IPL 2022: ಅರ್ ಸಿಬಿಗೆ ಡುಪ್ಲೆಸಿಸ್ ಹೊಸ ಕ್ಯಾಪ್ಟನ್!

37 ವರ್ಷದ ಡು ಪ್ಲೆಸಿಸ್ ಇವರೆಗೆ ಐಪಿಎಲ್‌ನಲ್ಲಿ 100 ಪಂದ್ಯಗಳನ್ನು ಆಡಿದ್ದಾರೆ, 131-ಪ್ಲಸ್ ಸ್ಟ್ರೈಕ್ ರೇಟ್‌ನಲ್ಲಿ 2935 ರನ್ ಭಾರಿಸಿದ್ದಾರೆ.  ಕಳೆದ ವರ್ಷ CSK ಚಾಂಪಿಯನ್ 
 

IPL 15 ಅವೃತ್ತಿಗೆ ದಕ್ಷಿಣ ಅಫ್ರಿಕಾದ ಮಾಜಿ ನಾಯಕ ಡು ಪ್ಲೆಸಿಸ್ ಅವರನ್ನು ತನ್ನ ನಾಯಕನನ್ನಾಗಿ ಘೋಷಿಸಿದ ಅರ್ ಸಿಬಿ .

 37 ವರ್ಷದ ಅನುಭವಿ ಬ್ಯಾಟ್ಸ್‌ಮನ್, ಹಲವು ವರ್ಷಗಳಿಂದ ಚೆನ್ನೈ ಸೂಪರ್ ಕಿಂಗ್ಸ್‌ನ ಭಾಗವಾಗಿದ್ದ ಪ್ಲೆಸಿಸ್,

ಐಪಿಎಲ್ ಮೆಗಾ ಹರಾಜಿನಲ್ಲಿ ಬರೊಬ್ಬರಿ 7 ಕೋಟಿ ಮೊತ್ತಕ್ಕೆ RCBಯ ತೆಕ್ಕೆಗೆ...

ಕಳೆದ ವರ್ಷ CSK ಚಾಂಪಿಯನ್ ಅಗಲು ಪ್ರಮುಖ ಪಾತ್ರ ವಹಿಸಿದ ಪ್ಲೆಸಿಸ್..

ತೀವ್ರ ಕುತೂಹಲ ಕೆರಳಿಸಿದ RCB ನಾಯಕ ಸ್ಥಾನದ ಚರ್ಚೆಗೆ ತೆರೆಬಿದ್ದಿದೆ.  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ IPL 15 ಅವೃತ್ತಿಗೆ ದಕ್ಷಿಣ ಅಫ್ರಿಕಾದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಅವರನ್ನು ತನ್ನ ನಾಯಕನನ್ನಾಗಿ ಘೋಷಿಸಿದೆ. 37 ವರ್ಷದ ಅನುಭವಿ ಬ್ಯಾಟ್ಸ್‌ಮನ್, ಹಲವು ವರ್ಷಗಳಿಂದ ಚೆನ್ನೈ ಸೂಪರ್ ಕಿಂಗ್ಸ್‌ನ ಭಾಗವಾಗಿದ್ದಾ ಪ್ಲೆಸಿಸ್, ಐಪಿಎಲ್ ಮೆಗಾ ಹರಾಜಿನಲ್ಲಿ RCBಯ ತೆಕ್ಕೆಗೆ ಬಂದಿದ್ದರು. ಅಗ್ರ ಖರೀದಿದಾರರಲ್ಲಿ ಒಬ್ಬರಾಗಿ ಬರೊಬ್ಬರಿ 7ಕೋಟೆ ಮೊತ್ತಕ್ಕೆ RCB ಪಾಳಯಕ್ಕೆ ಸೇರಿಕೊಂಡರು.

ಬೆಂಗಳೂರಿನ ಮ್ಯೂಸಿಯಂ ರಸ್ತೆಯಲ್ಲಿ ಶನಿವಾರ ನಡೆದ ವರ್ಚುವಲ್ ಈವೆಂಟ್‌ನಲ್ಲಿ ತಂಡದ ಅಧ್ಯಕ್ಷ ಪ್ರಥಮೇಶ್ ಮಿಶ್ರಾ ಮತ್ತು ಮೈಕ್ ಹೆಸ್ಸನ್ ಅವರು ಪ್ಲೆಸಿಸ್ ಗೆ RCB ಕ್ಯಾಪ್ ನೀಡಿ ತಂಡಕ್ಕೆ ಸ್ವಾಗತಿಸಿದರು.

ನಂತರ ಮತನಾಡಿದ ಪ್ಲೆಸಿಸ್ “ಈ ಅವಕಾಶಕ್ಕಾಗಿ ನಾನು ಬಹಳ ಕೃತಜ್ಞನಾಗಿದ್ದೇನೆ.  ನಾನು ಸಾಕಷ್ಟು IPL ಆಡಿದ್ದೇನೆ ಮತ್ತು ಆಟದ ಡೈನಾಮಿಕ್ಸ್ ಅನ್ನು ಅರ್ಥಮಾಡಿಕೊಂಡಿದ್ದೇನೆ. ವಿದೇಶಿ ಆಟಗಾರನನ್ನು ನಂಬಿ ನಾಯಕನ ಸ್ಥಾನ ನೀಡುವುದು ಸಣ್ಣ ವಿಷಯವಲ್ಲ ”ಎಂದರು. 

ಇನ್ನೂ, RCB ಮಾಜಿ ನಾಯಕ ಕೋಹ್ಲಿ ಕುರಿತಾಗಿ ಮತನಾಡಿ 'ಕ್ರಿಕೆಟ್ ಆಟಗಾರನಾಗಿ ಕೊಹ್ಲಿ ಪ್ರದರ್ಶನವು ಶ್ರೇಷ್ಠವಾಗಿದೆ, ಅವರು ಭಾರತೀಯ ಕ್ರಿಕೆಟ್ ಅನ್ನು ಬದಲಾಯಿಸಿದ್ದಾರೆ.ಆರ್‌ಸಿಬಿಗೆ ಯಾವಾಗಲೂ ವಿರಾಟ್‌ ಶಕ್ತಿಯ ಅಗತ್ಯವಿರುತ್ತದೆ. ಕೊಹ್ಲಿ ನಾಯಕತ್ವವನ್ನು ತ್ಯಜಿಸಿರಬಹುದು ಆದರೆ ಐಪಿಎಲ್ ಅಭಿಯಾನದ ಪ್ರತಿ ಹಂತದಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಅವರ ಶಕ್ತಿಯ ಅಗತ್ಯವಿದೆ ಎಂದು ಹೊಸದಾಗಿ ನೇಮಕಗೊಂಡ ನಾಯಕ ಫಾಫ್ ಡು ಪ್ಲೆಸಿಸ್ ಹೇಳಿದರು.


37 ವರ್ಷದ ಡು ಪ್ಲೆಸಿಸ್ ಇವರೆಗೆ ಐಪಿಎಲ್‌ನಲ್ಲಿ 100 ಪಂದ್ಯಗಳನ್ನು ಆಡಿದ್ದಾರೆ, 131-ಪ್ಲಸ್ ಸ್ಟ್ರೈಕ್ ರೇಟ್‌ನಲ್ಲಿ 2935 ರನ್ ಭಾರಿಸಿದ್ದಾರೆ.  ಕಳೆದ ವರ್ಷ CSK ಚಾಂಪಿಯನ್ ಅಗಲು ಪ್ರಮುಖ ಪಾತ್ರ ವಹಿಸಿದ ಅವರು ಸಿಎಸ್‌ಕೆ ಪರ 633 ರನ್ ಗಳಿಸಿದ್ದರು.