ಭಾರತದಲ್ಲಿ ಕೋವಿಡ್ ಸೋಂಕಿನ ಸಂಖ್ಯೆ ಗಣನೀಯ ಇಳಿಕೆ

ಕಳೆದ 24 ಗಂಟೆಯಲ್ಲಿ 1.73 ಲಕ್ಷ ಹೊಸ ಪ್ರಕರಣ ದಾಖಲು

 

ಭಾರತದಲ್ಲಿ ಕೋವಿಡ್ ಸೋಂಕಿನ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದ್ದು, ತಿಂಗಳಲ್ಲಿ ಮೂರನೇ ಬಾರಿ ಎರಡು ಲಕ್ಷಕ್ಕಿಂತ ಕಡಿಮೆ ಕೊರೋನಾ ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿ ಕಳೆದ 24 ಗಂಟೆಯಲ್ಲಿ 1.73 ಲಕ್ಷ ಹೊಸ ಕೊರೋನಾ ಪ್ರಕರಣಗಳು ಕಾಣಿಸಿಕೊಂಡಿವೆ. ಈವರೆಗೆ ಒಟ್ಟಾರೆ 2,77,29,247 ಸೋಂಕುಗಳು ಪತ್ತೆಯಾಗಿವೆ.

ಕೊರೋನಾದಿಂದ ಕಳೆದ 24 ಗಂಟೆಯಲ್ಲಿ 3,617 ಸಾವುಗಳು ಸಂಭವಿಸಿವೆ. ಈವರೆಗೆ ದೇಶದಲ್ಲಿ 3,22,512 ಸೋಂಕಿತರು ಮೃತಪಟ್ಟಂತಾಗಿದೆ. ಕಳೆದ 24ಗಂಟೆಯಲ್ಲಿ 2,84,601 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಭಾರತದಲ್ಲಿ 22.28ಲಕ್ಷ ಸಕ್ರಿಯ ಪ್ರಕರಣಗಳಿವೆ.

ತಮಿಳುನಾಡು, ಕರ್ನಾಟಕ, ಕೇರಳ, ಮಹಾರಾಷ್ಟ್ರ, ಆಂಧ್ರ ಪ್ರದೇಶದ ರಾಜ್ಯಗಳಲ್ಲಿ ಹೆಚ್ಚು ಪ್ರಕರಣಗಳು ಕಂಡುಬಂದಿವೆ.  ತಮಿಳುನಾಡಿನಲ್ಲಿ, 31,079 ಪ್ರಕರಣಗಳು, ಕರ್ನಾಟಕದಲ್ಲಿ 22,823 ಪ್ರಕರಣಗಳು, ಕೇರಳ 22,318 ಪ್ರಕರಣಗಳು, ಮಹಾರಾಷ್ಟ್ರದಲ್ಲಿ 20,740 ಪ್ರಕರಣಗಳು, ಆಂಧ್ರಪ್ರದೇಶದಲ್ಲಿ 14,429 ಪ್ರಕರಣಗಳು ದಾಖಲಾಗಿವೆ. ಕಳೆದ 24ಗಂಟೆಯಲ್ಲಿ ಈ ಐದು ರಾಜ್ಯಗಲ್ಲಿ 64.08% ಹೊಸ ಪ್ರಕರಣಗಳು ಪತ್ತೆಯಾಗಿವೆ.