ಕೋವಿಡ್ ಮೂರನೇ ಅಲೆಯ ಬಗ್ಗೆ ದೆಹಲಿ ಸಿಎಂ ಕಳವಳ
ಸಿಂಗಾಪುರ ವಿಮಾನಗಳನ್ನು ನಿರ್ಬಂಧಸಲು ಕೇಜ್ರಿವಾಲ್ ಆಗ್ರಹ
Updated: May 18, 2021, 18:09 IST
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕೋವಿಡ್ ಮೂರನೇ ಅಲೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಕೂಡಲೇ ಕೇಂದ್ರ ಸರ್ಕಾರ ಸಿಂಗಾಪುರದಿಂದ ಭಾರತಕ್ಕೆ ಆಗಮಿಸುವ ವಿಮಾನಗಳಿಗೆ ನಿರ್ಬಂಧ ವಿಧಿಸಬೇಕು ಎಂದು ಹೇಳಿದ್ದಾರೆ.
ಸಿಂಗಾಪುರದಲ್ಲಿ ಹೊಸ ಮಾದರಿಯ ಕೋವಿಡ್ ಪತ್ತೆಯಾಗಿದೆ ಇದು ಮಕ್ಕಳಿಗೆ ಅತ್ಯಂತ ಅಪಾಯಕಾರಿ, ಇದು ಭಾರತಕ್ಕೆ ಕೋವಿಡ್ ಮೂರನೇ ಅಲೆಯಾಗಿ ಬಂದು ದೇಶವನ್ನು ಕಾಡಬಹುದು ಆದ್ದರಿಂದ ಸಿಂಗಾಪುರದ ವಿಮಾನಗಳನ್ನು ಕೂಡಲೇ ನಿರ್ಬಂಧಿಸಿ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಮಕ್ಕಳಿಗೂ ಆಧ್ಯತೆಮೆರೆಗೆ ಲಸಿಕೆ ನೀಡುವುದರ ಕಡೆ ಗಮನ ನೀಡಬೇಕು ಎಂದು ಕೇಜ್ರಿವಾಲ್ ಟ್ವೀಟ್ ಮೂಲಕ ತಿಳಿಸಿದ್ದಾರೆ.