ರಷ್ಯಾದೊಂದಿಗೆ ಶಾಂತಿ ಮಾತುಕತೆ ನಡೆಸಲು ಕೊನೆಗೂ ಒಪ್ಪಿದ ಉಕ್ರೇನ್!

ಪರಮಾಣು ನಿರೋಧಕ ಪಡೆ "ಯುದ್ಧ ಕರ್ತವ್ಯದ ವಿಶೇಷ ಆಡಳಿತ"ವನ್ನು ನೇಮಿಸುವಂತೆ ಪುಟಿನ್ ರಷ್ಯಾದ ರಕ್ಷಣಾ ಮಂತ್ರಿ ಮತ್ತು ಮಿಲಿಟರಿಯ ಜನರಲ್ ಸ್ಟಾಫ್ ಮುಖ್ಯಸ್ಥರಿಗೆ ಆದೇಶಿಸಿರುವುದು ತೀವ್ರ ಅತಂಕಕ್ಕೆ ಕಾರಣವಾಗಿದೆ.ಉಕ್ರೇನ್‌ ಸಂಘರ್ಷವು ಪರಮಾಣು ಶಸ್ತ್ರಾಸ್ತ್ರಗಳ ಬಳಕೆಗೆ ಕಾರಣವಾಗಬಹುದು
 

* ರಷ್ಯಾದೊಂದಿಗೆ ಶಾಂತಿ ಮಾತುಕತೆಗೆ  ಉಕ್ರೇನ್ ಅಧ್ಯಕ್ಷ  ವೊಲೊಡಿಮಿರ್ ಝೆಲೆನ್ಸ್ಕಿ ಒಪ್ಪಿಗೆ!

* * ಪ್ರಿಪ್ಯಾಟ್ ನದಿಯ ಸಮೀಪವಿರುವ ಉಕ್ರೇನ್-ಬೆಲರೂಸಿ ಗಡಿಯಲ್ಲಿ ಪೂರ್ವಾಪೇಕ್ಷಿತಗಳಿಲ್ಲದೆ ಉಕ್ರೇನನ್ ನಿಯೋಗವು ರಷ್ಯಾದ ನಿಯೋಗವನ್ನು ಭೇಟಿ!

* ಪರಮಾಣು ನಿರೋಧಕ ಪಡೆ ನೇಮಿಸುವಂತೆ ರಷ್ಯಾ ಅಧ್ಯಕ್ಷ ಪುಟಿನ್ ಸೂಚನೆ!

ರಷ್ಯಾದೊಂದಿಗೆ ಶಾಂತಿ ಮಾತುಕತೆ ನಡೆಸಲು ಕೊನೆಗೂ ಉಕ್ರೇನ್ ಅಧ್ಯಕ್ಷ  ವೊಲೊಡಿಮಿರ್ ಝೆಲೆನ್ಸ್ಕಿ ಒಪ್ಪಿಕೊಂಡಿದ್ದಾರೆ.ಪ್ರಿಪ್ಯಾಟ್ ನದಿಯ ಬಳಿ ಬೆಲರೂಸಿ-ಉಕ್ರೇನ್ ಗಡಿಯಲ್ಲಿ ಸಭೆಗೆ ಸ್ಥಳ ಗುರುತಿಸಲಾಗಿದ್ದು, ಉಕ್ರೇನ್ ನಿಯೋಗವನ್ನು ಕಳುಹಿಸಲು ಅಧ್ಯಕ್ಷ ಝೆಲೆನ್ಸ್ಕಿ ಒಪ್ಪಿದ್ದಾರೆ ಎಂದು ಅವರ ಕಛೇರಿ ಮೂಲಗಳು ತಿಳಿಸಿವೆ.
ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿದ ನಂತರ ಮೊದಲ ಬಾರಿಗೆ ಮಾತುಕತೆ ನಡೆಯುತ್ತಿದ್ದು ಜಗತ್ತಿನೆಲ್ಲೆಡೆ ತೀವ್ರ ಕುತೂಹಲ ಕೆರಳಿಸಿದೆ. ಪೂರ್ವಾಪೇಕ್ಷಿತಗಳಿಲ್ಲದೆ ಮಾತುಕತೆ ನಡೆಸಲಾಗುವುದು ಎಂದು ಉಕ್ರೇನ್ ತಿಳಿಸಿದೆ.  "ಪ್ರಿಪ್ಯಾಟ್ ನದಿಯ ಸಮೀಪವಿರುವ ಉಕ್ರೇನ್-ಬೆಲರೂಸಿ ಗಡಿಯಲ್ಲಿ ಪೂರ್ವಾಪೇಕ್ಷಿತಗಳಿಲ್ಲದೆ ಉಕ್ರೇನಿಯನ್ ನಿಯೋಗವು ರಷ್ಯಾದ ನಿಯೋಗವನ್ನು ಭೇಟಿಯಾಗಲಿದೆ" ಎಂದು ಅಧ್ಯಕ್ಷ ಝೆಲೆನ್ಸ್ಕಿ ತಮ್ಮ ಮಾಧ್ಯಮಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ಈ ಮಧ್ಯೆ ಪರಮಾಣು ನಿರೋಧಕ ಪಡೆ "ಯುದ್ಧ ಕರ್ತವ್ಯದ ವಿಶೇಷ ಆಡಳಿತ"ವನ್ನು ನೇಮಿಸುವಂತೆ ಪುಟಿನ್ ರಷ್ಯಾದ ರಕ್ಷಣಾ ಮಂತ್ರಿ ಮತ್ತು ಮಿಲಿಟರಿಯ ಜನರಲ್ ಸ್ಟಾಫ್ ಮುಖ್ಯಸ್ಥರಿಗೆ ಆದೇಶಿಸಿರುವುದು ತೀವ್ರ ಅತಂಕಕ್ಕೆ ಕಾರಣವಾಗಿದೆ.ಉಕ್ರೇನ್‌ ಸಂಘರ್ಷವು ಪರಮಾಣು ಶಸ್ತ್ರಾಸ್ತ್ರಗಳ ಬಳಕೆಗೆ ಕಾರಣವಾಗಬಹುದು ಎಂಬ ಬೆದರಿಕೆಯನ್ನು ಈ ಆದೇಶವು ಹುಟ್ಟುಹಾಕಿದೆ.
ಇನ್ನೊಂದೆಡೆ, ಭಾನುವಾರ ಉಕ್ರೇನ್ ರಕ್ಷಣಾ  ಪಡೆಗಳು ಉಕ್ರೇನ್‌ನ ಎರಡನೇ ಅತಿದೊಡ್ಡ ನಗರ ಖಾರ್ಕಿವ್ ಅನ್ನು ವಶಪಡಿಸಿಕೊಳ್ಳುವ ರಷ್ಯಾದ ಪ್ರಯತ್ನವನ್ನು ಹಿಮ್ಮೆಟ್ಟಿಸಿದೆ ಎಂದು ಖಾರ್ಕಿವ್ ನಗರದ ಗವರ್ನರ್ ಹೇಳಿದ್ದಾರೆ. ರಷ್ಯಾವನ್ನು ಹಿಮ್ಮೆಟಿಸುವಲ್ಲಿ ಸಕಲ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಇವೆರೆಗೂ ರಷ್ಯಾದ 4300 ಯೋಧರನ್ನು ಕೊಲ್ಲಲಾಗಿದ್ದು. ಶತ್ರು ರಾಷ್ಟದೆದರು ಮಂಡಿಯುರುವ ಮಾತಿಲ್ಲ ಎಂದಿದ್ದಾರೆ.