ಇದೇ ಮೊದಲ ಬಾರಿ H10N3 ಹಕ್ಕಿಜ್ವರ ಚೀನಾದ ಮನುಷ್ಯನಲ್ಲಿ ಪತ್ತೆ

ಚೀನಾ ರಾಷ್ಟ್ರೀಯ ಆರೋಗ್ಯ ಆಯೋಗದಿಂದ ಮಾಹಿತಿ

 | 
Representative Image

ಜಿಯಾಂಗ್ಸು(ಚೀನಾ): ಚೀನಾದ ಜಿಯಾಂಗ್ಸು ಪ್ರದೇಶದಲ್ಲಿ H10N3 ಹಕ್ಕಿಜ್ವರ ಇದೇ ಮೊದಲ ಬಾರಿಗೆ ಮನುಷ್ಯನಲ್ಲಿ ಪತ್ತೆಯಾಗಿರುವುದಾಗಿ ಚೀನಾ ರಾಷ್ಟ್ರೀಯ ಆರೋಗ್ಯ ಆಯೋಗ ಮಾಹಿತಿ ನೀಡಿದೆ.

H10N3 ಹಕ್ಕಿಜ್ವರದ ಪ್ರಕರಣ ಪೂರ್ವ ಜಿಯಾಂಗ್ಸು ಪ್ರದೇಶದಲ್ಲಿ ವಾಸವಾಗಿರುವ 41 ವರ್ಷದ ಝೆನ್ಜಿಯಾಂಗ್ ಎಂಬುವವರಲ್ಲಿ ಪತ್ತೆಯಾಗಿದ್ದು, ಇದು ಪೌಲ್ಟ್ರಿಯಿಂದ ಹರಡಿದೆ. ಆದರೆ, ಇತರರಿಗೆ ಇದು ಸಾಂಕ್ರಮಿಕವಾಗಿ ಹರಡುವುದು ಸಾಧ್ಯತೆ ತುಂಬಾ ಕಡಿಮೆ ಎಂದು ಆರೋಗ್ಯ ಆಯೋಗ ವೆಬ್ಸೈಟ್ ನಲ್ಲಿ ಹೇಳಿದೆ.

ಪ್ರಪಂಚದಲ್ಲಿ ಇದುವರೆಗೆ ಯಾವ ಮನುಷ್ಯನಲ್ಲೂ H10N3 ಹಕ್ಕಿಜ್ವರ ಕಂಡುಬಂದಿಲ್ಲ ಇದೇ ಮೊದಲ ಬಾರಿಗೆ ಈ ಮನುಷ್ಯನಲ್ಲಿ ಕಂಡುಬಂದಿದೆ. H10N3 ಒಂದು ಕಡಿಮೆ ರೋಗಕಾರಕ ಮತ್ತು ಪೌಲ್ಟ್ರಿಯಿಂದ ಕಂಡು ಬರುವ ವೈರಸ್ ಆಗಿದ್ದು, ದೊಡ್ಡ ಮಟ್ಟದಲ್ಲಿ ಹರಡವುದು ತುಂಬಾ ಕಡಿಮೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.

H10N3 ಕಕ್ಕಿಜ್ವರ ಪತ್ತೆಯಾಗಿದ್ದ ಮನುಷ್ಯನ ಸ್ಥಿತಿ ಈಗ ಸ್ಥಿರವಾಗಿದ್ದು, ಆತನನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಅವನ ಹತ್ತಿರದಲ್ಲಿದ್ದವರನ್ನು ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಯಾರಲ್ಲೂ ಈ ವೈರಸ್ ಕಂಡು ಬಂದಿಲ್ಲ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಮಾಹಿತಿ ನೀಡಿದೆ.