ಮಗನ ಸೈಕಲನ್ನು ನೇಗಿಲನ್ನಾಗಿ ಪರಿವರ್ತಿಸಿ ಉಳಿಮೆ ಮಾಡಿದ ರೈತ

ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಬೇಕು ಸರ್ಕಾರದ ನೆರವು

 

ದೇಶದ ರೈತರ ಆದಾಯವನ್ನು ದ್ವಿಗುಣ ಮಾಡುವುದಾಗಿ ಒಕ್ಕೂಟ ಸರ್ಕಾರ ಹೇಳುತ್ತಲೇ ಇದೆ. ಆದರೆ, ಕೊರೋನಾ ಸಾಂಕ್ರಾಮಿಕದ ನಂತರ ರೈತರ ಬದುಕು ಮೂರಾಬಟ್ಟೆಯಾಗಿ ಬೀದಿಗೆ ಬಂದು ನಿಂತಿದೆ. ಕೊರೋನಾ ನಂತರ ರೈತರ ತುಂಬಾ ನಷ್ಟ ಅನುಭವಿಸಿದ್ದು, ರೈತರ ಆದಾಯಕ್ಕೆ ಕತ್ತರಿ ಬಿದ್ದಿದೆ.

ಮಳೆಗಾಲ ಪ್ರಾರಂಭವಾದ ನಂತರ ರೈತರಿಗೆ ಬಿತ್ತನೆ ಮಾಡಲು ಹಣಕಾಸಿನ ಕೊರತೆ ಎದುರಾಗಿದ್ದು, ತಮಿಳುನಾಡಿದ ಥಿರುಥನ್ನಿ ಜಿಲ್ಲೆಯ ಅಗೂರು ಗ್ರಾಮದ ರೈತನೋರ್ವ, ಹಣಕಾಸಿನ ತೊಂದರೆ ಎದುರಾದ ಹಿನ್ನೆಲೆ ತನ್ನ ಮಗನ ಸೈಕಲನ್ನು ನೇಗಿಲನ್ನಾಗಿ ಪರಿವರ್ತಿಸಿ ಭೂಮಿಯನ್ನು ಉಳುಮೆ ಮಾಡಿದ್ದಾನೆ.

ಈ ಹಿಂದೆ ಭತ್ತ ಬೆಳದು ನಷ್ಟ ಅನಿಭವಿಸಿದ್ದ 37 ವರ್ಷದ ರೈತ ನಾಗರಾಜ್ ಮತ್ತು ಸಹೋದರರು ಸಮ್ಮಂಗಿ(ಸಂಪಿಗೆ) ಹೂಗಳನ್ನು ಬೆಳಯಲು ನಿರ್ಧಸಿ ಸಾಲ ಮಾಡಿದ ಆರು ತಿಂಗಳುಗಳ ಕಾಲ ಶ್ರಮವಹಿಸಿ ದುಡಿದರು. ಇನ್ನೇನು ಫಸಲು ಕೈಸೇರುವ ಸಮಯದಲ್ಲಿ ಕೋವಿಡ್ ವೈರಸ್ ತೆಗಟ್ಟಲು ದೇಶದಾದ್ಯಂತ ಲಾಕ್ ಡೌನ್ ಮಾಡಲಾಯ್ತು.

ಮದುವೆ ಮತ್ತು ಇತರೆ ಎಲ್ಲಾ ಧಾರ್ಮಿಕ ಸಮಾರಂಭಗಳಿಗೆ ಲಾಕ್ ಡೌನ್ ನಿಂದ ಬ್ರೇಕ್ ಬಿದ್ದ ಹಿನ್ನೆಲೆ ಇವರ ಸಮ್ಮಂಗಿ(ಸಂಪಿಗೆ) ಹೂವಿನ ಆದಾಯದ ಆಸೆಗೆ ಕೊಳ್ಳಿಬಿತ್ತು. ಇದರಿಂದ ನಾಗರಾಜ್ ಕುಟುಂಬ ತುಂಬಾ ಸಮಸ್ಯೆಗಳನ್ನು ಅನುಭವಿಸಬೇಕಾಗಿ ಬಂತು.

ಇದ್ದ ಬದ್ದ ಹಣವನ್ನೆಲ್ಲಾ ಕಳೆದುಕೊಂಡ ನಾಗರಾಜ್ ಅವರ ಕುಟುಂಬ ಭೂಮಿ ಮೇಲಿನ ನಂಬಿಕೆಯನ್ನು ಬಿಡದೇ ಮತ್ತೆ ಸಮ್ಮಂಗಿ(ಸಂಪಿಗೆ) ಬೆಳೆಯನ್ನು ಭಿತ್ತಲು ನಿರ್ಧರಿಸಿದರು.

ಉಳಿಮೆ ಮಾಡಲು ಹಣಕಾಸಿನ ತೊಂದರೆ ಎದುರಾದ ಹಿನ್ನೆಲೆ ಮತ್ತು ನಷ್ಟವನ್ನು ತಪ್ಪಿಸಿಕೊಳ್ಳಲು ತಮಿಳುನಾಡು ಸರ್ಕಾರ ತಮ್ಮ ಮಗನಿಗೆ ನೀಡಿದ್ದ ಸೈಕಲನ್ನೇ ನೇಗಿಲನ್ನಾಗಿ ಪರಿವರ್ತಿಸಿ ತಮ್ಮ ಸಹೋದರನ ಮಗನನ್ನು ಕರೆದುಕೊಂಡು ಹಲವಾರು ಗಂಟೆಗಳ ಕಾಲ ಭೂಮಿಯನ್ನು ಉಳುಮೆ ಮಾಡಿದ್ದಾರೆ.

ನಮಗೆ ಆಹಾರದ ಸಮಸ್ಯೆ ಎದುರಾಗಿದೆ ಹಾಗೆ ನಮಗೆ ಬೇರೆ ಆಯ್ಕೆಗಳಿಲ್ಲದೆ, ನಾನು ನಮ್ಮ ಮಗನ ಸೈಕಲನ್ನು ಬಳಸಿಕೊಂಡು ಉಳುಮೆ ಮಾಡಿದ್ದೇನೆ ಎಂದು ನಾಗರಾಜ್ ಹೇಳಿದ್ದು, 11ವರ್ಷದ ಹುಡುಗ ಧನಚೆಜಿಯಾನ್ ಮಾತನಾಡಿ ನನಗೆ ನನ್ನ ಅಪ್ಪ ಮತ್ತು ನನ್ನ ಪೂರ್ವಿಕರಂತೆ ಕೃಷಿಯನ್ನೇ ಮಾಡಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾನೆ.

ಸಮ್ಮಂಗಿ ಬೆಳೆ ಬೇಳೆಯುವುದು ತುಂಬಾ ಕಷ್ಟಕರವಾದ ಕೆಲಸ, ಈ ಬೆಳೆ ಬೆಳೆದರೂ ಆರು ತಿಂಗಳುಗಳ ಕಾಲ ಅದರಿಂದ ಏನನ್ನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ, ಈ ಲಾಕ್ ಡೌನ್ ನಿಂದಾಗಿ ನಾವು ಎರಡು ಬೆಳೆಯನ್ನು ನಷ್ಟ ಮಾಡಿಕೊಂಡಿದ್ದೇವೆ ಎಂದು ನಾಗರಾಜ್ ಸಹೋದರ ಅಲೆಕ್ಸ್ ಪಾಂಡಿಯನ್ ಹೇಳಿದ್ದಾರೆ.

ಈ ಪರಿಸ್ಥಿತಿಯನ್ನು ನಾವು ಸರಿಯಾಗಿ ನಿಭಾಯಿಸಲು ಸಾಧ್ಯವಾಗದ ಹಿನ್ನೆಲೆ ಈ ಹೊಸ ಪಧ್ಧತಿಯನ್ನು ಕಂಡುಕೊಂಡೆವು, ಲಾಕ್ ಡೌನ್ ವೇಳೆ ನಾವು ತುಂಬಾ ಸಮಸ್ಯೆಗಳನ್ನು ಅನುಭವಿಸಿದ್ದು, ಈ ಭೂಮಿ ಮಾತ್ರ ನಮ್ಮ ಬಳಿ ಉಳಿದಿದೆ ಇದನ್ನು ಮಾತ್ರ ನಾವು ಎಂದೂ ಮಾರಾಟ ಮಾಡುವುದಿಲ್ಲ ಎಂದು ಪಾಂಡಿಯನ್ ತಿಳಿಸಿದ್ದಾರೆ.

ಲಾಕ್ ಡೌನ್ ನಿಂದ ದೇಶದ ರೈತರು ತುಂಬಾ ಸಂಕಷ್ಟಕ್ಕೆ ಸಿಲುಕಿದ್ದು ಅವರಿಗೆ ಒಕ್ಕೂಟ ಮತ್ತು ರಾಜ್ಯ ಸರ್ಕಾರಗಳಿಂದ ನಿರವಿನ ಅಗತ್ಯವಿದೆ.