ಕುಂದಾನಗರಿ ಬೆಳಗಾವಿಯಲ್ಲಿ ಟಫ್ ರೂಲ್ಸ್ ಜಾರಿ

ಅನಗತ್ಯ ಜನಸಂಚಾರಕ್ಕೆ ಬ್ರೇಕ್

 

ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಖಡಕ್ ಲಾಕ್‍ಡೌನ್ ಮುಂದುವರಿದಿದೆ. ಬೆಳಿಗ್ಗೆಯಿಂದಲೇ ಟಫ್ ರೂಲ್ಸ್ ಜಾರಿಗೊಂಡಿದೆ. ಸಾರ್ವಜನಿಕರ ಅನಗತ್ಯ ಓಡಾಟಕ್ಕೆ ಪೊಲೀಸರು ಬ್ರೇಕ್ ಹಾಕುತ್ತಿದ್ದಾರೆ. ಕಫ್ರ್ಯೂ ರಿಲ್ಯಾಕ್ಸ್ ಅವಧಿಯಲ್ಲೂ ಜನಸಂಚಾರಕ್ಕೆ ಬ್ರೇಕ್ ಬಿದ್ದಿದೆ. ತರಕಾರಿ, ಹಣ್ಣು ವ್ಯಾಪಾರಸ್ಥರಿಗೆ ಗಲ್ಲಿಗಳಲ್ಲಿ ಸಂಚರಿಸಿ ಮಾರಾಟ ಮಾಡಲು ತಿಳಿಸಲಾಗಿದೆ.

ಕೊರೋನಾ ಸೋಂಕು ತಡೆಗೆ ರಾಜ್ಯ ಸರಕಾರ ಜಾರಿಗೊಳಿಸಿರುವ ಟಫ್ ರೂಲ್ಸ್ ಬೆಳಗಾವಿಯಲ್ಲಿ ಕಟ್ಟು ನಿಟ್ಟಾಗಿ ಜಾರಿಗೆ ಬಂದಿದೆ. ಎರಡನೇ ದಿನವಾದ ಮಂಗಳವಾರ ಬೆಳಿಗ್ಗೆಯಿಂದಲೇ ಟಫ್ ರೂಲ್ಸ್ ಜಾರಿಗೊಂಡಿವೆ. ಸಾರ್ವಜನಿಕರ ಅನಗತ್ಯ ಓಡಾಟಕ್ಕೆ ಪೊಲೀಸರು ಬ್ರೇಕ್ ಹಾಕುತ್ತಿದ್ದಾರೆ. ಬೆಳಗಾವಿಯ ಮಾರ್ಕೆಟ್‍ಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುತ್ತಿಲ್ಲ. ಲಾಕ್ ಡೌನ್‍ನಿಂದ ಬಹುತೇಕ ತರಕಾರಿ ಹಾಗೂ ಬೀದಿ ವ್ಯಾಪಾರಸ್ಥರು ಮನೆಯಲ್ಲೇ ಉಳಿದಿದ್ದಾರೆ. ಮನೆಯಲ್ಲೇ ಇರುವಂತೆ ಪೊಲೀಸರಿಂದ ಜನರಿಗೆ ಕಿವಿಮಾತು ಹೇಳಲಾಗುತ್ತಿದೆ. ಅನಗತ್ಯ ಹೊರಗಡೆ ಬಾರದಂತೆ ತಾಕೀತು ಮಾಡಲಾಗಿದೆ.

ಅನಗತ್ಯ ಹೊರ ಬಂದರೆ ಕಾರ್, ಬೈಕ್ ಸೀಜ್ ಮಾಡುವ ಎಚ್ಚರಿಕೆ ನೀಡಲಾಗುತ್ತಿದೆ. ಮುಂಜಾನೆಯಿಂದಲೇ ಪೊಲೀಸರು ವಾರ್ನಿಂಗ್ ಮಾಡುತ್ತಿದ್ದಾರೆ.