ರಾಮ್ ದೇವ್ ವಿರುದ್ಧ 1000ಕೋಟಿ ರೂ. ಮಾನನಷ್ಟ ಮೊಕದ್ದಮೆ.!

ಮಾನ ನಷ್ಟ ಮೊಕದ್ದಮೆ ದಾಖಲಿಸಿದ ಉತ್ತರಾಖಂಡ್ ಇಂಡಿಯನ್ ಮೆಡಿಕಲ್ ಅಶೋಷಿಯೇಷನ್

 

ಕೋವಿಡ್-19 ಅಲೋಪತಿಕ್ ವೈದ್ಯಕೀಯ ಚಿಕಿತ್ಸೆಯನ್ನು ಅವಹೇಳನ ಮಾಡಿದ್ದ ಯೋಗ ಗುರು ಬಾಬಾ ರಾಮ್ ದೇವ್ ವಿರುದ್ಧ ಉತ್ತರಾಖಂಡ್ ನ ಇಂಡಿಯನ್ ಮೆಡಿಕಲ್ ಅಶೋಷಿಯೇಷನ್ ವಿಭಾಗ 1000 ಕೋಟಿ ಮಾನನಷ್ಟ ಮೊಕದ್ದಮೆ ದಾಖಲಿಸಿ ಸೊಟೀಸ್ ಜಾರಿ ಮಾಡಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

ಅಲೋಪತಿಕ್ ವೈದ್ಯಕೀಯ ಚಿಕಿತ್ಸೆಯನ್ನು ಅವಹೇಳನಕ್ಕೆ ಸಂಬಂಧಿಸಿದಂತೆ ಬಾಬಾ ರಾಮ್ ದೇವ್ ಇನ್ನು ಅದಿನೈದು ದಿನಗಳ ಒಳಗಾಗಿ ಕ್ಷಮಾಪಣೆ ಕೇಳಬೇಕು. ಇಲ್ಲದಿದ್ದರೆ, 1000 ಕೋಟಿ ರೂಪಾಯಿಗಳ ಮಾನ ನಷ್ಟ ಭರಿಸಬೇಕಾಗುತ್ತದೆ ಎಂದು ಉತ್ತರಾಖಂಡ್ ನ ಇಂಡಿಯನ್ ಮೆಡಿಕಲ್ ಅಶೋಷಿಯೇಷನ್ ಹೇಳಿದೆ.

ಹಾಗೆ ಉತ್ತರಾಖಂಡ್ ಮುಖ್ಯಮಂತ್ರಿ ತಿರಥ್ ಸಿಂಗ್ ರಾವತ್ ಅವರಿಗೆ ಪತ್ರ ಬರೆದಿರುವ ಉತ್ತರಾಂಚಲದ ಇಂಡಿಯನ್ ಮೆಡಿಕಲ್ ಅಶೋಷಿಯೇಷನ್ ರಾಮ್ ದೇವ್ ಅವರ ಹೇಳಿಕೆ ಆಲೋಪತಿ ವೈದ್ಯರ ವಿರುದ್ಧವಾಗಿದೆ. ಆದ್ದರಿಂದ ಬಾಬಾ ರಾಮ್ ದೇವ ವಿರುದ್ಧ ಸರಿಯಾದ ಕೈಗೊಳ್ಳಬೆಕು ಎಂದು ಕೇಳಿಕೊಂಡಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ವಿಡಿಯೋದಲ್ಲಿ ಬಾಬಾ ರಾಮ್ ದೇವ್ ಅವರು, “ಮೂರ್ಖ ವಿಜ್ಞಾನ” ಕೋವಿಡ್-19 ರೋಗಿಗಳಿಗೆ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ ಅನುಮೋದಿಸಿರುವ ರೆಮ್ಡಿಸಿವರ್, ಫಾವಿಫ್ಲೂ ಸೇರಿದಂತೆ ಹಲವು ಔಷಧಿಗಳು ವಿಫಲವಾಗಿವೆ ಎಂದು ಅಲೋಪತಿ ಔಷಧವನ್ನು ಟೀಕಿಸಿದ್ದರು.