ಕರೋನಾ ಇಲ್ಲದೆ ಇದ್ದರೆ ಇಷ್ಟೊತ್ತಿಗಾಗ್ಲೇ ಬಿಜೆಪಿ ಶಾಸಕರು ರೆಸಾರ್ಟ್ ಸೇರಿರುತ್ತಿದ್ದರು!

ಬಿಜೆಪಿ ವಿರುದ್ಧ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಆರೋಪ

 

ಬೆಂಗಳೂರು: ಮಾಹಾಮಾರಿ ಸಾಂಕ್ರಾಮಿಕ ಕರೋನಾ ಇಲ್ಲದೆ ಇದ್ದರೆ ಇಷ್ಟು ಹೊತ್ತಿಗಾಗಲೇ ಬಿಜೆಪಿ ಶಾಸಕರು ರೆಸಾರ್ಟ್ ಸೇರಿರುತ್ತಿದ್ದರು, ಇಷ್ಟು ದಿನ ಕರೋನಾ ನಿರ್ವಹಣೆಗೆ ಹೊರಬರದೆ ಅಡಗಿದ್ದ ಬಿಜೆಪಿ ಸಚಿವ ಶಾಸಕರೆಲ್ಲ ಈಗ ಕುರ್ಚಿ ಕದನಕ್ಕಾಗಿ ದಿಡೀರ್ ಪ್ರತ್ಯಕ್ಷರಾಗಿದ್ದಾರೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಆರೋಪಿಸಿದೆ.

 ಈ ಬಗ್ಗೆ ಟ್ವೀಟ್ ಮಾಡಿರುವ ಕೆಪಿಸಿಸಿ, ಕರೋನಾ ಇಲ್ಲದೆ ಇದ್ದರೆ ಇಷ್ಟು ಹೊತ್ತಿಗಾಗಲೇ ಬಿಜೆಪಿ ಶಾಸಕರು ರೆಸಾರ್ಟ್ ಸೇರಿರುತ್ತಿದ್ದರು! ಇಷ್ಟು ದಿನ ಕರೋನಾ ನಿರ್ವಹಣೆಗೆ ಹೊರಬರದೆ ಅಡಗಿದ್ದ ಬಿಜೆಪಿ ಸಚಿವ ಶಾಸಕರೆಲ್ಲ ಈಗ ಕುರ್ಚಿ ಕದನಕ್ಕಾಗಿ ದಿಡೀರ್ ಪ್ರತ್ಯಕ್ಷರಾಗಿದ್ದಾರೆ. ತನಗೆ ಸಿಕ್ಕ ಅಧಿಕಾರವಧಿಯಲ್ಲೆಲ್ಲ ಕುರ್ಚಿ ಕಾಳಗದಲ್ಲಿ ಮುಳುಗುವ ಬಿಜೆಪಿಯಿಂದ ಜನರ ರಕ್ಷಣೆ ಸಾಧ್ಯವಿಲ್ಲ ಎಂದು ಹೇಳಿದೆ.

ಸರ್ಕಾರ ಖಾಸಗಿ ಆಸ್ಪತ್ರೆಗಳ ಪರವಾಗಿ ಕೋವಿಡ್ ಲಸಿಕೆ ಆರ್ಡರ್ ಮಾಡಿಸುತ್ತಿದೆ ಎಂದು ಸಹ ಆರೋಪಿಸಿದ್ದು, ಕಂಪೆನಿಗಳಲ್ಲಿ ಲಸಿಕೆಗಳಿಗೆ ಆರ್ಡರ್ ಮಾಡಲಾಗಿದೆ ಎಂದು ಬಹಳ ಹಿಂದೆಯೇ ಹೇಳಿದ್ದ ಡಾ.ಸುಧಾಕರ್ ಅವರೇ, ಆರ್ಡರ್ ಮಾಡಿದ ಲಸಿಕೆಗಳು ಬಂದವೇ? ಗ್ಲೋಬಲ್ ಟೆಂಡರ್ ಕತೆ ಏನಾಯ್ತು? ಬಿಜೆಪಿಗರು ಖಾಸಗಿ ಆಸ್ಪತ್ರೆಗಳ ಜೊತೆ ನಿಂತು ಪ್ರಚಾರ ನಡೆಸುತ್ತಿರುವುದನ್ನ ನೋಡಿದರೆ ಸರ್ಕಾರದ ಬದಲಿಗೆ ಖಾಸಗಿ ಅಸ್ಪತ್ರೆಗಳ ಪರವಾಗಿ ಆರ್ಡರ್ ಮಾಡಿದ್ದೇನಿಸುತ್ತದೆ! ಎಂದು ಟೀಕಿಸಲಾಗಿದೆ.