ಚೂರಿಯಿಂದ 20 ಬಾರಿ ಇರಿದು ವೃದ್ಧೆಯ ಕೊಲೆ
Jun 15, 2021, 12:05 IST
ನವದೆಹಲಿ: 62 ವರ್ಷದ ಮುದುಕಿಯನ್ನು ಚಾಕಿವಿನಿಂದ 20 ಬಾರಿ ಇರಿದು ಕೊಲೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಕೊಲೆ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಹರಿತವಾದ ಚಾಕುವಿನಿಂದ ವೃದ್ಧೆಯ ಗಂಟಲಿನಲ್ಲಿ ಇರಿಯಲಾಗಿತ್ತು ಮತ್ತು ಆಕೆಯ ಹೊಟ್ಟೆ ಮತ್ತುದೇಹದ ಹಲವೆಡೆ ಹಿರಿತದಿಂದ ಗಾಯಗಳಾಗಿ ಆಕೆ ಮೃತಪಟ್ಟಿದ್ದಳು ಎಂದು ಪೊಲೀಸ್ ಅಧಿಕಾರಿ ಪ್ರಿಯಾಂಕ್ ಕಶ್ಯಪ್ ಹೇಳಿದ್ದಾರೆ.
ಆರೋಪಿ ವಿರುದ್ಧ ಸೆಕ್ಷನ್ 302ರಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಮತ್ತು ಆರೋಪಿಯಿಂದ ದುಷ್ಕೃತ್ಯಕ್ಕೆ ಬಳಸಲಾಗಿದ್ದ ಚಾಕುವನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.
ಕೊಲೆಗೀಡಾದ ಮಹಿಳೆ ಬಿಹಾರದಿಂದ ದೆಹಲಿಯ ಗ್ರಾಮವೊಂದಕ್ಕೆ ಆಗಮಿಸಿ ತನ್ನ ಮಗನ ಜೊತೆ ನೆಲಸಿದ್ದಳು. ಆಕೆ ಮನೆಯ ಹತ್ತಿರವೇ ತಳ್ಳುವ ಗಾಡಿಯಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದಳು ಎಂದು ಎನ್ ಡಿಟಿವಿ ವರದಿ ಮಾಡಿದೆ.