ಮಹಿಳೆಯ ಸೇರೆ ಎಳೆದ ಬಜೆಪಿ ಗೂಂಡಾಗಳು

ಸಮಾಜವಾದಿ ಪಕ್ಷದ ಆರೋಪ, ಆಕ್ರೋಷ ವ್ಯಕ್ತಪಡಿಸಿದ ಅಖಿಲೇಶ್ ಯಾದವ್

 

ಬ್ಲಾಕ್ ಪಂಚಾಯತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ಬಂದಿದ್ದ ಮಹಿಳಾ ಅಭ್ಯರ್ಥಿಯ ಸೀರಯನ್ನು ಎಳೆದಾಡಿದ್ದಾರೆ. ಈ ಘಟನೆ ಉತ್ತರಪ್ರದೇಶದ ಲಾಖಿಂಪುರ್ ಖೇರಿ ಜಿಲ್ಲೆಯ ಪಾಸ್ಗವಾನ್ ಬ್ಲಾಕ್ ನಡೆದಿದೆ.

ನಾಮಪತ್ರ ಸಲ್ಲಿಸಲು ಕಚೇರಿ ಬಳಿಗೆ ರಸ್ತೆಯಲ್ಲಿ ನಡೆದು ಬರುತ್ತಿದ್ದ ಮಹಿಳೆಯನ್ನು ಹಿಡಿದು ಇಬ್ಬರು ದುಷ್ಕರ್ಮಿಗಳು ಸೀರಿಯನ್ನು ಎಳಿದಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದಕ್ಕೆ ವ್ಯಪಕ ಖಂಡನೆ ವ್ಯಕ್ತವಾಗಿದೆ. ಮಹಿಳೆ ಯಾದವ ಸಮುದಾಯಾದವರು ಎಂದು ತಿಳಿದುಬಂದಿದೆ. ರಿತು ಸಿಂಗ್ ಎಂಬ ಸಮಾಜವಾದಿ ಪಕ್ಷದ ನಾಯಕ ಇದು ಬಿಜೆಪಿ ಕಾರ್ಯಕರ್ತರ ದುರ್ವತನೆ ಹಳಿದ್ದಾರೆ.

ಮೊಹಮ್ಮದಿ ನಗರದ ಬಿಜೆಪಿ ಶಾಸಕ ಲೋಂಕೇಂದ್ರ ಪ್ರತಾಪ್ ಸಿಂಗ್ ಅವರ ಬೆಂಬಲಿಗರು ಈ ರೀತಿ ದುರ್ವತನೆಯಿಂದ ನಡೆದುಕೊಂಡಿದ್ದಾರೆ ಎಂದು ಹೇಳಿದ್ದು, ನಾಮಿನೇಷನ್ ಫೈಲ್ ಮಾಡಲು ತನ್ನ ಕಾರ್ಯಕರ್ತರ ಜೊತೆ ಕಚೇರಿಗೆ ಹೋಗುತ್ತಿದ್ದ ಮಹಿಳೆಯನ್ನು ಅಡ್ಡಗಟ್ಟಿದ ಬಿಜೆಪಿ ಕಾರ್ಯಕರ್ತರು ಸೀರೆಯನ್ನು ಎಳೆದಾಡಿದ್ದಾರೆ. ಹಾಗೆ, ಆಕೆಯ ನಾಮಿನೇಷನ್ ಕಾಗದ ಪತ್ರಗಳನ್ನು ಹರಿದು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಮಾಜವಾದ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಇಬ್ಬರು ಗೂಂಡಾಗಳು ಓರ್ವ ಮಹಿಳೆಯ ಸೀರೆಯನ್ನು ಎಳೆದಿರುವುದನ್ನು ನೋಡಬಹುದು. ಈ ದುಷ್ಕರ್ಮಿಗಳನ್ನು ಶಕ್ತಿಗಾಗಿ ಅಸಿದ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ರ ಗೂಂಡಾಗಳು ಎಂದು ಕರೆದಿದ್ದಾರೆ.

ಈ ಸಂಬಂಧ ಯಶ್ ವರ್ಮಾ ಮತ್ತು ಇನ್ನೋರ್ವ ಅನಾಮದೇಯ ಬಿಜೆಪಿ ಕಾರ್ಯಕರ್ತನ ವಿರುದ್ಧ ಭಾರತೀಯ ದಂಡ ಸಂಹಿತೆ 147, 171ಎಫ್, 354, 392, ಮತ್ತು 427ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.