ವಿಜಯಪುರದಲ್ಲಿ 20 ಬ್ಲ್ಯಾಕ್ ಫಂಗಸ್ ಕೇಸ್ ಪತ್ತೆ: ಡಿಸಿ ಪಿ.ಸುನೀಲಕುಮಾರ್
ವಿಜಯಪುರದಲ್ಲಿ ತಲ್ಲಣ ಶೃಷ್ಟಿಸಿದ ಬ್ಲ್ಯಾಕ್ ಫಂಗಸ್
ವಿಜಯಪುರ: ಕೊರೊನಾ ಎರಡನೇ ಅಲೆ ಸದ್ಯ ರಾಜ್ಯವನ್ನು ತಲ್ಲಣಗೊಳಿಸಿದೆ. ಇಂತಹ ತಲ್ಲಣದ ನಡುವೆ ಬ್ಲ್ಯಾಕ್ ಫಂಗಸ್ ಹಾವಳಿ ಮತ್ತಷ್ಟು ಆತಂಕ ಮೂಡಿಸಿದೆ.
ಇತ್ತ ವಿಜಯಪುರ ಜಿಲ್ಲೆಗೆ ಕಾಲಿಟ್ಟ ಬ್ಲ್ಯಾಕ್ ಫಂಗಸ್ ಎಂಟ್ರಿ ಕೊಟ್ಟಿದೆ. ಜಿಲ್ಲೆಯಲ್ಲಿ 20 ಪ್ರಕರಣ ಪತ್ತೆಯಾಗಿವೆ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಮಾಹಿತಿ ನೀಡಿದ್ದಾರೆ. ಸದ್ಯ 20 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಜಿಲ್ಲೆಯಲ್ಲಿ ಪತ್ತೆಯಾಗಿವೆ. ಬ್ಲ್ಯಾಕ್ ಫಂಗಸ್ ಪ್ರಕರಣಕ್ಕೆ ಸಪರೇಟ್ ವಾರ್ಡ ಮಾಡಿ ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸುನೀಲ್ ಕುಮಾರ್ ತಿಳಿಸಿದ್ದಾರೆ.
ಇನ್ನು ಹೆಚ್ಚು ಪ್ರಕರಣಗಳಿರುವ ಸಾಧ್ಯತೆ ಇದ್ದು ಸಂಜೆ ವೇಳೆಗೆ ನಿಖರ ಪ್ರಕರಣಗಳು ಸಿಗುವ ಸಾಧ್ಯತೆ. ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಇನ್ನೂ ಯಾವುದೇ ಪ್ರಕರಣ ಪತ್ತೆಯಾಗಿಲ್ಲ, ಅಂತಹ ಪ್ರಕರಣ ಬಂದರೆ ಅಲ್ಲೂ ಬೇರೊಂದು ವಾರ್ಡ್ ಮಾಡುವ ಯೋಚನೆ ಇದೆ, ಸಂಜೆ ವರೆಗೂ ಇದಕ್ಕೆ ಸ್ಪಷ್ಟತೆ ಸಿಗುತ್ತದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಮಾಹಿತಿ ನೀಡಿದ್ದಾರೆ.