ಕೃತಕ ಹಲ್ಲು ಅಳವಡಿಸಿಕೊಂಡಿರುವವರೇ ಎಚ್ಚರ.!

ನೀರು ಕುಡಿಯುವ ವೇಳೆ ಕೃತಕ ಹಲ್ಲು ನುಂಗಿ ಮಹಿಳೆ ದುರ್ಮರಣ

 

ಚೆನ್ನೈ: ನೀರು ಕುಡಿಯುವಾಗ ತನ್ನಗೆ ಬಾಯಿಗೆ ಕೃತಕವಾಗಿ ಅಳವಡಿಸಲಾಗಿದ್ದ ಹಲ್ಲುಗಳನ್ನು ನುಂಗಿದ ಹಿನ್ನೆಲೆ ಮಹಿಳೆಯೋರ್ವಳು ಸಾವನ್ನಪ್ಪಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.

ವರದಿಯ ಪ್ರಕಾರ ವಲಸರವಕ್ಕಂನ 43 ವರ್ಷ ವಯಸ್ಸಿನ ರಾಜಲಕ್ಷ್ಮಿ ಎಂಬುವವರು ಜುಲೈ 4ರಂದು ನೀರು ಕುಡಿಯುವ ವೇಳೆ ತನ್ನ ಬಾಯಿಯಲ್ಲಿ ಅಳವಡಿಸಲಾಗಿದ್ದ ಮೂರು ಹಲ್ಲುಗಳನ್ನು ನುಂಗಿದ್ದರು. ನಂತರ ರಾಜಲಕ್ಷ್ಮಿಗೆ ವಾಂತಿ ಮತ್ತು ಸುಸ್ತು ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ರಾಜಲಕ್ಷ್ಮಿಯನ್ನು ಪರೀಕ್ಷೆ ಮಾಡಿದ ವೈದ್ಯರು ಯಾವುದೇ ಸಮಸ್ಯೆಯಾಗುವುದಿಲ್ಲವೆಂದು ಎಂದು ಆಕೆಯನ್ನು ಡಿಸ್ಚಾರ್ಜ್ ಮಾಡಿದ್ದರು. ಆದರೆ, ಮಾರನೆ ದಿನ ನಿಶಕ್ತಿಯಾದ ಹಿನ್ನೆಲೆ ಆಕೆಯನ್ನು ಆಸ್ಪತ್ರೆಗೆ ಕರೆತರುವ ವೇಳೆ ದಾರಿ ಮಧ್ಯೆ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.

ಇದು ಅಸ್ವಾಭಾವಿಕ ಸಾವು ಎಂಧು ಪೊಲೀಸರು ದೂರು ದಾಖಲಿಸಿದ್ದು, ಕಳೆದ ಏಳು ವರ್ಷಗಳ ಹಿಂದೆ ರಾಜಲಕ್ಷ್ಮಿ ಅವರಿಗೆ ಅಳವಡಿಸಲಾಗಿದ್ದರಿಂದ ಹಲ್ಲುಗಳು ಸಡಿಲವಾಗಿದ್ದಿರಬಹುದು ಎಂದು ತಿಳಿಸಿದ್ದಾರೆ.