ರಕ್ತಧಾನ ಮಾಡಿ ಪೊಲೀಸರಿಂದ ತಾಯಿ, ಮಗುವಿಗೆ ಜೀವಧಾನ

ಲಾಕ್ ಡೌನ್ ವೇಳೆ ಕಾನ್ಸ್ಟಬಲ್ ಸೈಯ್ಯದ್ ಅಬು ತಾಹೀರ್ ಮಾನವೀಯತೆ

 

ಕೊರೋನಾ ರೋಗ ವ್ಯಾಪಿಸಿದಂತೆ ದೇಶಾದ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವುದರಿಂದ ಲಾಕ್ ಲೌನ್ ಜನ ಸಾಮಾನ್ಯರಿಗೆ ತಲೆನೋವಾಗಿ ಪರಿಣಮಿಸಿದೆ. ತಕ್ಷಣವೆ ವೈದ್ಯಕೀಯ ಸೇವೆ ಮತ್ತು ಸಾರಿಗೆ ಸೇವೆ ಬೇಕೆಂದರೆ ಪೊಲೀಸ್ ಸರ್ಪಗಾವಲಿನ ಈ ಪರಿಸ್ಥಿತಿಯಲ್ಲಿ ಜನ ಭಯದಿಂದ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಇಂತಹ ಸ್ಥಿತಿಯಲ್ಲಿ ಓರ್ವ ಗರ್ಭಿಣಿ ಮತ್ತು ಆಕೆಯ ಗಂಡ ಸುಮಾರು ಏಳು ಕಿಲೋಮಿಟರ್ ಗಳ ದೂರ ಕಷ್ಟಪಟ್ಟು ನಡೆದುಬಂದು ಆಸ್ಪತ್ರೆಗೆ ದಾಖಲಾಗಿ, ಗರ್ಭಿಣಿಗೆ ರಕ್ತದ ಅನಿವಾರ್ಯತೆ ಬಿದ್ದಾಗ ಪೊಲೀಸ್ ಅಧಿಕಾರಿಯೋರ್ವ ರಕ್ತಧಾನ ಮಾಡಿ ಮಗು ಮತ್ತು ಗರ್ಭಿಣಿಯನ್ನು ರಕ್ಷಿಸಿ ಮಾನವೀಯತೆ ಮೆರೆದಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

5 ವರ್ಷ ವಯಸ್ಸಿನ ಸುಲೋಚನಾ ಎಂಬ ತುಂಬು ಗರ್ಭಿಣಿ ಹೆರಿಗೆ ನೋವಿನಿಂದ ತನ್ನ ಪತಿ ಎಳುಮಲೈ ಸಹಾಯದೊಂದಿಗೆ ಹಳ್ಳಿಯಿಂದ ಹತ್ತಿರದ ನಗರದ ಆಸ್ಪತ್ರೆಗೆ ಹೇಗೋ ಬಂದು ದಾಖಲಾಗಿದ್ದರು. ಆದರೆ, ದಾಕ್ಟರ್ ಸಿಸೇರಿಯನ್ ಮಾಡಬೇಕು ತಕ್ಷಣವೇ ಗರ್ಭಿಣಿಗೆ ರಕ್ತದ ಅವಶ್ಯಕತೆ ಇದೆ. ಸಧ್ಯ ನಮ್ಮಲ್ಲಿ ರಕ್ತದ ಲಭ್ಯತೆ ಇಲ್ಲ ಎಂದು ಹೇಳಿದ್ದಾರೆ.

ಲಾಕ್ ಡೌನ್ ಸಂದರ್ಭದಲ್ಲಿ ಗರ್ಭಿಣಿ ಸುಲೋಚನಾಳ ಪತಿ ಏಳುಮಲೈ ರಕ್ತಕ್ಕಾಗಿ ಆಸ್ಪತ್ರೆಯ ಸುತ್ತಾಮುತ್ತಾ ತಿರುಗಾಡಿದ್ದಾರೆ, ಲಾಕ್ಡೌನ್ ಇದ್ದುದ್ದರಿಂದ ಅಲ್ಲಿ ಯಾರು ರಕ್ತ ನೀಡುವವರು ಸಿಕ್ಕಿಲ್ಲ. ಸಂದರ್ಭ ಪೊಲೀಸರು ಏಳುಮಲೈ ಅಲೆಯುತ್ತಿರುವುದನ್ನು ನೋಡಿ, ಅವನನ್ನು ಹಿಡಿದು ನೀನ್ ಯಾಕೆ ಬೀದಿಯಲ್ಲಿ ಅಲೆದಾಡುತ್ತಿದ್ದೀಯಾ ಎಂದು ಪ್ರಶ್ನಿಸಿದ್ದಾರೆ. ಈ ಸಂದರ್ಭ ಏಳುಮಲೈ ತುರ್ತು ರಕ್ತ ಬೇಕಿರುವುದನ್ನು ತಿಳಿಸಿದ್ದಾನೆ.

ಈ ಸಂದರ್ಭ ಸೈಯ್ಯದ್ ಅಬು ತಾಹೀರ್ ಎಂಬ ಕಾನ್ಸ್ಟೆಬಲ್ ತಕ್ಷಣ ತಾನೆ ರಕ್ತ ನೀಡುವುದಾಗಿ ಮುಂದೆ ಬಂದು, ಗರ್ಭಿಣಿಗೆ ರಕ್ತಧಾನ ಮಾಡಿ ತಾಯಿ ಮತ್ತು ಮಗುವಿನ ಜೀವ ಉಳಿಸಿದ್ದಾರೆ.

ರಕ್ತಧಾನ ಮಾಡಿ ಆಸ್ಪತ್ರೆ ತೊರೆದ ನಂತರ ಎಸ್ ಪಿ ಅವರು ರಕ್ತಧಾನ ಮಾಡಿದ ತಾಹೀರ್ ಅವರಿಗೆ ಬಹುಮಾನ ರೂಪದಲ್ಲಿ 1000ರೂ ಹಾಗೂ ಡಿಜಿಪಿ ಅವರು 10,000 ರೂ ನೀಡಿ ಗೌರವಿಸಿದ್ದಾರೆ. ಆದರೆ ತಾಹಿರ್ ಅವರು ಆ ಹಣವನ್ನು ತಾನು ಇಟ್ಟುಕೊಳ್ಳದೇ ಅದನ್ನು ತೆಗೆದುಕೊಂಡು ಹೋಗಿ ತಾಯಿ ಮಗುವಿನ ಆಸ್ಪತ್ರೆಯ ಬಿಲ್ ಪಾವತಿಸಿ ಉಳಿದ ಹಣವನ್ನು ಅವರಿಗೇ ನೀಡಿ ಅವರ ನೆರವಿಗೆ ಬಂದಿದ್ದಾರೆ.

ಇಂದು ಈ ಪೊಲೀಸ್ ಅವರು ರಕ್ತಧಾನ ಮಾಡದಿದ್ದರೆ ನನ್ನ ಹೆಂಡತಿ ತುಂಬಾ ಕಷ್ಟದ ಪರಿಸ್ಥಿತಿಯಲ್ಲಿ ಸಿಲುಕುತಿದ್ದಳು.  ಈಗ ನನ್ನ ಹೆಂಡತಿ ಮತ್ತು ಮಗ ಚೆನ್ನಾಗಿದ್ದಾರೆ ಎಂದು ಸಹಾಯ ಮಾಡಿದ ಪೊಲೀಸ್ ಕಾನ್ಸ್ಟೆಬಲ್ ಮತ್ತು ತಿರುಚ್ಚಿ ಪೊಲೀಸ್ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದ್ದಾರೆ.