ಕೊರೋನಾ ಸೋಂಕಿನಿಂದ ಮೃತಪಟ್ಟ ಉತ್ತರಪ್ರದೇಶ ಸಚಿವ

ಕಂದಾಯ ಸಚಿವ ವಿಜಯ್ ಕುಮಾರ್ ಕಶ್ಯಪ್ ಸಾವಿಗೆ ಪ್ರಧಾನಿ ಮೋದಿ ಕಂಬನಿ

 

ಲಕ್ನೋ: ಉತ್ತರಪ್ರದೇಶದ ಕಂದಾಯ ಸಚಿವ ಗುರುಗ್ರಾಮದ ಮೇದಾಂತ್ ಆಸ್ಪತ್ರೆಯಲ್ಲಿ ಕೋವಿಡ್-19 ಸೋಂಕಿನಿಂದ ಅಸುನೀಗಿದ್ದಾರೆ.

52 ವರ್ಷದ ವಿಜಯ್ ಕುಮಾರ್ ಕಶ್ಯಪ್ ಅವರು ಮುಜಾಫರ್ ನಗರದಿಂದ ಎಂಎಲ್ ಎ ಆಗಿ ಆಯ್ಕೆಯಾಗಿ ಉತ್ತರಪ್ರದೇಶ ಸಚಿವ ಸಂಪುಟದಲ್ಲಿ ಕಂದಾಯ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದರು, ಇವರು ಕೋವಿಡ್ ಗೆ ಬಲಿಯಾದ ಉತ್ತರಪ್ರದೇಶದ ಮೂರನೇ ಸಚಿವರಾಗಿದ್ದಾರೆ.

ವಿಜಯ್ ಕುಮಾರ್ ಕಶ್ಯಪ್ ನಿಧನದ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಉತ್ತರಪ್ರದೇಶ ಬಿಜೆಪಿ ಮುಖ್ಯಸ್ಥ ಸ್ವತಂತ್ರ ದೇವ್ ಸಿಂಗ್ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.