ಕೋವಿಡ್ ಸಂಕಷ್ಟದಲ್ಲಿ ಭಾರತೀಯರಿಗೆ ‘ಹಮ್ ತೆರೆ ಸಾಥ್ ಹೈ’ ಎಂದ ಪಾಕ್ ಗಾಯಕ

ಹೃದಯ ಕರಗಿಸುವಂತಿದೆ ಪಾಕ್ ಗಾಯಕ ಇಮ್ರಾನ್ ಹಶ್ಮಿಯ ಗಾಯನ

 

ಭಾರತದಲ್ಲಿ ಕೋವಿಡ್ ಉಲ್ಬಣಗೊಂಡಿರುವ ಹಿನ್ನೆಲೆ ಈಗ ಜಗತ್ತಿನ ಎಲ್ಲಾ ದೇಶಗಳ ಕಣ್ಣು ಭಾರತದ ಮೇಲಿದೆ. ದಿನಗಳೆದಂತೆ ಕೋವಿಡ್ ಎರಡನೆ ಅಲೆ ಮಾರಣಾಂತಿಕವಾಗಿದೆ. ಪ್ರಪಂಚದ ಹಲವು ದೇಶಗಳು ಆಕ್ಷಿಜನ್ ಸಿಲಿಂಡರ್, ವೈದ್ಯಕೀಯ ನೆರವು ಸೇರಿದಂತೆ ಹಲವು ಬಗೆಯ ಕೊಡುಗೆಗಳನ್ನು ನೀಡುತ್ತಿವೆ.

ಭಾರತದಲ್ಲಿ ಕೋವಿಡ್ ಉಲ್ಬಣಗೊಂಡಿರುವ ಹಿನ್ನೆಲೆ ಈಗ ಜಗತ್ತಿನ ಎಲ್ಲಾ ದೇಶಗಳ ಕಣ್ಣು ಭಾರತದ ಮೇಲಿದೆ. ದಿನಗಳೆದಂತೆ ಕೋವಿಡ್ ಎರಡನೇ ಅಲೆ ಮಾರಣಾಂತಿಕವಾಗಿದೆ. ಪ್ರಪಂಚದ ಹಲವು ದೇಶಗಳು ಆಕ್ಸಿಜನ್ ಸಿಲಿಂಡರ್, ವೈದ್ಯಕೀಯ ನೆರವು ಸೇರಿದಂತೆ ಹಲವು ಬಗೆಯ ಕೊಡುಗೆಗಳನ್ನು ನೀಡುತ್ತಿವೆ.

ನೆರೆಯ ಪಾಕಿಸ್ತಾನದಲ್ಲೂ ಕೋವಿಡ್ ಸಂಕಷ್ಟ ಇದ್ದರೂ. ಪಾಕಿಸ್ತಾನ ಸಹ ಭಾರತದ ಸಂಕಷ್ಟದ ಜೊತೆ ನಿಲ್ಲುವುದಾಗಿ ಐಕಮತ್ಯ ವ್ಯಕ್ತಪಡಿಸಿದೆ. ಇತ್ತೀಚೆಗೆ, ಪಾಕಿಸ್ತಾನದ ಗಾಯಕ ಇಮ್ರಾನ್ ಹಶ್ಮಿ “ಹಮ್ ತೆರೆ ಸಾಥ್ ಹೈ” ಎಂಬ ಸುಂದರ ಹಾಡೊಂದನ್ನು ಬರೆದು ಕಂಪೋಸ್ ಮಾಡಿ ಹಾಡುವ ಮೂಲಕ ತನ್ನ ಸಾಲಿಡಾರಿಟಿ ವ್ಯಕ್ತಪಡಿಸಿದ್ದಾರೆ. ಇದು ಯೂಟ್ಯೂಬ್ ನಲ್ಲಿ ಲಭ್ಯವಿದ್ದು, ಕೇಳುಗರ ಹೃದಯ ಮುಟ್ಟುವಂತಿದೆ.

ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಗಾಯಕ ಇಮ್ರಾನ್ ಹಶ್ಮಿ ಭಾರತದಲ್ಲಿ ಹದಗೆಟ್ಟಿರುವ ಕೋವಿಡ್ ಸ್ಥಿತಿ ನನ್ನನ್ನು ನಡುಗಿಸಿತು. ಇದು ರಂಜಾನ್ ಸಮಯ ಸಹನುಭೂತಿ ತೋರುವ ಸಮಯ, ನಾನು ನಮ್ಮ ನೆರೆಯವರ ಜೊತೆ ಕೋವಿಡ್ ಸಂದರ್ಭದಲ್ಲಿ ನಿಲ್ಲಬೇಕು ಎಂದನಿಸಿದೆ. ಆದ್ದರಿಂದ, ಈ ಹಾಡನ್ನು ಬರೆದು ಹಾಡಿದ್ದೇನೆ. ಇದು ಐಕ್ಯತೆ ಮತ್ತು ಭರವಸೆಯ ಬಗ್ಗೆ ಬಗ್ಗೆ ಇರುವ ಗಾಯನ ಎಂದಿದ್ದಾರೆ.

ಭಾರತ ಮತ್ತು ಪಾಕಿಸ್ತಾನದ ನಡುವೆ ಕಲಹ ಇರುವುದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಆದರೆ, ಎರಡು ದೇಶಗಳ ನಡುವೆ ಶಾಂತಿ ಮೂಡಿಸುವ ಬಗ್ಗೆ ನಾನು ಕನಸು ಕಾಣುತ್ತಿರುತ್ತೇನೆ. ಇದು ಅದನ್ನು ನನಸು ಮಾಡಲು ನಾನಿಟ್ಟಿರುವ ಹೆಜ್ಜೆ, ನಾನು ಲಾಹೋರ್ ಹುಡುಗನೇ ಇರಬಹುದು, ಆದರೆ, ನನ್ನ ಹಾಡಿನ ಮೂಲಕ ಗಡಿ ಮೀರಿ ಶಾಂತಿ ಸಂದೇಶ ಹರಡುತ್ತಿದ್ದೇನೆ. ನಾನು ಅವರಿಂದಲೂ ಈ ರೀತಿಯ ಸಂದೇಶವನ್ನು ಭಯಸುತ್ತೇನೆ ಎಂದು ಇಮ್ರಾನ್ ಹಶ್ಮಿ ತಿಳಿಸಿದ್ದಾರೆ.

ಈ ಹಾಡಿನ ಬಗ್ಗೆ ಹೆಚ್ಚು ಮಾತನಾಡಿರುವ ಗಾಯಕ ಹಶ್ಮಿ, ಈ ಹಾಡು ಸಾಮರಸ್ಯ ಮತ್ತು ಸೋದರತೆಯನ್ನು ಆಧರಿಸಿದೆ, ನಾವೆಲ್ಲ ಸಿಂಧೂ ಬಯಲಿನ ನಾಗರಿಕರು, ಒಂದೇ ಬಳ್ಳಿಯ ಹೂಗಳು, ಒಂದೇ ರಕ್ತದ ಜನರು, ಇಲ್ಲಿ ಯಾರಿಗೇ ನೋವಾದರೂ ನಾವೆಲ್ಲರೂ ಒಂದೇ ರೀತಿಯ ವೇದನೆ ಅನುಭವಿಸುತ್ತೇವೆ. ಈ ಹಾಡನ್ನು ನಮ್ಮ ನೆರೆಹೊರೆಯ ಎಲ್ಲರಿಗೂ ವಿನಮ್ರವಾಗಿ ಅರ್ಪಿಸುತ್ತಿದ್ದೇನೆ ಮತ್ತು ಎಂಥಹ ಕಷ್ಟದ ಪರಿಸ್ಥಿತಿಯಲ್ಲೂ ಅವರ ಜೊತೆ ಸದಾ ಇರುತ್ತೇವೆ ಎಂದು ಹೇಳಿದ್ದಾರೆ.

ಧ್ವೇಷ ಹರಡುವುದು ತುಂಬಾ ಸಲಭ, ಆದರೆ ಪ್ರೀತಿ ಹರಡುವುಕ್ಕೆ ಹೆಚ್ಚು ಶ್ರಮ ಅವಶ್ಯಕ. ಈ ಸಂಗಿತದ ಮೂಲಕ ನಾನು ಸಾಧ್ಯವಾದುದ್ದನ್ನು ಮಾಡುತ್ತಿದ್ದೇನೆ. ನನ್ನ ಚಿಕ್ಕ ಪರಿಶ್ರಮ ಸಾಗರದಲ್ಲಿ ಒಂದು ಹನಿಯೇ ಆಗಿರಬಹುದು, ಆದರೆ, ಈ ಸಣ್ಣ ಹನಿ ಮುಂಧೆ ಇಬ್ಬರು ಪರಸ್ಪರ ಪ್ರೀತಿಸುವುದನ್ನ ತೋರಿಸುತ್ತದೆ. ದೇವರು ಎಲ್ಲರಿಗೂ ಒಳ್ಳೇಯದನ್ನು ಮಾಡಲಿ, ಈ ಕಠಿಣ ಪರಿಸ್ಥಿತಿಯಲ್ಲಿ ಸಹಾಯ ಮಾಡಲಿ ಎಂದು ಪ್ರಾರ್ಥಿಸಿದ್ದಾರೆ.

ಗಾಯಕ ಇಮ್ರಾನ್ ಹಶ್ಮಿ ಅವರು ಕಳೆದ ವರ್ಷ ಫಂರ್ಟ್ ಲೈನ್ ಕೆಲಸಗಾರರ ಬಗ್ಗೆ ‘ತುಜೆ ಸಲಾಂ’ ಅನ್ನುವ ಹಾಡು ಬರೆದಿದ್ದರು ಇದು ಪ್ರಪಂಚದಾದ್ಯಂತ ಪ್ರಶಂಸೆಗೆ ಒಳಗಾಗಿತ್ತು.

Pakistani singer Imran Hashmi's message of solidarity with India... as the country battles the coronavirus pandemic.

"Hum Tere Sath Hai"
#COVID19 #India #Pakistan #ImranHashmi pic.twitter.com/nCSElyU4in

— Geeta Mohan گیتا موہن गीता मोहन (@Geeta_Mohan) May 3, 2021 ">

">Pakistani singer Imran Hashmi's message of solidarity with India... as the country battles the coronavirus pandemic.

"Hum Tere Sath Hai" #COVID19 #India #Pakistan #ImranHashmi pic.twitter.com/nCSElyU4in

— Geeta Mohan گیتا موہن गीता मोहन (@Geeta_Mohan) May 3, 2021