ಐಪಿಎಲ್ ಮೇಲೂ ಬಿತ್ತು ಕೊರೋನಾ ಕರಿನೆರಳು

ಕೆಕೆಆರ್ ನಂತರ ಸಿಎಸ್ ಕೆಯ ಇಬ್ಬರಿಗೆ ಕೋವಿಡ್ ಪಾಸಿಟಿವ್

 | 
ಐಪಿಎಲ್ ಮೇಲೂ ಬಿತ್ತು ಕೊರೋನಾ ಕರಿನೆರಳು

ಕೊರೋನಾ ಕರಿನೆರಳು ಕ್ರಿಕೆಟ್ ಹಬ್ಬ ಐಪಿಎಲ್ ಮೇಲೂ ಬಿದ್ದಿದೆ. ಕೊಲ್ಕತ್ತಾ ನೈಟ್ಸ್ ರೈಡರ್ಸ್ ಆಟಗಾರರಿಬ್ಬರಿಗೆ ಕರೋನಾ ಕಾಣಿಸಿಕೊಂಡ ನಂತರ ಇದೀಗ ಚೆನ್ನೈ ಸೂಪರ್ ಕಿಂಗ್ಸ್ ಪಾಳಯದಲ್ಲೂ ಕೋವಿಡ್ ಸೋಂಕು ಕಾಣಿಸಿಕೊಂಡಿದೆ.

ಚೆನ್ನೈ ಸೂಪರ್ ಕಿಂಗ್ಸ್ ನ ಸಿಇಓ ಕಾಶಿ ವಿಶ್ವನಾಥನ್, ಬೌಲಿಂಗ ಕೋಚ್ ಎಲ್. ಬಾಲಾಜಿ ಮತ್ತು ಬಸ್ ಕ್ಲೀನರ್ ಈ ಮೂರು ಜನರಿಗೆ ಕೋವಿಡ್ ತಗುಲಿದೆ ಎಂದು ಐಪಿಎಲ್ ಆಡಳಿತ ಮಂಡಳಿ ತಿಳಿಸಿದೆ. ಸಧ್ಯ ಚೆನ್ನೈ ಸೂಪರ್ ಕಿಂಗ್ಸ್ ತಂಡ ದೆಹಲಿಯಲ್ಲಿದ್ದು, ಕೋವಿಡ್ ತಂಡದ ಸದಸ್ಯರಿಗೆ ಕೋವಿಡ್ ತಗುಲಿರುವ ಹಿನ್ನೆಲೆ ತಮ್ಮ ಅಭ್ಯಾಸವನ್ನು ನಿಲ್ಲಿಸಿದ್ದಾರೆ.

ಐಪಿಎಲ್ ಪಂದ್ಯಗಳನ್ನು ಕೊರೋನಾ ಹಿನ್ನೆಲೆ ಭಾರಿ ಕಟ್ಟೆಚ್ಚರದಿಂದ ನಡೆಸಲಾಗುತ್ತಿದ್ದು, ಐಪಿಎಲ್ ಗೈಡ್ ಲೈನ್ಸ್ ಪ್ರಕಾರ ಯಾವುದೇ ತಂಡದ ಆಟಗಾರ ಅಥವಾ ಪ್ರಾಂಚೈಸಿ ಸದಸ್ಯರಿಗೆ ಕೋವಿಡ್ ಸೋಂಕು ತಗುಲಿದರೆ ಕನಿಷ್ಠ ಹತ್ತು ದಿನಗಳ ಕಾಲ ಐಸೋಲೇಶನ್ ನಲ್ಲಿ ಇರಬೇಕು ಮತ್ತು ಎರಡು ಟೆಸ್ಟ್ ಗಳಲ್ಲಿ ನೆಗೆಟಿವ್ ವರದಿ ಬಂದ ನಂತರ ಆಟವಾಡಲು ಅವಕಾಶ ನೀಡಲಾಗುತ್ತದೆ.

ಕೆಕೆಆರ್ ತಂಡದಲ್ಲಿ ವರೂಣ್ ಚಕ್ರವರ್ತಿ ಮತ್ತು ಸಂದೀಪ್ ವಾರಿಯರ್ ಇಬ್ಬರಲ್ಲಿ ಕೊರೋನಾ ಕಾಣಿಸಿಸೊಂಡಿದ್ದು, ಕೆಕೆಆರ್ ಮತ್ತು ಆರ್ ಸಿಬಿ ತಂಡಗಳ ನಡುವೆ ನಡೆಯಬೇಕಿದ್ದ ಪಂದ್ಯವನ್ನು ಮುಂದೂಡಲಾಗಿದೆ.