ಭಾರತದ ಮೂರು ರಾಜ್ಯಗಳಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್ ಪತ್ತೆ
ಮಹಾರಾಷ್ಟ್ರ, ಕೇರಳ, ಮಧ್ಯಪ್ರದೇಶಗಳಲ್ಲಿ ಪತ್ತೆಯಾದ ರೂಪಾಂತರಿ ಕೊರೋನಾ ವೈರಸ್

ನವದೆಹಲಿ: ಭಾರತ ಕೊರೋನಾ ಸಾಂಕ್ರಾಮಿಕದ ಎರಡನೇ ಅಲೆಯ ವಿರುದ್ಧ ಹೋರಾಡುತ್ತಿದೆ. ಹಾಗೆ ಕೊರೋನಾ ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್ ಕಂಟ್ರೋಲ್ ಮಾಡಲು ಹೋರಾಡುವ ಸ್ಥಿತಿ ನಿರ್ಮಾಣವಾಗಿದೆ.
ಡೆಲ್ಟಾ ಪ್ಲಸ್ ವೈರಸ್ ತುಂಬಾ ಅಪಾಯಕಾರಿ ಎಂದು ತಜ್ಞರು ಹೀಗಾಗಲೇ ಅಭಿಪ್ರಾಯಪಟ್ಟಿದ್ದು, ಭಾರತದಲ್ಲಿ ಈಗಾಗಲೇ ಮೂರು ರಾಜ್ಯಗಳಲ್ಲಿ ಡೆಲ್ಟಾ ವೈರಸ್ ರೂಪಾಂತರಿ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಮಹಾರಾಷ್ಟ್ರ, ಕೇರಳ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ರೂಪಾಂತರಗೊಂಡಿರುವ ಡೆಲ್ಟಾ ವೈರಸ್ ಪ್ರಕರಣಗಳು ಪತ್ತೆಯಾಗಿದೆ. ಇದರಿಂದ ಜನತೆ ಭೀತಿಗೊಳಗಾಗಿದ್ದಾರೆ.
ಮಹಾರಾಷ್ಟ್ರದಲ್ಲಿ 21 ಡೆಲ್ಟಾ ಪ್ಲಸ್ ಪ್ರಕರಣಗಳು ಪತ್ತೆಯಾಗಿವೆ. ಕೇರಳ ದಲ್ಲಿ ಇಬ್ಬರಿಗೆ ಮತ್ತು ಮಧ್ಯಪ್ರದೇಶದಲ್ಲಿ ಓರ್ವ ಮಹಿಳೆ ಮತ್ತು ಶಿವಪುರಿಯ ನಾಲ್ಕು ಮಂದಿಯಲ್ಲಿ ಡೆಲ್ಟಾ ಪ್ಲಸ್ ವೈರಸ್ ಪ್ರಕರಣ ಕಂಡುಬಂದಿದೆ. ವಿಪರ್ಯಾಸ ಎಂದರೆ ಇವರೆಲ್ಲರೂ ವ್ಯಾಕ್ಸಿನ್ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.