ಕೋವಿಡ್ ನಿಂದ ಗುಣಮುಖರಾದವರಲ್ಲಿ ಈ ಲಕ್ಷಣ ಕಂಡರೆ ಬ್ಲಾಕ್ ಫಂಗಸ್!

ಬ್ಲಾಕ್ ಫಂಗಸ್ ಬಗ್ಗೆ AIIMS ಮುಖ್ಯಸ್ಥ ಡಾ. ರಂದೀಪ್ ಗುಲೇರಿಯಾ ಏನ್ ಹೇಳ್ತಾರೆ?

 

ನವದೆಹಲಿ: ಕೊರೋನಾ ಸೋಂಕಿನಿಂದ ಲಕ್ಷಾಂತರ ಜನ ಜೀವ ಕಳೆದುಕೊಂಡಿದ್ದಾರೆ. ಕೋವಿಡ್ ನಂತರ ಈಗ ಬ್ಲಾಕ್ ಫಮಗಸ್ ಕಾಣಿಸಿಕೊಂಡಿದ್ದು, ಬ್ಲಾಕ್ ಫಂಗಸ್ ನಿಂದ ಸಹ ಹಲವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಬ್ಲಾಕ್ ಫಂಗಸ್ ಬಗ್ಗೆ ಎಐಐಎಂಎಸ್ ಮುಖ್ಯಸ್ಥ ಡಾ. ರಂದೀಪ್ ಗುಲೇರಿಯಾ ಮಾತನಾಡಿದ್ದು, ಕೋವಿಡ್ ನಿಂದ ಗುಣಮುಖ ಹೊಂದಿದವರಲ್ಲಿ ತಲೆನೋವು, ಊತ ಕಂಡು ಬಂದರೆ ಅದು ಬ್ಲಾಕ್ ಫಂಗಸ್ ನ ಚೆಹ್ನೆ ಎಂದು ರಂದೀಪ್ ಗುಲೇರಿಯಾ ಹೇಳಿದ್ದಾರೆ.

ಬ್ಲಾಕ್ ಫಂಗಸ್ ಭಾರತದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿರುವುದು ಏಕೆಂದರೆ, ದೇಶದಲ್ಲಿ ಅನಿಯಂತ್ರಿತ ಸಕ್ಕರೆ ಖಾಯಿಲೆಯುಳ್ಳ ಜನರಸಂಖ್ಯೆ ಹೆಚ್ಚು ಇರುವುದು ಮತ್ತು ಕೋವಿಡ್ ಚಿಕಿತ್ಸೆಯಲ್ಲಿ ಸ್ಟಿರಾಯ್ಡ್ಸ್ ಗಳ ಅನಿಯಮಿತ ಬಳಕೆ ಎಂದು ತಿಳಿಸಿದ್ದಾರೆ.

ಬ್ಲಾಕ್ ಫಂಗಸ್ ಕೋವಿಡ್ ಮೊದಲ ಅಲೆಯಲ್ಲೂ ಕಾಣಿಸಿಕೊಂಡಿತ್ತು, ಆದರೆ, ಎರಡನೇ ಅಲೆಯಲ್ಲಿ ಹೆಚ್ಚು ಸ್ಟಿರಾಯ್ಡ್ಸ್ ಬಳಕೆ ಮಾಡಿದ್ದರಿಂದ ಈಗ ಹೆಚ್ಚು ಬ್ಲಾಕ್ ಫಂಗಸ್ ರೋಗ ಕಾಣಿಸಿಕೊಳ್ಳುತ್ತಿದೆ ಎಂದು ಎನ್ ಡಿ ಟಿವಿಗೆ ಹೇಳಿದ್ದಾರೆ.