ಚತ್ತೀಸ್ ಗಡದಲ್ಲಿ 800 ಕೆಜಿ ಹಸುವಿನ ಸಗಣಿ ಕಳ್ಳತನ
ಪ್ರಕರಣ ದಾಖಲಿಸಿಕೊಂಡ ಪೊಲೀಸರು
Jun 21, 2021, 13:00 IST
ಕೊರ್ಬಾ, ಚತ್ತೀಸ್ ಗಡ: ಚತ್ತೀಸ್ ಗಡ ರಾಜ್ಯದ ಕೊರಬಾ ಜಿಲ್ಲೆಯ ಪೊಲೀಸರು ಹಳ್ಳಿಯೊಂದರಲ್ಲಿ ಗೋವಿನ ಸಗಣಿ ಕಳ್ಳತನವಾಗಿದೆ ಎಂಬ ಅಸಮಾನ್ಯ ಘಟನೆ ಸಂಬಂಧ ಪ್ರಕರಣವೊಂದನ್ನು ದಾಖಲಿಸಿದ್ದಾರೆ.
ಸುಮಾರು 800 ಕೆಜಿ ತೂಕದ ಸುಮಾರು 1,600 ರೂಪಾಯಿ ಬೆಲೆ ಬಾಳುವ ಹಸುವಿನ ಸಗಣಿಯನ್ನು ದಿನಾಂಕ ಜೂನ್ 08 ಮತ್ತು 09 ರಾತ್ರಿ ಹಳ್ಳಿಯಲ್ಲಿ ಕಳ್ಳತನ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಜೂನ್ 15 ರಂದು ಗೌತಾನ್ ಸಮಿತಿ ಗ್ರಾಮದ ಮುಖ್ಯಸ್ಥರಾದ ಕಮ್ಹಾನ್ ಸಿಂಗ್ ಕನ್ವರ್ ಎಂಬುವವರು ದೂರು ನೀಡಿದ್ದಾರೆ. ಈ ಸಂಬಂಧ ವ್ಯಕ್ತಿಯೋರ್ವನ ವಿರುದ್ಧ ಪ್ರಕರಣ ದಾಖಲಾಗಿದೆ. ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ಹರೀಶ್ ತಂಡೇಕರ್ ಹೇಳಿದ್ದಾರೆ.
ಚತ್ತೀಸ್ ಗಡ ಸರ್ಕಾರ ಗೋಧನ್ ನ್ಯಾಯ್ ಯೋಜನೆಯ ಮೂಲಕ ರಡುರೂಪಾಯಿಗೆ ಒಂದು ಕೆಜಿ ಗೋ ಸಗಣಿಯನ್ನು ಖರೀದಿಸಿ ಗೌತನ್ ಗಳಲ್ಲಿ ಗೊಬ್ಬರ ಮಾಡಲು ಬಳಸುತ್ತಿದ್ದು, ಇದರಿಂದ ಅಲ್ಲಿ ಗೋ ಸಗಣಿಗೆ ಡಿಮ್ಯಾಂಡ್ ಕ್ರಿಯೇಟ್ ಆಗಿದೆ.