ಕೊರೋನಾ ಸೋಂಕಿತ ಅಪ್ಪನಿಗೆ ನೀರುಣಿಸಲು ಪರದಾಡುವ ಮಗಳು

ಮಗಳನ್ನು ತಡೆದ ತಾಯಿ, ಈ ವಿಡಿಯೋ ದೃಶ್ಯ ಎಲ್ಲೆಡೆ ವೈರಲ್

 | 
A photo of daughter fights mother to give water to Covid positive father

ಕೋವಿಡ್ ಸೋಂಕನಿಂದ ಉಸಿರು ಎಳೆಯುತ್ತಿದ್ದ ತನ್ನ ಅಪ್ಪನಿಗೆ ಬಿಕ್ಕಳಿಸಿ ಅಳುತ್ತಾ ನೀರುಣಿಸಲು ಯತ್ನಿಸುವ ಮಗಳನ್ನು ಸೋಂಕಿತ ಅಪ್ಪನ ಬಳಿ ಹೋಗದಂತೆ ತಡೆಯುತ್ತಿರುವ ತಾಯಿ ಇದು ಕೊರೋನಾ ತಂದ ಅವಾಂತರ.

 ಮಹಾಮಾರಿ ಕೊರೋನಾಗೆ ತುತ್ತಾಗಿ ನೆಲದಲ್ಲಿ ಬಿದ್ದು ಉಸಿರು ಬಿಗೆದೆಳೆಯುತ್ತಿರುವ ಅಪ್ಪನಿಗೆ ಮಗಳು ನೀರು ಕುಡಿಸಲು ಯತ್ನಿಸುತ್ತಾಳೆ. ಹುಡಿಗಿಯ ಅಪ್ಪ ಕರೋನಾದಿಂದ ನರಳಾಡುತ್ತಿದ್ದ ಹಿನ್ನೆಲೆ ಆಕೆಯ ತಾಯಿ ಅಪ್ಪನ ಬಳಿಗೆ ಹೋಗುವುದನ್ನು ತಡೆಯುತ್ತಾಳೆ, ಆದರೆ ಹುಡುಗಿ ತಾಯಿಯ ಜೊತೆ ಹೋರಾಡಿ ಅಪ್ಪನಿಗೆ ನೀರುಣಿಸಲು ಯತ್ನಿಸುತ್ತಾಳೆ ಇಂತಹ ಹೃದಯ ಮಿಡಿಯುವ ವಿಡಿಯೋ ದೃಶ್ಯವೊಂದು ಈಗ ವೈರಲ್ ಆಗಿದೆ.

ಈ ಘಟನೆ ಆಂಧ್ರಪ್ರದೇಶದ ಶ್ರೀಕಾಕುಲಂನಲ್ಲಿ ನಡೆದಿದ್ದು, ಈ ವೀಡಿಯೋದಲ್ಲಿ ಕೆಳಗೆ ಬಿದ್ದು ನರಳಾಡುತ್ತಿರುವ ವ್ಯಕ್ತಿ 50 ವರ್ಷದ ಅಸಿರ ನಾಯ್ಡು ಇವರು ಶ್ರೀಕಾಕುಲಂ ಜಿ ಸಿಗದಂ ಮಂಡಳದ ಕೊಯ್ಯನಪೆಟ್ಟಾದವರು, ಇವರು ಕೊರೋನಾದಿಂದ ಸೂಕ್ತ ಚಿಕಿತ್ಸೆ ಸಿಗದೆ ತನ್ನ ಹೆಂಡತಿ ಮತ್ತು ಮಗಳೆದುರು ನರಳಾಡಿ ಕೊನೆಯುಸಿರೆಳೆದಿದ್ದಾರೆ.

ಅಸಿರ ನಾಯ್ಡು ಅವರು ವಿಜಯವಾಡದಲ್ಲಿ ಕೂಲ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು, ಆದರೆ. ಕೊರೋನಾ ಮಹಾಮಾರಿ ಇವರ ಕುಟುಂಬವನ್ನು ಆವರಿಸಿತು. ಲಾಕ್ ಡೌನ್ ಭಯದಲ್ಲೆ ತಮ್ಮ ಊರಿಗೆ ಮರಳಲು ನಿರ್ಧರಿಸಿದರು, ಭಾನುವಾರ ಊರಿಗೆ ಆಗಮಿಸಿದ ಇವರನ್ನು ಗ್ರಾಮಸ್ಥರು ತಡೆದು ಊರ ಹೊರಗಿನ ಗುಡಿಸಲೊಂದರಲ್ಲಿ ಪ್ರತ್ಯೇಕವಾಗಿರಲು ತಿಳಿಸಿದ್ದಾರೆ, ಆನಂತರ ಅಸಿರ ನಾಯ್ಡು ಅವರ ರೋಗ್ಯ ಸ್ಥಿತಿ ಮತ್ತಷ್ಟು ಗಂಭೀವಾಗಿದ್ದು, ತನ್ನ ಹೆಂಡತಿ ಮತ್ತು ಮಗಳೆದುರು ಪ್ರಾಣಬಿಟ್ಟಿದ್ದಾರೆ.