'ಬೇಗುನ್ ಕೊಡರ್ ರೈಲ್ವೆ ಜಂಕ್ಷನ್ ಹಾಗೂ ದೆವ್ವ !'

ಅಲ್ಲಿನ ನಿವಾಸಿಗಳು ರೈಲು ಹಿಡಿಯಬೇಕೆಂದರೆ 25-30 ಕಿಲೋ ಮೀಟರು ಮುಂದೆ ಹೋಗಿ ಇಲ್ಲವೆ ಪುರುಲಿಯಾ ಜಿಲ್ಲೆಗೇ ಹೋಗಿ ಟ್ರೇನ್ ಹಿಡಿಯಬೇಕಿತ್ತು.. ಊರಿನ ಜನ ಸಂಕಷ್ಟದಿಂದಾಗಿ ಬೇಸತ್ತು ಹೋಗಿದ್ದರು

 

1962 ಹೊತ್ತಿಗೆ ಶುರುವಾದ ರೈಲ್ವೆ 1967 ರಲ್ಲಿ ನಿಗೂಢ ಕಾರಣಗಳ ಅಡಿ ತನ್ನ ಕಾರ್ಯ ಚಟುವಟಿಕೆಯನ್ನ ನಿಲ್ಲಿಸಬೇಕಾಯ್ತು

* 1962 ರಲ್ಲಿ ಇಲ್ಲಿ ಮೊದಲ ಬಾರಿಗೆ ಇದು ಚಾಲೂ ಆದಾಗ ಊರಿನ ಜನರ ಸಂತಸಕ್ಕೆ ಪಾರವೇ ಇರಲಿಲ್ಲ.

*ದಿನವೂ ಸಂಜೆ ಮೇಲೆ ರೈಲು ಬರುವ ಹೊತ್ತಿಗೆ ಸರಿಯಾಗಿ ಆಕೆಯ ದರ್ಶನವಾಗ್ತಿತ್ತು

ಬಹಳಷ್ಟು ಜನ ಭಾರತೀಯರ ಮನಸ್ಥಿತಿ ಹೇಗೆಂದರೆ ಒಂದಷ್ಟು ಜನ ಯಾವುದನ್ನ ನಂಬುತ್ತಾರೋ ಅದೇ ನಿಜ ಅಥವಾ ವಾಸ್ತವ ಎಂದು ತಾವೂ ಸಹ ಅದರ ಸತ್ಯಾಸತ್ಯತೆ ಅರಿಯದೆ ನಂಬುವುದು

ಇದಕ್ಕೆ ಪೂರಕವಾದ ವಿಷಯವೊಂದನ್ನ ಇಂದಿನ ಲೇಖನದಲ್ಲಿ ನಿಮ್ಮಮುಂದಿಡಲಿದ್ದೇನೆ.. ನಮ್ಮ ಇಂದಿನ ಕಥಾ ವಸ್ತು ಒಂದು ರೈಲ್ವೆ ನಿಲ್ದಾಣ ! ರೈಲ್ವೆ ನಿಲ್ದಾಣದ ಬಗ್ಗೆ ಹೆಚ್ಚಿಗಿನ್ನೇನು ವಿಶೇಷತೆ ಇರಲು ಸಾಧ್ಯ ಎಂದುಕೊಳ್ಳಬೇಡಿ

ಇದು ಉಳಿದ ಸಾಮಾನ್ಯ ರೇಲ್ವೆ ತಾಣಗಳ ಹಾಗಲ್ಲ.. ಇದರ ಹಿನ್ನೆಲೆ ಹಾಗೂ ಕತೆಯೇ ಬೇರೆ.. ಇದಕ್ಕಾಗಿ ನಾನು ನಿಮ್ಮನ್ನು ಪಶ್ಚಿಮ ಬಂಗಾಳದ ಪುರೂಲಿಯಾ ಜಿಲ್ಲೆಗೆ ಕರೆದೊಯ್ಯಬೇಕಾಗುತ್ತದೆ

ಇಲ್ಲಿನ ಝಾಲ್ಡಾ ಎಂಬ ನಗರದಲ್ಲಿರುವ ಬೇಗುನ್ ಕೊಡರ್ ರೈಲ್ವೆ ಜಂಕ್ಷನ್ ಇವತ್ತಿನ ಲೇಖನದ ಹೈಲೈಟ್.. ಇದು ಭಾರತದ ಹಳೆಯ ರೇಲ್ವೆ ತಾಣಗಳಲ್ಲೊಂದು.. 1962 ಹೊತ್ತಿಗೆ ಶುರುವಾದ ರೈಲ್ವೆ 1967 ರಲ್ಲಿ ನಿಗೂಢ ಕಾರಣಗಳ ಅಡಿ ತನ್ನ ಕಾರ್ಯ ಚಟುವಟಿಕೆಯನ್ನ ನಿಲ್ಲಿಸಬೇಕಾಯ್ತು

ಹಾಗೆ ಅದು ಮುಚ್ಚಲ್ಪಟ್ಟಿದ್ದು ಎಷ್ಟು ವರ್ಷ ಗೊತ್ತೆ ? ಬರೋಬ್ಬರಿ ಮುಂದಿನ 42 ವರ್ಷಗಳವರೆಗೆ ! ಅರೆ, ಇದನ್ನೇಕೆ ಅಷ್ಟು ವರ್ಷ ಮುಚ್ಚಿದರು ಎಂದು ನೀವು ಕೇಳಬಹುದು

ಅದಕ್ಕೆ ಕಾರಣ ಒಬ್ಬ ಮಹಿಳೆ ! ಕೇವಲ ಒಂದು ಹೆಣ್ಣಿನಿಂದ ರೈಲ್ವೆ ಸ್ಥಗಿತಗೊಂಡಿತೆ ? ಹೌದು, ಹಾಗೆ ಮುಚ್ಚಲ್ಪಟ್ಟ ರೇಲ್ವೆ ಪುನಃ ಅಲ್ಲಿನ ಸರ್ಕಾರಗಳ ಪ್ರಯತ್ನದಿಂದ 2009 ರಲ್ಲಿ ಚಾಲೂ ಆಯ್ತು

ಆದರೆ ತಾಣವನ್ನ ಬಳಸಲು ಅಲ್ಲನ ಜನ ಹೆದರುತ್ತಾರೆ ! ಅಲ್ಲಿ ಕೆಲಸ ಮಾಡಲು ಯಾವ ಸಿಬ್ಬಂದಿಯೂ ಧೈರ್ಯ ತೋರುವುದೆ ಇಲ್ಲ‌‌.. ಇದು ಸರ್ಕಾರದ ದೃಷ್ಟಿಯಲ್ಲಿ ಚಾಲೂ ಆಗಿದ್ದರೂ ಯಾರೂ ಪ್ಲಾಟ್ ಫಾರ್ಮ್ ಬಳಸುವುದೆ ಇಲ್ಲ‌.. ಅಲ್ಲಿ ಯಾರೂ ರೈಲನ್ನ ಹತ್ತುವುದೂ ಇಲ್ಲ.. ಸ್ಥಳದಲ್ಲಿ ಇಳಿಯುವುದೂ ಇಲ್ಲ ! ಹೀಗಾಗಿ ಇದು ಮರು ಚಾಲನೆ ಪಡೆದರೂ ಸಹ ಜಂಕ್ಷನ್ ಖಾಲಿಯೆ ಬಿದ್ದಿರುತ್ತದೆ

ಜನ ಏಕೆ ಹೀಗೆ ಹಿಂದೇಟು ಹಾಕುತ್ತಾರೆ ? ಅವರಿಗೆಲ್ಲ ಏಕೆ ಭಯ ? ಅವರ ಭಯಕ್ಕೆ ಕಾರಣ ಮಹಿಳೆ ! ಯಾರಾ ಮಹಿಳೆ ? ಏನೀ ರೈಲ್ವೆ ಜಂಕ್ಷನ್ ಕತೆ.. ಬನ್ನಿ ಅದರ ಸುತ್ತ ಇರುವ ಒಂದಷ್ಟು ರೋಚಕ ವಿವರವನ್ನ ತಿಳಿಯುತ್ತಾ ಹೋಗೋಣ

ಇಲ್ಲಿನ ಝಾಲ್ಡಾ ಎಂಬುದು ಈಗಲು ಸಹ ಪಶ್ಚಿಮ ಬಂಗಾಳದ ಒಂದು ಸಾಧಾರಣ ಟೌನ್.. ಅಲ್ಲಿ ಮೊದಲಿಂದಲು ಅನೇಕ ಟ್ರೇನುಗಳು ಸಂಚರಿಸುತ್ತಲೇ ಇವೆ.. ಏಕೆಂದರೆ ಇದು ಝಾರ್ಖಂಡ್ ಹಾಗೂ ಕೊಲ್ಕತಾಗಳನ್ನು ಬೆಸೆಯುವ ಪ್ರಮುಖ ರೈಲ್ವೆ ಲೈನ್

ಪುರುಲಿಯಾ ಜಿಲ್ಲೆಯಲ್ಲಿ ಬೇಗುನ್ ಕೊಡರ್ಪ ಗ್ರಾಮವು ಜಿಲ್ಲೆಯ ಹೃದಯಭಾಗದಿಂದ ಸುಮಾರು 35-40 ಕಿಲೋ ಮೀಟರು ದೂರದಲ್ಲಿರೊ ಒಂದು ಕುಗ್ರಾಮ.. 1960 ಸುಮಾರಿನಲ್ಲಿ ಊರಲ್ಲಿ ಯಾವ ರೇಲ್ವೆ ನಿಲ್ದಾಣವೂ ಸಹ ಇರಲಿಲ್ಲ.. ಅಲ್ಲಿ ರೇಲ್ವೆ ಲೇನ್ ಇತ್ತಾದರೂ ನಿಲ್ದಾಣ ಬಹಳ ದೂರ ಇತ್ತು‌..

ಅಲ್ಲಿನ ನಿವಾಸಿಗಳು ರೈಲು ಹಿಡಿಯಬೇಕೆಂದರೆ 25-30 ಕಿಲೋ ಮೀಟರು ಮುಂದೆ ಹೋಗಿ ಇಲ್ಲವೆ ಪುರುಲಿಯಾ ಜಿಲ್ಲೆಗೇ ಹೋಗಿ ಟ್ರೇನ್ ಹಿಡಿಯಬೇಕಿತ್ತು.. ಊರಿನ ಜನ ಸಂಕಷ್ಟದಿಂದಾಗಿ ಬೇಸತ್ತು ಹೋಗಿದ್ದರು

ಇಲ್ಲಿಯೇ ಒಂದು ನಿಲ್ದಾಣ ಮಾಡಿದರೆ ಎಷ್ಟೊ ಜನಕ್ಕೆ ಅನುಕೂಲವಾಗುತ್ತದೆ ಎಂದು ಅವರು ಚರ್ಚಿಸಿದರು.. ಇದು ಕ್ರಮೇಣ ಒಬ್ಬರಿಂದ ಒಬ್ಬರ ಬಾಯಲ್ಲಿ ಹರಡಿ ಕಡೆಗೆ ಮೇಲಿನ ಅಧಿಕಾರಿಗಳ ಗಮನಕ್ಕು ಸಹ ಬಂತು

ಊರಿನ ಜನ ಒಕ್ಕೂರಲಿನಿಂದ ಇಟ್ಟಿದ್ದ ಬೇಡಿಕೆಗೆ ಸರ್ಕಾರದಿಂದಲು ಬೇಗನೆ ಗ್ರೀನ್ ಸಿಗ್ನಲ್ ಸಿಕ್ಕಿತು.. 1960 ಆರಂಭದಲ್ಲಿ ಇಲ್ಲಿನಜಂಕ್ಷನ್ ನಿರ್ಮಾಣ ಕಾರ್ಯ ಶುರುವಾಯ್ತು.. ಎರಡೇ ವರ್ಷಗಳಲ್ಲಿ ಅಂದರೆ 1962 ಸಮಯಕ್ಕೆ ರೈಲ್ವೆ ಜಂಕ್ಷನ್ ಕಾರ್ಯ ಪೂರ್ಣವಾಗಿ ಅದೇ ವರ್ಷ ಅಲ್ಲಿ ಪುಟ್ಟ ಪ್ಲಾಟ್ ಫಾರ್ಮ್ ನಿರ್ಮಾಣವಾಗುತ್ತೆ

ಅದೇನೂ ದೊಡ್ಡ ಮಟ್ಟದ ಪ್ಲಾಟ್ ಫಾರ್ಮ್ ಅಲ್ಲದಿದ್ದರೂ ಅಂದಿಗೆ ಹಳ್ಳಿಯಲ್ಲಿ ಒಂದು ತಕ್ಕ ಮಟ್ಟಿಗೆ ಸ್ಥಾಪಿತವಾಗಿದ್ದ ರೈಲ್ವೆ ತಂಗುದಾಣ.. ಅಲ್ಲಿ ಒಂದು ಟಿಕೇಟ್ ಕೌಂಟರ್, ಒಂದು ವೈಟಿಂಗ್ ಹಾಲ್ ಮತ್ತು ರೈಲ್ವೆ ಮಾಸ್ಟರ್ ಗಾಗಿ ಒಂದು ಸಣ್ಣ ಕ್ವಾರ್ಟರ್ಸ್ ಅನ್ನುಪ ವ್ಯವಸ್ಥೆ ಮಾಡಲಾಗಿತ್ತು

ಅದು ಸಣ್ಣ ಹಳ್ಳಿಯಾಗಿದ್ದರಿಂದ ತಂಗುದಾಣ ಅದಕ್ಕೆ ಸರಿ ಹೊಂದುವಂತಿತ್ತು.. 1962 ರಲ್ಲಿ ಇಲ್ಲಿ ಮೊದಲ ಬಾರಿಗೆ ಇದು ಚಾಲೂ ಆದಾಗ ಊರಿನ ಜನರ ಸಂತಸಕ್ಕೆ ಪಾರವೇ ಇರಲಿಲ್ಲ.. ರೈಲಿಗಾಗಿ ಅವರು ಹಲವು ಮೈಲು ದೂರ ಹೋಗಿ ಕ್ಯಾಚ್ ಮಾಡುವ ಕಷ್ಟ ಅವರಿಗೆ ತಪ್ಪಿತ್ತು

ಬೇಗುನ್ ಕೊಡರ್ ಜನ ತಮ್ಮ ಊರಿಂದಲೆ ರೈಲು ಸಂಚಾರ ಮಾಡಲಾರಂಭಿಸಿದರು.. 1962 ರಿಂದ 1967 ರವರೆಗೆ ಎಲ್ಲವೂ ಸುಗಮವಾಗಿಯೆ ಇತ್ತು

1967 ರಲ್ಲಿ ಮೋಹನ್ ಎಂಬ ಹೆಸರಿನ ಸ್ಟೇಷನ್ ಮಾಸ್ಟರ್ ಒಬ್ಬರು ಊರಿಗೆ ವರ್ಗವಾಗುತ್ತಾರೆ.. ದೂರದ ಊರಿಂದ ಅಲ್ಲಿಗೆ ಪೋಸ್ಟಿಂಗ್ ಆಗಿದ್ದ ಮೋಹನ್ ಅಲ್ಲಿಯೆ ಇದ್ದ ಸರ್ಕಾರಿ ಕ್ವಾರ್ಟರ್ಸ್ ನಲ್ಲಿ ಒಬ್ಬರೇ ಇರುತ್ತಿದ್ದರು.‌. ಒಮ್ಮೆ ಸಂಜೆಯ ಸಮಯ.. ಸೂರ್ಯಾಸ್ತ ಮುಗಿದ ನಂತರ ಅಲ್ಲಿ ಮೋಹನ್ ಗೆ ಓರ್ವ ಸ್ತ್ರೀ ಓಡುತ್ತಿರುವುದು ತನ್ನ ಗಮನಕ್ಕೆ ಬರುತ್ತದೆ

ಆಕೆ ರೈಲು ಹಳಿಯ ಮೇಲೇ ಓಡುತ್ತಿದ್ದಳು.. ಆಕೆ ಕಾಣಿಸುವ ಸ್ವಲ್ಪ ಹೊತ್ತು ಮುಂಚೆ ತಾನೆ ಅದರ ಮೇಲೆ ರೈಲು ಸಾಗಿತ್ತು.. ಯಾರೊ ಪ್ರಯಾಣಿಕರು ರೈಲು ಮಿಸ್ ಮಾಡಿಕೊಂಡಿರಬೇಕು ಹಾಗಾಗಿಯೇ ಅದರ ಹಿಂದೆ ಓಡುತ್ತಿದ್ದಾರೆಂದು ಮೋಹನ್ ಭಾವಿಸಿ ಸುಮ್ಮನಾಗ್ತಾರೆ.. ಅವರು ಅಲ್ಲಿನ ಸ್ಟೇಷನ್ ಮಾಸ್ಟರ್ ಆಗಿದ್ದರಿಂದ ಇಂತಹ ದೃಶ್ಯಗಳು ಅವರಿಗೆ ಹೊಸವೇನಾಗಿರಲಿಲ್ಲ

ಮರು ದಿನ ಸಂಜೆ ಮೋಹನ್ ಅದೇ ಹೆಣ್ಣನ್ನಪುನಃ ಅದೇ ಹಳಿಯ ಮೇಲೆ ಓಡುತ್ತಿರುವಾಗ ಕಂಡರು ! ಯುವತಿ ಓಡುತ್ತಿದ್ದುದು ಅವರಿಗೆ ಸ್ಪಷ್ಟವಾಗಿ ಕಾಣಿಸುತ್ತಿತ್ತು‌.. ಅಚ್ಚರಿಯ ಸಂಗತಿಯೆಂದರೆ ಬಾರಿ ರೈಲು ಆಕೆಯ ಪಕ್ಕದಲ್ಲೆ ಕೊಂಚ ವೇಗದಲ್ಲಿ ಚಲಿಸುತ್ತಿತ್ತು.. ಅದರ ಸರಿಸಮಕ್ಕೇ ಓಡ್ತಿದ್ದ ಯುವತಿ ರೈಲನ್ನ ಹತ್ತಲು ಮುಂದಾಗಲಿಲ್ಲ.. ! ಆಕೆಗೆ ಬಹುಶಃ ರೈಲಿನೊಳಗೆ ಹೋಗುವ ಹಂಬಲವೇನು ಇದ್ದಂತೆ ತೋರಲಿಲ್ಲ..

ಆದರೂ ಏಕೆ ರೈಲಿನ ಪಕ್ಕದಲ್ಲಿ ಓಡುತ್ತಿದ್ದಾಳೆ ಎಂದು ಮೋಹನ್ ಯೋಚಿಸಿದರು.. ಯಾರೊ ತಲೆ ಕೆಟ್ಟಿವರಿರಬೇಕು ಇಲ್ಲವೆ ಯಾರೊ ರೈಲು ಬಂದಾಗ ಸುಮ್ಮನೆ ಜೋಶ್ ಗಾಗಿ ಹೀಗೆ ಮಕ್ಕಳಾಟ ಆಡುತ್ತಿರಬಹುದೆಂದು ಸಲವೂ ಮೋಹನ್ ಅಲಕ್ಷ್ಯ ತೋರಿದರು

ಮೂರನೇ ದಿನವೂ ಸಹ ಹೆಚ್ಚೂ ಕಡಿಮೆ ಅದೇ ಸಮಯಕ್ಕೆ ಅದೇ ಯುವತಿ ಹಳಿಯ ಮೇಲೆ ಓಡುತ್ತಿದ್ದುದು ಪುನಃ ಮೋಹನ್ ಕಣ್ಣಿಗೆ ಬಿತ್ತು ! ಸಲ ಆಕೆ ಯಾರೆಂದು ಬಳಿ ಸಾರುತ್ತಿದ್ದಂತೆ ಮೋಹನ್ ಗೆ ಅಚ್ಚರಿಯಾಗುವಂತೆ ಅಪರಿಚಿತ ಯುವತಿ ಅಲ್ಲಿ ಹಾದು ಹೋಗುತ್ತಿದ್ದ ರೈಲಿಗಿಂತಲೂ ವೇಗವಾಗಿ ತಾನು ಓಡಿ ಕತ್ತಲಲ್ಲೆಲ್ಲೊ ಮರೆಯಾಗಿ ಹೋದಳು !

ಮೋಹನ್ ಬಾರಿ ಸ್ವಲ್ಪ ತಲೆ ಕೆಡಿಸಿಕೊಂಡ.. ಆತನಿಗೆ ಯಾರು ಈಕೆ ? ಏಕೆ ರೈಲು ಬರುವ ಸಮಯದಲ್ಲೆ ಹಳಿಯ ಬಳಿ ಓಡುತ್ತಾಳೆ ? ಎಂದು ಅರ್ಥವೇ ಆಗಲಿಲ್ಲ

ಆತ ತಕ್ಷಣವೇ ಮರುದಿನ ಇದನ್ನ ತನ್ನ ಸಹಪಾಠಿಗಳಿಗೆ ಹಾಗೂ ಊರಿನ ಒಂದಷ್ಟು ಜನರಿಗೆ ತಿಳಿಸಿದ ಕೂಡ.. ಅಷ್ಟೆ ಅಲ್ಲದೆ ಬೆಳಗ್ಗೆ ಆತ ಸ್ಟೇಷನ್ ಸುತ್ತಾ ಮುತ್ತಾ ಮಹಿಳೆಗಾಗಿ ಹುಡುಕಾಟ ನಡೆಸಿದ.. ಆದರೆ ಆತನಿಗೆ ಎಲ್ಲು ಸಹ ಆಕೆಯ ಸುಳಿವೆ ಸಿಗುವುದಿಲ್ಲ

ದಿನ ಸಂಜೆ ಸೂರ್ಯ ಮುಳುಗಿ ಕತ್ತಲಾದಾಗ ಪುನಃ ಅದೇ ಸಮಯಕ್ಕೆ ಯುವತಿ ಪುನಃ ಪ್ರತ್ಯಕ್ಷಳಾದಳು.. ಮೋಹನ್ ಆಕೆಗಾಗಿಯೇ ಕಾದಿದ್ದವನು ಆಕೆ ಓಡುವುದನ್ನೇ ಹಿಂಬಾಲಿಸಿ ನೋಡಿದ.. ಬಾರಿ ಆಕೆ ರೈಲಿಗಿಂತಲೂ ವೇಗವಾಗಿ ಓಡಿ ರೈಲನ್ನೇ ಹಿಂದಿಕ್ಕಿ ಕತ್ತಲಲ್ಲಿ ಮರೆಯಾದಳು !

ರೈಲಿನ ವೇಗವನ್ನೇ ಹಿಂದಿಕ್ಕಬೇಕಾದರೆ ಆಕೆ ಓರ್ವ ಅಥ್ಲೀಟೆ ಆಗಿರಬೇಕು ! ಮೋಹನ್ ಇಡೀ ದೃಶ್ಯದಿಂದ ಆಶ್ಚರ್ಯಚಕಿತನಾದ..‌ ಹಾಗೂ ಬೆಳಗ್ಗೆ ಆತ ಇದನ್ನ ಯಥಾವತ್ ಮತ್ತೊಮ್ಮೆ ಊರ ಜನರಿಗೆ ವಿವರಿಸಿದ

ಆದರೆ ಆತನ ವಿವರಣೆಯನ್ನ ಯಾರೂ ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ .. ಹಾಗೂ ಅದೇ ಸಂಜೆ ಮತ್ತೆ ಅದೇ ಸಮಯಕ್ಕೆ ಅದೇ ದೃಶ್ಯ ಮರುಕಳಿಸಿತು.. ರೈಲು ಬರೋ ಸಮಯಕ್ಕೆ ಸರಿಯಾಗಿ ಯುವತಿ ಅದೆಲ್ಲಿಂದಲೊ ಕೂಡಲೆ ಹಳಿಯ ಬಳಿ ಕಾಣಿಸುತ್ತಿದ್ದಳು

ರೈಲು ಬರುವವರೆಗು ಆಕೆ ಕಾಣಿಸುತ್ತಿರಲಿಲ್ಲ.. ದಿನವೂ ಸಂಜೆ ಮೇಲೆ ರೈಲು ಬರುವ ಹೊತ್ತಿಗೆ ಸರಿಯಾಗಿ ಆಕೆಯ ದರ್ಶನವಾಗ್ತಿತ್ತು.. ಇದು ದಿನವೂ ತಪ್ಪದೆ ಮೋಹನ್ ಗೆ ಕಾಣಿಸುತ್ತಿದ್ದ ದೃಶ್ಯ.. ಆತ ದಿನವೂ ತನಗಾದ ಅನುಭವವನ್ನ ಅಲ್ಲಿನ ಜನಕ್ಕೆ ಹೇಳುತ್ತಲೇ ಇದ್ದ.. ಇದಾಗಿ ಒಂದು ದಿನ ಆತ ಸಾವನ್ನಪ್ಪುತ್ತಾನೆ

ಆತನ ಸ್ಥಾನಕ್ಕೆ ಇನ್ನೊಬ್ಬ ಸ್ಟೇಷನ್ ಮಾಸ್ಟರ್ ಬರುತ್ತಾರೆ.. ಆಶ್ಚರ್ಯವೆಂದರೆ ಅವರಿಗೂ ಸಹ ಮೋಹನ್ ಗೆ ಆದ ಅನುಭವವೇ ಆಗುತ್ತದೆ.. ಇದನ್ನ ಅವರೂ ಸಹ ಜನರಿಗೆ ತಿಳಿಸುತ್ತಾರೆ.. ಆಗ ಜನ ಹಿಂದೆ ಇದ್ದ ಮೋಹನ್ ಎಂಬುವವರಿಗು ಇಂತದ್ದೆ ಅನುಭವ ಆದ ಬಗ್ಗೆ ಅವರಿಗೆ ತಿಳಿಸುತ್ತಾರೆ

ಆಗ ಅವರಿಗೆ ಇನ್ನಷ್ಟು ಗಾಬರಿಯೇ ಆಗುತ್ತದೆ.. ಸ್ಥಳ ಅಷ್ಟು ಸುರಕ್ಷಿತವಲ್ಲ ಎಂದು ಅವರೂ ಸಹ ಸರ್ಕಾರಕ್ಕೆ ಅರ್ಜಿ ಬರೆಯುತ್ತಾರೆ ತನಗೆ ಬೇರೆಲ್ಲಿಗಾದರೂ ವರ್ಗ ಮಾಡಿ ಊರು ಬೇಡ ಎಂದು.. ಅವರು ಬೇರೆಡೆಗೆ ಟ್ರಾನ್ಸ್ ಫರ್ ಆದಾಗ ಅಲ್ಲಿಗೆ ಮತ್ತೊಬ್ಬರನ್ನ ನೇಮಿಸಲಾಗುತ್ತೆ

ಆದರೆ ಅವರಿಗು ಸಹ ಮತ್ತದೇ ಅನುಭವ.. ಅಲ್ಲಿಗೆ ಬರುತ್ತಿದ್ದ ಪ್ರತಿ ಸ್ಟೇಷನ್ ಮಾಸ್ಟರ್ ಗು ಸಹ ಇದೇ ಅನುಭವ ರಿಪೀಟ್ ಆಗುತ್ತಿತ್ತು.. ಕೊನೆಗೆ ಅಲ್ಲಿ ಹಿಂದಿನ ಮಾಸ್ಟರ್ ಗಳು ಪಟ್ಟ ಫಜೀತಿಯ ಬಗ್ಗೆ ಎಲ್ಲರಿಗು ತಿಳಿದು ಅಲ್ಲಿ ಕೆಲಸ ಮಾಡಲು ಯಾರೂ ಸಹ ಮುಂದೆ ಬರುವುದೆ ಇಲ್ಲ.. ಪೋಸ್ಟಿಂಗ್ ಆದವರು ಒಂದೊ ಕೆಲಸ ಬಿಡುತ್ತಿದ್ದರು ಇಲ್ಲವೆ ಬೇರೆ ಕಡೆಗೆ ಸ್ಥಳಾಂತರವಾಗುತ್ತಿದ್ದರು

ಮೂಲಕ ಜಾಗದ ಬಗ್ಗೆ ಅನೇಕ ವದಂತಿಗಳು, ಕತೆಗಳು, ನಂಬಿಕೆಗಳು ಬೆಳೆದವು.. ಅದರಲ್ಲು ನಮ್ಮ ಭಾರತದ ಹಳ್ಳಿಗಳೆಂದರೆ ಕೇಳಬೇಕೆ.. ಇಂತಹ ಕತೆಗಳನ್ನ ಯಾರೆ ಒಬ್ಬರು ಕಟ್ಟಿದರು ಸಾಕು ಒಬ್ಬರಿಂದ ಇನ್ನೊಬ್ಬರ ಕಿವಿಗೆ ಹರಿದಾಡಿ ಕತೆಗಳ ಸರಮಾಲೆಯೇ ಸೃಷ್ಟಿಯಾಗಿ ಬಿಡುತ್ತದೆ

ಅದೇ ರೀತಿ ಇಲ್ಲಿಯೂ ಆಯ್ತು.. ಸ್ಟೇಷನ್ ಮಾಸ್ಟರ್ ಗಳ ಅನುಭವಗಳ ಜತೆ ಅಲ್ಲಿನ ಜನರೂ ಸಹ ಇಲ್ಲಿ ನಾವು ಯುವತಿಯನ್ನ ನೋಡಿದ್ದಾಗಿ, ಆಕೆ ಓಡುತ್ತಿದ್ದ ಹಾಗೆ, ಪ್ಲಾಟ್ ಫಾರ್ಮ್ ಬಳಿ ನೃತ್ಯ ಮಾಡುತ್ತಿದ್ದ ಹಾಗೆ ಹಲವು ಸಲ ತಮಗೆ ಕಂಡಿರುವುದಾಗಿ ಅಲ್ಲಿನ ಅನೇಕ ಸ್ಥಳೀಯರೆ ಕ್ರಮೇಣ ವರದಿ ಮಾಡಲು ಶುರು ಮಾಡಿದರು

ಅಲ್ಲೊಂದು ಮರವಿದೆ ಅಲ್ಲಿಯೇ ಆಕೆ ಇರುವುದು ಎಂದೂ, ಮರದಿಂದ ಆಕೆ ಕೆಳಗಿಳಿಯುವ ಹಾಗೂ ಮೇಲೇರುವುದನ್ನ ಹಲವು ಬಾರಿ ನೋಡಿದ್ದಾಗಿಯು ಜನ ರಿಪೋರ್ಟ್ ಮಾಡಿದರು

ಇದರಿಂದ ಓಹೊ ಇಲ್ಲಿ ಯಾರದೊ ದೆವ್ವ ಇದೆ.. ಪಿಶಾಚಿಯಿದೆ.. ಅಲ್ಲಿರುವವರನ್ನ ಅದು ಕಾಡುತ್ತದೆ ಎಂಬ ಭಾವನೆಗಳು ಜಾಗದ ಸುತ್ತ ಬೆಳೆದು ಜನ ತಾಣವನ್ನ ಬಳಸುವುದಿರಲಿ ಅಲ್ಲಿ ಓಡಾಡುವುದನ್ನೂ ಸಹ ನಿಲ್ಲಿಸಿದರು.. ಸ್ಟೇಷನ್ ಮಾಸ್ಟರ್ ಆಗಲಿ ಜನರಾಗಲಿ ಇಲ್ಲದ ಸ್ಥಳದಲ್ಲಿ ಸಂಚರಿಸುವ ರೈಲುಗಳೂ ಸಹ ಅಲ್ಲಿ ಸ್ಟಾಪ್ ಮಾಡದೆ ಓಡಾಡಲಾರಂಭಿಸಿದವು

ಅಲ್ಲಿ ಕೆಲಸ ಮಾಡಲಾಗಲೀ, ಅಲ್ಲಿ ತಂಗಲಾಗಲೀ ಯಾರೂ ಸಹ ಮುಂದೆ ಬಾರದೆ ಹೋದಾಗ ಸುದ್ದಿ ಮುಂದೆ ಕೊಲ್ಕತಾದ ಮೇಲಧಿಕಾರಿಗಳಿಗು ಸಹ ತಲುಪಿತು.. ಎಷ್ಟೇ ಸೌಲಭ್ಯ ಕೊಟ್ಟರೂ ಅಹ ಯಾರೂ ಅಲ್ಲಿ ಕೆಲಸ ಮಾಡಲು ಇಚ್ಛಿಸಲಿಲ್ಲ.. ಕೆಲಸವನ್ನಾದರೂ ಬಿಡ್ತೀವಿ ಆದರೆ ಇಲ್ಲಿ ಇರುವುದಿಲ್ಲ ಎಂಬುದು ಎಲ್ಲರ ಅಭಿಪ್ರಾಯವಾಗಿತ್ತು

ಹೀಗಾಗಿ ಅಲ್ಲಿ ಸ್ಟೇಷನ್ ಮಾಸ್ಟರ್, ಸಿಗ್ನಲ್ ಮ್ಯಾನ್, ಲೇನ್ ಮ್ಯಾನ್, ಟಿಕೇಟ್ ಕಲೆಕ್ಟರ್ ಹೀಗೆ ಎಲ್ಲರೂ ಮಾಯವಾಗ್ತಾ ಹೋದರು.. ಅಷ್ಟೇ ಏಕೆ ಯಾರಿಗಾಗಿ ಸ್ಟೇಷನ್ ನಿರ್ಮಿಸಲಾಗಿತ್ತೊ ಜನರೆ ಇಲ್ಲಿಗೆ ಬರಲು ನಿರಾಕರಿಸಿದರು !

ಅಂತಿಮವಾಗಿ 1967 ರಲ್ಲಿ ಇಂಡಿಯನ್ ರೈಲ್ವೆ ಬೇಗುನ್ ಕೊಡರ್ ಜಂಕ್ಷನ್ ಕಾರ್ಯ ಚಟುವಟಿಕೆಯನ್ನ ನಿಲ್ಲಿಸಿತು.. ತನ್ನ ರೆಕಾರ್ಡ್ ಬುಕ್ ನಲ್ಲಿ ಅದು ಏತಕ್ಕೆ ಇದನ್ನ ಮುಚ್ಚಲಾಗಿದೆ ಎಂದು ಕಾರಣ ಕೊಡಲೇಬೇಕಿತ್ತು.. ಭಾರತೀಯ ರೈಲ್ವೆ ಇದ್ದ ಸಂಗತಿಯನ್ನೇ ದಾಖಲಿಸಿತು..

ಈಗಲು ಸಹ ಜಂಕ್ಷನ್ ಸ್ಥಗಿತಗೊಳ್ಳಲು ಅಲ್ಲಿನ ಜನ ಹಾಗೂ ಕೆಲಸಗಾರರು ವರದಿ ಮಾಡಿದ ಅಪರಿಚಿತ ಯುವತಿ ಹಾಗೂ ಆಕೆಯ ಉಪಟಳವೇ ಕಾರಣ ಎಂದು ಸರ್ಕಾರೀ ದಾಖಲೆಗಳಲ್ಲಿ ನಮೂದಾಗಿರುವುದನ್ನ ನೀವು ಗಮನಿಸಬಹುದು !

ಯಾವ ಜನ ತಮಗೆ ನಿಲ್ದಾಣವೊಂದರ ಅವಶ್ಯಕತೆ ಇದೆಯೆಂದು ಸರ್ಕಾರಕ್ಕೆ ಒತ್ತಡ ತಂದು ನಿರ್ಮಿಸಿಕೊಂಡಿದ್ದರೊ ಜನರಿಗೇ ಈಗ ತಾಣ ಬೇಡವಾಗಿತ್ತು ! ಅವರು ಕಷ್ಟವಾದರೂ ಸರಿ ಎಂದು ಕಿಲೋ ಮೀಟರು ಗಟ್ಟಲೆ ದೂರ ಹೋಗಿಯೇ ರೈಲು ಹಿಡಿಯುತ್ತಿದ್ದರು.. ಮೂಲಕ ಹಳೆ ಪರಂಪರೆಯೇ ಪುನಃ ಆರಂಭವಾಗಿ ಹೊಸ ನಿಲ್ದಾಣ ಜನರಿಲ್ಲದೆ ಖಾಲಿ ಬಿತ್ತು

ಸರ್ಕಾರವೇ ಆತ್ಮದ ಕತೆಯನ್ನ ನಿಜ ಎಂದು ನಮೂದಿಸಿ ಜಂಕ್ಷನ್ನನ್ನು ಅಧಿಕೃತವಾಗಿ 1967 ಬ್ಯಾನ್ ಮಾಡಿತು.. ಟ್ರೇನು ಸ್ಥಳದಲ್ಲಿ ನಿಲ್ಲುತ್ತಲೇ ಇರಲಿಲ್ಲ‌.. ಅದೇ ಊರಲ್ಲಿ ಇಳಿಯಬೇಕಾದವರು ಬಹಳ ಹಿಂದೆಯೇ ಇಳಿಯುತ್ತಿದ್ದರು.. ಇಲ್ಲವೆ ಬಹಳವೆ ಮುಂದೆ ಹೋಗಿ ಇಳಿಯುತ್ತಿದ್ದರು..

ನಿಲ್ದಾಣದ ದೆವ್ವದ ಕತೆ ಹಬ್ಬುತ್ತಾ ಹೋದಂತೆ ಟ್ರೈನು ಚಾಲಕರೂ ಸಹ ಸ್ಥಳ ಇನ್ನೂ ದೂರ ಇದ್ದಂತೆಯೇ ತಮ್ಮ ವಾಹನದ ವೇಗವನ್ನ ಹೆಚ್ಚು ಮಾಡಿಕೊಂಡು ಹೋಗುತ್ತಿದ್ದರು.. ಬೇಗುನ್ ಕೊಡರ್ ಜಂಕ್ಷನ್ ಬರುತ್ತಿದ್ದ ಹಾಗೇ ರೈಲಿನೊಳಗಿನ ಪ್ರಯಾಣಿಕರೆಲ್ಲ ತಂತಮ್ಮ ಬೋಗಿಯ ಕಿಟಕಿಗಳನ್ನ ಭಯಕ್ಕೆ ಭದ್ರ ಪಡಿಸಿಕೊಳ್ಳುತ್ತಿದ್ರು

ಇದೇ ನಿತ್ಯದ ದಿನಚರಿಯಾಗಿ ಹೋಯ್ತು.. ಇದೇ ರೀತಿ ಐದು ವರ್ಷ ಹತ್ತು ವರ್ಷ ಕಳೆದು ಹೋಯ್ತು.. ನಾಲ್ಕು ದಶಕಗಳೇ ಉರುಳಿ ಹೋದವು.. ಬೇಗುನ್ ಕೊಡರ್ ಜಂಕ್ಷನ್ ಕಡೆ ಯಾರೂ ತಲೆ ಕೂಡ ಹಾಕಲಿಲ್ಲ

2007 ರಲ್ಲಿ ಇದು ಮರು ಚಾಲೂ ಆಗಬೇಕೆಂಬ ಚರ್ಚೆಗಳು ನಡೆದವು.. 2009 ರಲ್ಲಿ ಮಮತಾ ಬ್ಯಾನರ್ಜಿಯವರು ಪಶ್ಚಿಮ ಬಂಗಾಳದ ರೈಲ್ವೆ ಅಧಿಕಾರಿಯಾಗಿದ್ದಾಗ ಅವರು ಜಂಕ್ಷನ್ ಮರು ಶುರು ಮಾಡುವಂತೆ ಆದೇಶಿಸಿದರು

ಅವರ ಪ್ರಯತ್ನಗಳ ಮೇರೆಗೆ ಅಂತೂ 42 ವರ್ಷಗಳ ಬಳಿಕ ಬೇಗುನ್ ಕೊಡರ್ ಜಂಕ್ಷನ್ ಚಾಲೂ ಆಯ್ತು.. ಆದರೆ ಜನರ ಮನಸ್ಥಿತಿಯೇನು ಬದಲಾಗಲಿಲ್ಲ.. ಅದನ್ನ ಬಳಸಲು ಜನ ಈಗಲು ಹಿಂಜರಿಯುತ್ತಾರೆ

2009-10 ಆರಂಭದಲ್ಲಿ ಜನ ಜಂಕ್ಷನ್ ಕಡೆ ಓಡಾಡಲಿಲ್ಲ.. ಆದರೆ ಕ್ರಮೇಣ ನಿಧಾನವಾಗಿ ಒಬ್ಬೊಬ್ಬರೇ ಅಲ್ಲಿಗೆ ಬರಲಾರಂಭಿಸಿದರು.. ಈಗಲೂ ಸಹ ಇಲ್ಲಿ ಸಂಜೆ ಐದರ ಮೇಲೆ ಇಲ್ಲಿ ಸುತ್ತ ಮುತ್ತ ಯಾರೂ ಓಡಾಡುವುದಿಲ್ಲ

ಹಾಗಾದರೆ ಇಲ್ಲಿ ದೆವ್ವ ಇರೋದು ನಿಜವಾ ? 2011 ರಲ್ಲಿ ಕೊಲ್ಕತ್ತಾದ ಪ್ಯಾರಾನಾರ್ಮಲ್ ಸೊಸೈಟಿಯ ಟೀಮ್ ಒಂದು ವದಂತಿಯ ಸತ್ಯಾಸತ್ಯತೆಯನ್ನ ಪರಿಶೀಲಿಸಲು ತನ್ನ ತಂಡದೊಟ್ಟಿಗೆ ಬೇಗುನ್ ಕೊಡರ್ ಗೆ ಬಂದಿಳಿಯಿತು.. ಅವರ ಬಳಿ ಕೇಟೊಮೀಟರ್, ಕೆಮೆರಾ ಮುಂತಾದ ಉಪಕರಣಗಳೂ ಇದ್ದವು

ಕೇಟೊಮೀಟರ್ ಎಂದರೆ ವಾತಾವರಣದ ನೆಗೆಟಿವ್ ಎನರ್ಜಿಯ ಇರುವಿಕೆಯನ್ನ ಗ್ರಹಿಸಿ ಸೂಚಿಸುವ ಒಂದು ಯಂತ್ರ.. ಅವರು ರಾತ್ರಿ ಉಳಿದಾಗ ಯಾರೊ ಹಿಂಬದಿಯಲ್ಲಿ ಕೂಗಿದ ಹಾಗೆ ಭಾಸವಾಯ್ತು.. ಯಾರೆಂದು ನೋಡಿದಾಗ ಯಾರೊ ಮಸುಗು ಧರಿಸಿದ್ದವರ ಗುಂಪೊಂದು ಅಲ್ಲಿ ಇದ್ದದ್ದು ತಂಡದವರ ಗಮನಕ್ಕೆ ಬರುತ್ತದೆ

ಊರಿನವರೆ ಯಾರೊ ತಮ್ಮನ್ನು ಹೆದರಿಸಲು ಯತ್ನಿಸಿದರು ಎಂದು ತಂಡವು ಹೇಳಿತಲ್ಲದೆ ಅಲ್ಲಿ ಯಾವ ವಿಧದ ಸಮಸ್ಯೆಯೂ ತಮಗೆ ಗೋಚರಿಸಲಿಲ್ಲ ಎಂದು ಸ್ಪಷ್ಟಪಡಿಸಿತು

ಅದು ಚಾಲೂ ಆಗಿ 12 ವರ್ಷಗಳೆ ಆಗಿ ಹೋಗಿದ್ದರೂ ಸಹ ಜನ ಈಗಲು ಭಯದ ನೆರಳಲ್ಲೆ ಜೀವಿಸುತ್ತಿದ್ದಾರೆ.. ಬೇಗುನ್ ಕೊಡರ್ ರೈಲ್ವೆ ತಾಣವು ಭಾರತದ ಹತ್ತು ಹಾಂಟೆಡ್ ರೈಲು ದಾಣಗಳಲ್ಲಿ ಒಂದಾಗಿ ಸ್ಥಾನ ಪಡೆದಿದೆ..

ಬಹುಶಃ ಜನರ ಮನಸ್ಥಿತಿ ಬದಲಾದ ಕಾಲಕ್ಕೆ ಸ್ಥಳದ ಸುತ್ತ ಇರುವ ಕಳಂಕ ಮರೆಯಾಗಬಲ್ಲುದೇನೊ ! ಕಾದು ನೋಡಬೇಕು