ಟೋಯಿಂಗ್ ರೂಲ್ಸ್ ಚೇಂಜ್..! ಜನಸ್ನೇಹಿಯಾಗಿರುವಂತೆ ಪೋಲಿಸರಿಗೆ ಗೃಹಸಚಿವ ಅರಗ ಜ್ಞಾನೇಂದ್ರ ಖಡಕ್ ಸೂಚನೆ..

*ಟೋಯಿಂಗ್ ಮಾಡೋ ಹುಡುಗರು ಸಾರ್ವಜನಿಕ ಜೊತೆ ಮಾತನಾಡುವ ಹಾಗಿಲ್ಲ. ಸಾರ್ವಜನಿಕ ಜೊತೆ ಕೇವಲ ASI ಅಥವಾ PSI ಮಾತ್ರ ಮಾತನಾಡಬೇಕು.
*ಇಷ್ಟು ದಿನ ASI ಮಾತ್ರ ಟೋಯಿಂಗ್ ವಾಹನದಲ್ಲಿ ಕೂರ್ತಾ ಇದ್ರು ಇನ್ಮುಂದೆ PSI ಗಳನ್ನು ಡ್ಯೂಟಿಗೆ ಹಾಕಬೇಕು.
*ಟೆಂಡರ್ ತಗೊಂಡವರೇ ಟೋಯಿಂಗ್ ವಾಹನ ನಡೆಸಬೇಕು ಬೇರೆಯವರಿಗೆ ನೀಡವಂತಿಲ್ಲ.
ಟೋಯಿಂಗ್ ಕಿರಿಕ್ ವಿರುದ್ದ ಸಾರ್ವಜನಿಕರ ಅಕ್ರೋಶ ಹೆಚ್ಚಾದ ಬೆನ್ನಲ್ಲೇ, ಗೃಹಸಚಿವ ಅರಗ ಜ್ಞಾನೇಂದ್ರ ನೇತೃತ್ವದಲ್ಲಿ ಪೋಲಿಸ್ ಸಿಬ್ಬಂದಿಯವರೊಂದಿಗೆ ಸಭೆ ನಡೆಸಲಾಗಿದ್ದು, ಪೋಲಿಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಸಂಚಾರಿ ಪೋಲಿಸ್ ಜಂಟಿ ಅಯುಕ್ತ ರವಿಕಾಂತೇಗೌಡ ಭಾಗಿಯಾಗಿದ್ದರು. ಈ ಮೀಟಿಂಗ್ ನಲ್ಲಿ ಟೋಯಿಂಗ್ ವಾಹನಗಳ ಕಾರ್ಯನಿರ್ವಣೆಯ ಕುರಿತಂತೆ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದ್ದು, ಟೋಯಿಂಗ್ ಸಿಬ್ಬಂದಿ ಹಾಗೂ ಪೋಲಿಸರು ಜನಸ್ನೇಹಿಯಾಗಿ ಕಾರ್ಯನಿರ್ವಹಿಸುವಂತೆ ತುಂಬಾ ಸ್ಟ್ರಿಕ್ಟ್ ಆಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೇ.
ಸಭೆಯಲ್ಲಿನ ಪ್ರಮುಖ ನಿರ್ಧಾರಗಳು
* ಈಗೀರುವ ಟೋಯಿಂಗ್ ವಾಹನಗಳನ್ನು 50-50 ಅನುಪಾತದಲ್ಲಿ ಕಾರ್ಯನಿರ್ವಣೆಗೆ ಬಳಸಿಕೊಳ್ಳಬೇಕು. ಅಂದರೇ, ಇರೋ ವಾಹನಗಳನ್ನು 2 ಗುಂಪಾಗಿ ವಿಂಗಡನೆ ಮಾಡಿ
ಅರ್ಧ ವಾಹನಗಳು 15 ದಿನ ಕೆಲಸ ಮಾಡಿದ್ರೆ ಉಳಿದ 15 ದಿನ ರಜೆ ನೀಡಬೇಕು.
* ಹಳೇ ನೋಪಾರ್ಕಿಂಗ್ ಬೋರ್ಡ್ ಗಳಲ್ಲಿ ಅಕ್ಷರಗಳು ಕಾಣಲ್ಲ ಎಂದು ಸಾರ್ವಜಿಕರು ದೂರಿದ್ದು, ಪಾರ್ಕಿಂಗ್ ಬೋರ್ಡ್ ಗಳನ್ನು ಹೊಸದಾಗಿ ಹಾಕುಬೇಕು
ಸುಮಾರು 100 ಕೋಟಿ ವೆಚ್ಚದಲ್ಲಿ ಹೊಸ ಬೋರ್ಡ್ ಹಾಕಲು ತೀರ್ಮಾನ.
*ಟೋಯಿಂಗ್ ಮಾಡೋ ಹುಡುಗರು ಸಾರ್ವಜನಿಕ ಜೊತೆ ಮಾತನಾಡುವ ಹಾಗಿಲ್ಲ. ಸಾರ್ವಜನಿಕ ಜೊತೆ ಕೇವಲ ASI ಅಥವಾ PSI ಮಾತ್ರ ಮಾತನಾಡಬೇಕು.
*ಇಷ್ಟು ದಿನ ASI ಮಾತ್ರ ಟೋಯಿಂಗ್ ವಾಹನದಲ್ಲಿ ಕೂರ್ತಾ ಇದ್ರು ಇನ್ಮುಂದೆ PSI ಗಳನ್ನು ಡ್ಯೂಟಿಗೆ ಹಾಕಬೇಕು.
*ಟೆಂಡರ್ ತಗೊಂಡವರೇ ಟೋಯಿಂಗ್ ವಾಹನ ನಡೆಸಬೇಕು ಬೇರೆಯವರಿಗೆ ನೀಡವಂತಿಲ್ಲ.
* ಸಾರ್ವಜನಿಕರೊಂದಿಗೆ ಟೋಯಿಂಗ್ ಸಿಬ್ಬಂದಿ ಅನಗತ್ಯ ಕಿರಿಕ್ ಮಾಡಿದಲ್ಲಿ ಟೋಯಿಂಗ್ ಮಾಲೀಕರ ಮೇಲೇಯೇ ಕ್ರಿಮಿನಲ್ ಕೇಸ್, ಬ್ಲಾಕ್ ಲೀಸ್ಟ್ ಹಾಕಲು ಸೂಚನೆ.
ಇನ್ನೂ ದಂಡ ಕಡಿಮೆ ಮಾಡುವಂತೆಯು ಸಭೆಯಲ್ಲಿ ಚರ್ಚೆಯಾದರು ಸದ್ಯಕ್ಕೆ ಬೇಡ ಮುಂದೆ ನೋಡೋಣ ಎಂದು ಗೃಹಸಚಿವರು ಹೇಳಿದರು.