ಮೂಡಲಗಿಯಲ್ಲಿ ಪತ್ರಿಕಾ ವಿತರಕನ ಮೇಲೆ ಸಿಪಿಐ ವೆಂಕಟೇಶ ದಬ್ಬಾಳಿಕೆ

 ಪತ್ರಕರ್ತರ ಆಕ್ರೋಶ, ಶೀಘ್ರ ಕ್ರಮಕ್ಕೆ ಆಗ್ರಹ

 

ಬೆಳಗಾವಿ: ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣ ಕಲ್ಮೇಶ್ವರ ವೃತ್ತದಲ್ಲಿ ಪತ್ರಿಕಾ ವಿತರಕ ಹಾಗೂ ಪತ್ರಕರ್ತರೊಬ್ಬರಿಗೆ ಪೊಲೀಸರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಹಲ್ಲೆಗೊಳಗಾದ ಪತ್ರಕರ್ತರನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಳಗ್ಗೆ ತನ್ನ ಪತ್ರಿಕೆಯ ವಿತರಣೆ ಕೆಲಸ ಮುಗಿಸಿ ಹಾಲು ತೆಗೆದುಕೊಂಡು ಮನೆಗೆ ಹೋಗುವ ಸಮಯದಲ್ಲಿ ಮೂಡಲಗಿ ಸಿಪಿಐ ವೆಂಕಟೇಶ್ ಮುರನಾಳ ಪತ್ರಕರ್ತನನ್ನು ತಡೆದಿದ್ದಾರೆ. ಪತ್ರಕರ್ತ ಜೊತೆಗೆ ಪತ್ರಿಕಾ ವಿತರಕ ಎಂದು ಗುರುತಿನ ಚೀಟಿ ತೋರಿಸಿದರೂ ಬಿಟ್ಟಿಲ್ಲ. ಪತ್ರಕರ್ತ ಇದ್ರೆ ಏನಾಯಿತು, ನಾನೇನು ಮಾಡಲಿ? ನನ್ನ ಮೇಲೆ ದೂರು ನೀಡು ಎಂದು ಮತ್ತೆ ಮತ್ತೆ ಹೊಡೆದಿದ್ದಾರೆ.

ಇನ್ನೂ ಹಲ್ಲೆಗೊಳಗಾದ ಪತ್ರಕರ್ತನಿಗೆ ಮೂಡಲಗಿ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ವೇಳೆ ಹಲ್ಲೆಗೊಳಗಾದ ಪತ್ರಿಕಾ ವಿತರಕ ಮತ್ತು ಪತ್ರಕರ್ತ ಮಾತನಾಡಿ, ಪತ್ರಿಕೆಯ ವಿತರಣೆ ಕೆಲಸ ಮುಗಿಸಿ ಹಾಲು ತೆಗೆದುಕೊಂಡು ಮನೆಗೆ ಹೋಗುವ ಸಮಯದಲ್ಲಿ ಮೂಡಲಗಿ ಸಿಪಿಐ ವೆಂಕಟೇಶ್ ಮುರನಾಳ ತಡೆದರು. ಪತ್ರಕರ್ತ ಜೊತೆಗೆ ಪತ್ರಿಕಾ ವಿತರಕ ಎಂದು ಗುರುತಿನ ಚೀಟಿ ತೋರಿಸಿದರೂ ಬಿಡಲಿಲ್ಲ. ಪತ್ರಕರ್ತ ಇದ್ರೆ ಏನಾಯಿತು, ನಾನೇನು ಮಾಡಲಿ? ನನ್ನ ಮೇಲೆ ದೂರು ನೀಡು ಎಂದು ಲಾಠಿ ಬೀಸಿ ಹೊಡೆದರು. ಗಾಯಗೊಂಡು ಕೆಳಗೆ ಬಿದ್ದಾಗ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಎಂಎಲ್‍ಸಿ ಮಾಡಲು ಸಹ ಯಾವುದೆ ಪೆÇೀಲಿಸ್ ಸಿಬ್ಬಂದಿ ಸ್ಥಳದಲ್ಲಿ ಇರಲಿಲ್ಲ. ಪತ್ರಕರ್ತರ ಮೇಲೆ ಈ ದೌರ್ಜನ್ಯ ಏಕೆ? ಎಂದು ಪ್ರಶ್ನಿಸಿದರು.

ಒಟ್ಟಿನಲ್ಲಿ ಪತ್ರಿಕಾ ವಿತರಕರೂ ಸೇರಿದಂತೆ ಅಗತ್ಯ ವಸ್ತುಗಳನ್ನು ಮನೆ ಮನೆಗೆ ತಲುಪಿಸುವವರಿಗೆ ರಿಯಾಯಿತಿ ಎಂದು ಹೇಳಿದ್ದರೂ ಪೊಲೀಸರು ದೌರ್ಜನ್ಯ ಮುಂದುವರಿಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸಂಬಂಧಿಸಿದ ಅಧಿಕಾರಿ ವಿರುದ್ಧ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದು ಪತ್ರಿಕಾ ವಿತರಕರು ಮತ್ತು ಪತ್ರಕರ್ತರು ಆಗ್ರಹಿಸಿದ್ದಾರೆ.