ಕೋವಿಡ್ 3ನೇ ಅಲೆ 6 ರಿಂದ 8 ವಾರಗಳಲ್ಲಿ ಅಪ್ಪಳಿಸುವ ಸಾಧ್ಯತೆ

ಏಮ್ಸ್ ಮುಖ್ಯಸ್ಥ ಡಾ. ರಣದೀಪ್ ಗುಲೇರಿಯಾ ಎಚ್ಚರಿಕೆ

 

ನವದೆಹಲಿ: ಮಹಾಮಾರಿ ಸಾಂಕ್ರಾಮಿಕ ಕೋವಿಡ್-19 ಎರಡನೇ ಆಲೆ ದೇಶದಲ್ಲಿ ಇಳಿಕೆಯಾಗುತ್ತಿದೆ. ಕೊರೋನಾ ರೋಗಿಗಳು ಸಂಖ್ಯೆಯೂ ಕಡಿಮೆಯಾಗುತ್ತಿದೆ. ಕೊರೊನಾ ಮೂರನೇ ಅಲೆ ಅತೀ ಶೀಘ್ರದಲ್ಲೇ ಅಪ್ಪಳಿಸಲಿದೆ ಎಂಬ ಆತಂಕಕಾರಿ ವಿಷಯವನ್ನು ತಜ್ಞರು ವ್ಯಕ್ತಪಸಿದ್ದಾರೆ.

ಎನ್ ಡಿಟಿವಿಗೆ ಸಂದರ್ಶನ ನೀಡುವ ವೇಳೆ ಈ ಬಗ್ಗೆ ಮಾತನಾಡಿರುವ ದೆಹಲಿ ಏಮ್ಸ್ ಮುಖ್ಯಸ್ಥ ಡಾ. ರಣದೀಪ್ ಗುಲೇರಿಯಾ, ಇನ್ನು ಕೆಲವೇ ವಾರಗಳಲ್ಲಿ ಅಂದರೆ 6-8 ವಾರಗಳಲ್ಲಿ ಮೂರನೇ ಅಲೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ದೇಶದಲ್ಲಿ ಅನ್ ಲಾಕ್ ಮಾಡುತ್ತಿದ್ದಂತೆ, ಕೋವಿಡ್ ನಿಯಮಗಳನ್ನು ಗಣನೆಗೆ ತೆಗೆದುಕೊಳ್ಳದೇ ಗಾಳಿಗೆ ತೂರಲಾಗುತ್ತಿದೆ. ನಾವು ಮೊದಲ ಮತ್ತು ಎರಡನೇ ಅಲೆಯಿಂದ ಏನೇನು ಘಟಿಸಿದವೋ ಅವುಗಳಿಂದ ನಾವು ಸರಿಯಾದ ಪಾಠ ಕಲಿತಂತಿಲ್ಲ. ಮತ್ತೆ ಜನ ಸಂದಣಿ ಆಗುತ್ತಿದೆ. ಜನ ಒಟ್ಟಿಗೆ ಸೇರುತ್ತಿದ್ದಾರೆ. ದೇಶದ ಮಟ್ಟಿಗೆ ಪ್ರಕರಣ ಹೆಚ್ಚಳವಾಗುವುದು ನಿಧಾನವಾಗುತ್ತದೆ. ಮೂರನೇ ಅಲೆ ಇನ್ನು ಆರೆಂಟು ವಾರಗಳಲ್ಲಿ ಅಪ್ಪಳಿಸಲಿದೆ ಎಂದು ಗುಲೇರಿಯಾ ಹೇಳಿದ್ದಾರೆ.

ಜನಸಂದಣಿಯನ್ನು ನಿಯಂತ್ರಿಸುವುದು ಮತ್ತು ಕೋವಿಡ್ ಗೆ ಸಂಬಂಧಿಸಿದಂತೆ ನಾವು ತೆಗೆದುಕೊಳ್ಳುವ ನಿರ್ಧಾರಗಳ ಮೇಲೆ ಎಲ್ಲವೂ ಅವಲಂಭಿತವಾಗಿದೆ ಎಂದು ತಿಳಿಸಿದ್ದಾರೆ.