ಎಲ್ಲಾ ಮಾಧ್ಯಮಗಳು ಸ್ಥಗಿತಗೊಂಡಿವೆ.