ಮಹಾರಾಷ್ಟ್ರದಲ್ಲಿ ಕೊರೋನಾ ಮುಕ್ತ ಗ್ರಾಮಕ್ಕೆ 50 ಲಕ್ಷ ಬಹುಮಾನ

ಹಳ್ಳಿಗಳಲ್ಲಿ ಕೊರೊನಾ ಕಂಟ್ರೋಲ್ ಗೆ ಮಹಾರಾಷ್ಟ್ರ ಸರ್ಕಾರದಿಂದ ಮಾಸ್ಟರ್ ಪ್ಲಾನ್

 

ಮುಂಬೈ: ಗ್ರಾಮಗಳಲ್ಲಿ ಕೊರೋನಾ ಹರಡುವುದನ್ನು ತಡೆಯುದು ಮತ್ತು ಕೋವಿಡ್ ಶಿಷ್ಟಾಚಾರವನ್ನು ಪರಿಣಾಮಕಾರಿಯಾಗಿ ಅನುಸರಿಸುವುದನ್ನು ಉತ್ತೇಜಿಸುವ ಉದ್ದೇಶದಿಂದ ಕೊರೋನಾ ಮುಕ್ತ ಗ್ರಾಮಕ್ಕಾಗಿ ಮಹಾರಾಷ್ಟ್ರದ ಗ್ರಾಮೀಣಾಭಿವೃದ್ಧಿ ಸಚಿವ ಹಸನ್ ಮುಶ್ರಿಫ್ ಸ್ಪರ್ಧೆ ಆಯೋಜಿಸಿ ಬಾರೀ ಬಹುಮಾನದ ಮೊತ್ತವನ್ನು ಘೋಷಿಸಿದ್ದಾರೆ.

ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವ ಗ್ರಾಮಕ್ಕೆ 50 ಲಕ್ಷ ರೂಪಾಯಿಗಳು ದ್ವಿತೀಯ ಸ್ಥಾನ ಪಡೆಯುವ ಗ್ರಾಮ 25 ಲಕ್ಷ ರೂಪಾಯಿಗಳು ಮತ್ತು ತೃತಿಯ ಸ್ಥಾನ ಪಡೆಯುವ ಗ್ರಾಮಕ್ಕೆ 15 ಲಕ್ಷ ರೂಪಾಯಿಗಳನ್ನು ಬಹುಮಾನವಾಗಿ ನೀಡುವುದಾಗಿ ತಿಳಿಸಿದ್ದಾರೆ.

ಕೊರೋನಾ ಮುಕ್ತ ಗ್ರಾಮದಲ್ಲಿ ಭಾಗವಹಿಸುವ ಗ್ರಾಮಗಳಿಗೆ 22 ಮಾನದಂಡಗಳನ್ನು ನಿಗದಿಪಡಿಸಲಾಗಿದ್ದು, ಪ್ರತಿ ಕಂದಾಯ ವಿಭಾಗದಲ್ಲಿ ಕೋವಿಡ್ ನಿರ್ವಹಣೆಯಲ್ಲಿ ಉತ್ತಮ ಕೆಲಸ ಮಾಡುತ್ತಿರುವ ಮೂರು ಗ್ರಾಮ ಪಂಚಾಯಿತಿಗಳಿಗೆ ಈ ಬಹುಮಾನದ ಮೊತ್ತವನ್ನು ನೀಡಲಾಗುತ್ತದೆ.