ಕಾರ್ ರೇಸ್ ಪೋಟೋ ಶೇರ್ ಮಾಡಿ ಟ್ರೋಲ್ಗೊಳಗಾದ ಸೌರವ್ ಗಂಗೂಲಿ

ಟ್ರೋಲ್ ಹೆಚ್ಚಾಗುತ್ತಿದ್ದಂತೆ ಪೋಸ್ಟ್ ಡೆಲೀಟ್ ಮಾಡಿದ ಬಿಸಿಸಿಐ ಅಧ್ಯಕ್ಷ

 

ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಅವರು ಸದ್ಯ ದುಬೈನಲ್ಲಿದ್ದಾರೆ. ಇಂಡಿಯನ್ ಪ್ರೀಮಯರ್ ಲಿಗ್ ನ 14ನೇ ಆವೃತಿಯನ್ನು ಮುಂದುವರಿಸುವ ಕುರಿತು ವಿವಿಧ ಸ್ಟೇಕ್ ಹೋಲ್ಡರ್ ಗಳ ಜೊತೆ ಮಾತುಕತೆ ನಡೆಸುತ್ತಿದ್ದಾರೆ.

ಇದೇ ಸಂದರ್ಭದಲ್ಲಿ, 48 ವರ್ಷದ ಮಾಜಿ ಕ್ರಿಕೆಟಿಗ ಹಾಗೂ ಬಿಸಿಸಿಐ ಅಧ್ಯಕ್ಷ ದುಬೈ ಆಟೋ ಡ್ರೋನ್ ಗೆ ಬೇಟಿ ನೀಡಿ ಮೋಟಾರ್ ಸಿಟಿ ಕಾರ್ ರೇಸಿಂಗ್ ನಲ್ಲಿ ಬಾಗವಹಿಸಿದ್ದಾರೆ. ರೇಸ್ ನಲ್ಲಿ ಬಾಗವಹಿಸಿದ್ದ ಪೋಟೋವೊಂದನ್ನು ಗಂಗೂಲಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಪೋಟೋ ವೈರಲ್ ಆಗುತ್ತಿದ್ದಂತೆ. ಕೆಲ ನೆಟ್ಟಿಗರು ಆಕ್ರೋಶಗೊಂಡಿದ್ದಾರೆ. ಇಡೀ ದೇಶ ಕೊರೋನಾ ಸಂಕಷ್ಟ ಸಿಲುಕಿರುವಾಗ ಜನರಿಗೆ ಮಾದರಿಯಾಗ ಬೇಕಾದ ವ್ಯಕ್ತಿ, ಈ ರೀತಿ ಮೋಜು ಮಸ್ತಿಯಲ್ಲಿ ತೊಡಗಬಹುದೇ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಈ ಪೋಟೋವನ್ನು ಟ್ರೋಲ್ ಮಾಡಿದ್ದಾರೆ.

ಇದರಿಂದ ಎಚ್ಚೆತ್ತುಕೊಂಡ ಸೌರವ್ ಗಂಗೂಲಿ ತಕ್ಷಣವೇ ಪೋಸ್ಟನ್ನು ಡೆಲೀಟ್ ಮಾಡಿದ್ದಾರೆ.