ಆನೆ ಹೆಲ್ಮೆಟ್ ತಿನ್ನತ್ತಾ..!?, ಬೈಕ್ ಹತ್ತಿರ ಬಂದ ಆನೆ ಏನ್ ಮಾಡ್ತು?
ಹೌದು, ಈ ತರಹದ ಒಂದು ಪ್ರಶ್ನೆ ಇದೀಗ ದೃಶ್ಯ ನೋಡೊದ ಮೇಲೆ ನಿಮಗೆ ಮೂಡದೇ ಇರದು, ಯಾಕಂದ್ರೆ, ಆ ತರಹದ ವಿಚಿತ್ರ ವೀಡಿಯೋವೊಂದು ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡುತ್ತಿದೆ.
ಬೈಕ್ ಪಾರ್ಕ್ ಮಾಡಿದ್ದ ಬೈಕ್ ಒಂದರ ಬಳಿ ಬರುವ ಗಜಾನನ ಬೈಕ ಹ್ಯಾಂಡಲ್ ಗೆ ನೇತುಹಾಕಲಾಗಿದ್ದ ಹೆಲ್ಮೆಟ್ ಅನ್ನು ಸೊಂಡಿಲಿನಿಂದ ಅಲುಗಾಡಿಸಿ ಎತ್ತುಕೊಳ್ಳುತ್ತದೆ, ನಂತರ ಬಾಯಿ ಒಳಗೆ ಹಾಕ್ಕೊಂಡು ಆನೆ ನಡೆದದ್ದೆ ದಾರಿ ಅಂತಾ ಸೈಲಂಟಾಗಿ ನೆಡೆದು ಹೋಗುತ್ತಿದೆ.
Ohh no... pic.twitter.com/TpPB4NCRZd
— Susanta Nanda IFS (@susantananda3) June 11, 2021 ">ಇದನ್ನು ದೂರದಿಂದ ನೋಡುತ್ತಾ ವೀಡಿಯೋ ಮಾಡಿರುವ ಬೈಕ್ ಸವಾರ, ಓ ಬೇಡ, ನನ್ನ ಹೆಲ್ಮೆಟ್ ಹೋಯ್ತು ಎಂದು ವೀಡಿಯೋ ಮಾಡುತ್ತಾನೆ ನಂತರ ಅರೇ ಅಣ್ಣ ನನ್ನ ಹೆಲ್ಮೆಟ್ ವಾಪಾಸ್ ಕೊಡು, ಹೆಲ್ಮೆಟ್ ಇಲ್ದೆ ನಾನ್ ಹೇಗ್ ಹೋಗಲಿ ಎಂದು ಆನೆಯನ್ನು ವೀಡಿಯೋ ಮಾಡುತ್ತಾ ಬೇಡಿಕೊಳ್ಳುತ್ತಾನೆ ಇದು ಒಂದು ರೀತಿ ತಮಾಷೆಯಾಗಿ ಕಾಣುತ್ತದೆ.
ಈ ಘಟನೆ ಗುವಾಹಟ್ಟಿಯ ನರೆಂಗಿ ಆರ್ಮಿ ಕ್ಯಾಂಪ್ ಬಳಿ ನಡೆದಿದೆ ಎಂದು ಪ್ರಾಗ್ ನ್ಯೂಸ್ ವರದಿ ಮಾಡಿದೆ. ಈ ವಿಡಿಯೋವನ್ನು ಐಎಫ್ಎಸ್ ಅಧಿಕಾರಿ ಸುಶಾಂತ ನಂದ ಎಂಬುವವರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.