ಶೇ.100% ಲಸಿಕೆ ಗುರಿ ಸಾಧಿಸುವ ಪ್ರತಿ ಗ್ರಾಮಕ್ಕೆ 10ಲಕ್ಷ ರೂ: ಪಂಜಾಬ್ ಸಿಎಂ
ಗ್ರಾಮ ಪಂಚಾಯ್ತಿಗಳ ಜೊತೆ ಸಭೆ ನಡೆಸಿ ಘೋಷಣೆ ಮಡಿದ ಕ್ಯಾ. ಅಮರೀಂದರ್ ಸಿಂಗ್
ಚಂಡೀಗಡ್: ಶೇ. 100% ಲಸಿಕೆ ಗುರಿ ಸಾಧಿಸುವ ಪ್ರತಿ ಗ್ರಾಮಕ್ಕೂ 'ಕೊರೋನಾ ಮುಕ್ತ ಪಿಂಡ್ ಅಭಿಯಾನ್' ಅಡಿಯಲ್ಲಿ 10 ಲಕ್ಷ ರೂಪಾಯಿಗಳ ವಿಶೇಷ ಅಭಿವೃದ್ಧಿ ಅನುದಾನ ನೀಡಲಾಗುವುದು ಎಂದು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಪ್ರಕಟಿಸಿದ್ದಾರೆ.
ಈ ಬಗ್ಗೆ ಸುಮಾರು 2,000ಕ್ಕೂ ಹೆಚ್ಚು ಗ್ರಾಮ ಪಂಚಾಯ್ತಿ ಮುಖ್ಯಸ್ಥರು ಮತ್ತು ಸದಸ್ಯರುಗಳ ಜೊತೆ ವರ್ಚುವಲ್ ಮೀಟಿಂಗ್ ಮೂಲಕ ಸಭೆ ನಡೆಸಿದ ಕ್ಯಾಪ್ಟನ್ ಅಮರಿಂದರ್ ಸಿಂಗ್, ಕೋವಿಡ್ ವಿರುದ್ಧದ ಹೋರಾಟದಲ್ಲಿ ತಮ್ಮ ಗ್ರಾಮಗಳನ್ನು ಮುನ್ನಡೆಸುವಂತೆ ರಾಜ್ಯಾದ್ಯಂತ ಸರ್ಪಂಚ್ ಮತ್ತು ಪಂಚ್ ಗಳಿಗೆ ಮನವಿ ಮಾಡಿದ್ದಾರೆ.
ಸೌಮ್ಯ ಲಕ್ಷಣಗಳಿರುವ ಜನರೂ ಸಹ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುಬೇಕು ಮತ್ತು ಲಸಿಕೆ ಪಡೆಯಬೇಕು. ಕೋವಿಡ್ ತುರ್ತು ಚಿಕಿತ್ಸೆಗಾಗಿ ಪಂಚಾಯತ್ ನಿಧಿಯಿಂದ ಗರಿಷ್ಠ 50,000 ರೂಪಾಯಿಗಳವರೆಗೆ ಖರ್ಚು ಮಾಡಲು ಸರ್ಕಾರ ಈಗಾಗಲೇ ಸರ್ಪಂಚ್ ಗಳಿಗೆ ಅನುಮತಿ ನೀಡಿದೆ ಎಂದು ಪಂಜಾಬ್ ಸಿಎಂ ಹೇಳಿದ್ದಾರೆ.
ಹಾಗೆ ಪಂಚಾಯ್ತಿಗಳು ವಿಶೇಷ ಮೆಡಿಕಲ್ ಕ್ಯಾಂಪಗಳನ್ನು ಆಯೋಜಿಸಬೇಕು ಮತ್ತು ರಾಜ್ಯದಲ್ಲಿರುವ ನಿವೃತ್ತ ಸೈನಿಕರು ಸಾಂಕ್ರಮಿಕದ ವಿರುದ್ಧದ ಹೋರಾಟಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.