ಗಂಡು ಕನ್ನಡಕವಿಲ್ಲದೇ ಪೇಪರ್ ಓದಲಿಲ್ಲ ಅಂತಾ ಮದುವೆ ಮುರಿದ ಹುಡುಗಿ

ವಧುವಿನ ಕುಟುಂಬದ ವಿರುದ್ಧ ಗಂಡಿನ ಕುಟುಂಬಸ್ಥರಿಂದ ಪ್ರಕರಣ ದಾಖಲು

 

ಗಂಡು ಕನ್ನಡಕ ಧರಿಸದೇ ನ್ಯೂಸ್ ಪೇಪರ್ ಓದಲಿಲ್ಲ ಅಂತಾ ನಿಶ್ಚಯವಾಗಿದ್ದ ಮದುವೆಯನ್ನು ಹುಡುಗಿ ಕೊನೇ ಕ್ಷಣದಲ್ಲಿ  ಮದುವೆಯನ್ನು ತಿರಸ್ಕರಿಸಿದ್ದಾಳೆ. ಈ ಘಟನೆ ಉತ್ತರಪ್ರದೇಶದ ಅವ್ರಯ ಜಿಲ್ಲೆಯಲ್ಲಿ ನಡೆದಿದೆ.

ಸರ್ದಾರ್ ಕೊತ್ವಾಲಿ ಪ್ರದೇಶದ ಜಮಾಲ್ ಪುರ್ ಗ್ರಾಮದ ನಿವಾಸಿ ಅರ್ಜುನ್ ಸಿಂಗ್ ಅವರ ಮಗಳು ಅರ್ಚನಾಳ ಮದುವೆ ಶಿವಂ ಎಂದು ಬಾನ್ಸಿ ಗ್ರಾಮದ ಹುಡುಗನ ಜೊತೆ ಮದುವೆ ನಿಶ್ಚಿಯವಾಗಿತ್ತು. ಶಿವಂ ಒಳ್ಳೆಯ ವಿದ್ಯಾವಂತನಾಗಿದ್ದ ಹಿನ್ನೆಲೆ ಅರ್ಜುನ್ ಸಿಂಗ್ ಇವರ ಮದುವೆಯನ್ನು ನಿಶ್ಚಯ ಮಾಡಿ ವರನಿಗೆ ವರದಕ್ಷಿಣೆ ರೂಪದಲ್ಲಿ ನಗದು ಮತ್ತು ಒಂದು ಸ್ಕೂಟರ್ ಸಹ ನೀಡಿ ಮದುವೆ ತಯಾರಿ ನಡೆದಿತ್ತು.

ಮದುವೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಂತೆ ವರ ಯವಾಗಲೂ ಕನ್ನಡಕವನ್ನು ಧರಿಸುತ್ತಿದ್ದುದ್ದರಿಂದ ಅನುಮಾನಗೊಂಡ ವಧು ಮತ್ತು ವಧುವಿನ ಮನೆಯ ಹೆಂಗಸರು ಶಿವಂಗೆ ಒಂದು ಹಿಂದಿ ನ್ಯೂಸ್ ಪೇಪರ್ ಕೊಟ್ಟು ಕನ್ನಡಕವನ್ನು ತೆಗೆದಿಟ್ಟು ಓದುವಂತೆ ಹೇಳಿದ್ದಾರೆ, ಆದರೆ, ಕನ್ನಡಕವಿಲ್ಲದೆ ವರ ಶಿವಂ ಪೇಪರ್ ಓದಲು ಸಾಧ್ಯವಾಗಿಲ್ಲ. ಕನ್ನಡಕವಿಲ್ಲದೇ ಏನೂ ಕಾಣಿಸುವುದಿಲ್ಲ ಹುಡುಗನಿಗೆ ದೃಷ್ಟಿದೋಷವಿದೆ ಎಂಬುದನ್ನು ಅರಿತ ವಧು ಮದುವೆಯನ್ನು ನಿರಾಕರಿಸಿದ್ದಾಳೆ. ವಧುವಿನ ನಿರಾಕರಣೆಯನ್ನು ಅವರು ಪೋಷಕರು ಒಪ್ಪಿದ್ದಾರೆ.

ಆದರೆ, ಈ ಸಂಬಂಧ ವಧುವಿನ ಪೋಷಕರ ಮತ್ತು ಸಂಬಂಧಿಕರ ವಿರುದ್ಧ ವರ ಅನಕ್ಷರಸ್ಥನೆಂದು ಮದುವೆ ನಿರಾಕರಿಸಲಾಗಿದೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಹಾಗೆ, ವಧುವಿನ ಕಡೆಯವರು ಮದುವೆಗೆಂದು ವರದಕ್ಷಿಣೆ ರೂಪದಲ್ಲಿ ನೀಡಲಾಗಿದ್ದ ನಗದು ಮತ್ತು ಸ್ಕೂಟರ್ ಹಿಂದಿರುಗಿಸುವಂತೆ ಒತ್ತಾಯಿಸಿದ್ದು, ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.