ಹೊಸ ಕೊರೋನಾ ಹಾಟ್ ಸ್ಪಾಟಾಯ್ತಾ ಕರ್ನಾಟಕ.!

ಕೇಂದ್ರ ಆರೋಗ್ಯ ಮಂತ್ರಾಲಯ ಹೇಳಿದ್ದೇನು.?

 | 
ಹೊಸ ಕೊರೋನಾ ಹಾಟ್ ಸ್ಪಾಟಾಯ್ತಾ ಕರ್ನಾಟಕ.!

ಬೆಂಗಳೂರು: ಕಳೆದ ಎರಡು ವಾರಗಳಿಂದ ಕರ್ನಾಟಕ ಹೆಚ್ಚು ಕೊರೋನಾ ಪ್ರಕರಣಗಳನ್ನು ನೋಡುತ್ತಿದ್ದು, ಕೊರೋನಾ ಸೋಂಕಿಗೆ ಸಂಬಂಧಿಸಿದ ಸಾವು ನೋವುಗಳು ಮತ್ತು ಹೊಸ ಪ್ರಕರಣಗಳು ರಾಜ್ಯವನ್ನು ಚಿಂತೆಗೀಡು ಮಾಡಿದೆ.

5,98,625 ದೇಶದಲ್ಲೇ ಹೆಚ್ಚು ಸಕ್ರಿಯ ಪ್ರಕರಣಗಳೊಂದಿಗೆ ಕರ್ನಾಟಕ ರಾಜ್ಯ ದೇಶದ ಹೊಸಾ ಕೊರೋನಾ ಹಾಟ್ ಸ್ಪಾಟಾಗಿ ಹೊರಹೊಮ್ಮಿದೆ. ಮಹಾರಾಷ್ಟ್ರ ರಾಜ್ಯ 5,21,683 ಪ್ರಕರಣಗಳೊಂದಿಗೆ ಎರಡನೇ ಸ್ಥಾನದಲ್ಲಿದೆ ಎಂದು ಕೇಂದ್ರ ಆರೋಗ್ಯ ಮಂತ್ರಾಲಯ ತಿಳಿಸಿದೆ.

ಬೆಂಗಳೂರಿನಲ್ಲಿ ಕೊರೋನಾ ಪ್ರಕರಣಗಳಲ್ಲಿ ಇಳಿಕೆ ಕಂಡರೂ, ಕಳೆದ 24ಗಂಟೆಯಲ್ಲಿ 38.13 ಶೇಖಡವಾರು ಅಧಿಕ ಪಾಸಿಟಿವಿಟಿ ರೇಟ್ ಏರುಗತಿಯಲ್ಲೇ ಉಳಿದಿದೆ. ಕಳೆದ ದು ವಾರದಲ್ಲಿ ಬೆಂಗಳೂರಿನಲ್ಲೆ ಸಾವಿನ ಸಂಖ್ಯೆ ಹೆಚ್ಚಾಗಿದೆ. ಸಾಂಕ್ರಾಮಿಕ ಶುರುವಾದಾಗಿನಿಂದ ಈವರೆಗೆ 6,538 ಕೊರೋನಾ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಹೇಳಿದೆ.

5,98,625 ಸಕ್ರಿಯ ಪ್ರಕರಣಗಳಲ್ಲಿ 3,60,862 ಪ್ರಕರಣಗಳು ಬೆಂಗಳೂರಿನಲ್ಲೇ ಕೇಂದ್ರೀಕೃತವಾಗಿವೆ ಎಂದು ಕೇಂದ್ರ ರೋಗ್ಯ ಮಂತ್ರಾಲಯ ಹೇಳಿದೆ.