ಚೊಟ್ಟದ ಮೇಲಿದ್ದ ವೃಧ್ಧೆಯ ಅಳು ಗಮನಿಸಿ ದಂಗಾದ ಕುಟುಂಬಸ್ಥರು

ಕೊನೇ ಕ್ಷಣದಲ್ಲಿ ಎಚ್ಚರಗೊಂಡ ಕೊರೋನಾದಿಂದ ಸತ್ತಿದ್ದಾರೆಂದು ನಂಬಲಾಗಿದ್ದ ವೃದ್ಧೆ

 | 
ಚೊಟ್ಟದ ಮೇಲಿದ್ದ ವೃಧ್ಧೆಯ ಅಳು ಗಮನಿಸಿ ದಂಗಾದ ಕುಟುಂಬಸ್ಥರು

ಮುಂಬೈ: ಕೊರೋನಾ ಸೋಂಕಿನಿಂದ ಸತ್ತಿದ್ದಾಳೆ ಎಂದು ನಂಬಲಾಗಿದ್ದ 76 ವರ್ಷದ ವೃದ್ಧೆ ಅಂತ್ಯ ಸಂಸ್ಕಾರಕ್ಕೆ ಕುಟುಂಬಸ್ಥರು ತಯಾರಿ ನಡೆಸುತ್ತಿದ್ದ ವೇಳೆ ಎಚ್ಚರವಾಗಿ ಅಚ್ಚರಿ ಮೂಡಿಸಿದ ಘಟನೆ ಮಹಾರಾಷ್ಟ್ರ ರಾಜ್ಯದ ಬಾರಮತಿಯಲ್ಲಿ ನಡೆದಿದೆ.

ವೃದ್ಧೆಯನ್ನು ಶಾಕುಂತಲಾ ಗಾಯಕ್ವಾಡ್ ಎಂದು ಕುರುತಿಸಲಾಗಿದ್ದು, ಕೆಲ ದಿನಗಳ ಹಿಂದೆ ಅವರಿಗೆ ಕೊರೋನಾ ಸೋಂಕು ದೃಧಪಟ್ಟಿತ್ತು, ಅವರನ್ನು ಮನೆಯಲ್ಲೇ ಪ್ರತ್ಯೇಕವಾಗಿ ಇರಿಸ ಔಷದೋಪಚಾರ ನೀಡಲಾಗುತ್ತಿತ್ತು. ಅವರಿಗೆ ಸೋಂಕು ಉಲ್ಬಣಗೊಂಡು ಆರೋಗ್ಯದಲ್ಲಿ ಏರುಪೇರು ಕಾಣಿಸಿಕೋಂಡ ಹಿನ್ನೆಲೆ ಕುಟುಂಬಸ್ಥರು ಅವರನ್ನು ಬಾರಮತಿಯ ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿದ್ದರು.

ಮೇ 10 ನೇ ತಾರೀಖಿನಂದು ವೃದ್ಧೆಯನ್ನು ಖಾಸಗಿ ವಾಹನದಲ್ಲಿ ಬಾರಮತಿಗೆ ಕರೆದೊಯ್ಯಲಾಗಿತ್ತು, ಕುಟುಂಬಸ್ಥರು ಎಷ್ಟೇ ಪ್ರಯತ್ನ ನಡೆಸಿದರು ಬಾರಮತಿಯ ಯಾವ ಆಸ್ಪತ್ರೆಯಲ್ಲೂ ಅವರಿಗೆ ಒಂದು ಬೆಡ್ ಸಿಗದೆ ಕಾರಿನಲ್ಲೇ ಕಾಯುತ್ತಿದ್ದರು, ಈ ವೇಳೆ ಆ ವೃದ್ಧ ಪ್ರಜ್ಞೆತಪ್ಪಿ ಅಲುಗಾಡದೆ ಸ್ಥಬ್ದವಾಗಿದ್ದರು, ಇದರಿಂದ ಕುಟುಬಸ್ಥರು ಅವರು ಸತ್ತಿದ್ದಾರೆ ಎಂದು ತಿಳಿದು ಅಂತಿಮ ಸಂಸ್ಕಾರ ಮಾಡಲು ತಮ್ಮ ಸಂಬಂಧಿಗಳು ಬರಲು ಸುದ್ಧಿ ತಿಳಿಸಿದ್ದರು.

ವೃದ್ಧೆಯನ್ನು ವಾಪಾಸ್ ಮನೆಗೆ ತಂದು ಅಂತಿಮ ಸಂಸ್ಕಾರಕ್ಕೆ ಮನೆಯವರಲ್ಲ ತಯಾರಿ ನಡೆಸುತ್ತಿದ್ದರು, ಸಂಬಂಧಿಕರೆಲ್ಲ ಸತ್ತಿದ್ದಾರೆಂದು ಜೋರಾಗಿ ಅಳುತ್ತಿದ್ದರು, ವೃದ್ಧೆಯನ್ನ ಇನ್ನೇನ್ ಕೊನೇ ಪ್ರಯಾಣಕ್ಕೆಂದು ಚೊಟ್ಟದ ಮೇಲೆ ಕುಳಿರಿಸುವ ವೇಳೆ, ತಕ್ಷಣವೇ, ವೃದ್ಧೆ ಕಣ್ದೆರೆದು ಅಳಲು ಶುರು ಮಾಡಿದ್ದಾಳೆ. ಈ ವೇಳೆ ಎಲ್ಲರೂ ಧಂಗಾಗಿದ್ದು, ತಕ್ಷಣವೇ ವೃದ್ಧೆಯನ್ನು ಕರೆದುಕೊಂಡು ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಈಗ ವೃದ್ಧೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಾರಮತಿಯ ಸಿಲವರ್ ಜ್ಯೂಬಿಲಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.