ಎರಡು ತಿಂಗಳು ಉಚಿತ ಪಡಿತರ, ಆಟೋ & ಟಾಕ್ಸಿ ಚಾಲಕರಿಗೆ 5000ರೂ.

ದೆಹಲಿ ಜನರಿಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಣೆ

 | 
Delhi CM Arvind Kejriwal

ನವದೆಹಲಿ: 72ಸಾವಿರ ರೇಷನ್ ಕಾರ್ಡುದರರಿಗೆ ಎರಡು ತಿಂಗಳುಗಳ ಕಾಲ ಉಚಿತ ಪಡಿತರ ಹಾಗೂ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ 5000 ರೂಪಾಯಿಗಳ ಧನ ಸಹಯ ನೀಡುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತೀಳಿಸಿದ್ದಾರೆ.

ದೆಹಲಿಯಲ್ಲಿ ಕೊರೋನಾ ಹೆಚ್ಚುತ್ತಿರುವ ಹಿನ್ನಲೆ ಕಟ್ಟಿನಿಟ್ಟಿನ ಕ್ರಮ ಕೈಗೊಳ್ಳಲು ಲಾಕ್ ಡೌನ್ ಜಾರಿಗೊಳಿಸಿರುವ ಹಿನ್ನೆಲೆ ಕೋವಿಡ್ ಸಂದರ್ಭದಲ್ಲಿ ಬಡ ಜನರಿಗೆ ನೆರವಾಗಲು ಈ ಯೋಜನೆ ಘೋಷಿಸಿದ್ದಾರೆ.

ಕೊರೋನಾದ ಚೈನ್ ಬ್ರೇಕ್ ಮಾಡಲು ವಿಧಿಸಲಾಗಿರುವ ಈ ಲಾಕ್ ಡೌನ್ ಎರಡು ತಿಂಗಳವರೆಗೆ ಇರುತ್ತದೆ ಎಂದರ್ಥವಲ್ಲ ಎಂದು ಹೇಳಿರುವ ಅವರು, ದೆಹಲಿ ಪರಿಸ್ಥಿತಿ ಬೇಗ ಸುಧಾರಿಸಲಿದೆ ಮತ್ತೆ ಲಾಕ್ ಡೌನ್ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

ಲಾಕ್ ಡೌನ್ ನಿಂದ ದಿನಗೂಲಿ ನೌಕರರು ಮತ್ತು ಕಟ್ಟಡ ಕಾರ್ಮಿಕರಿಗೆ ಆರ್ಥಿಕ ಹೊಡೆತ ಎದುರಾಗಲಿದೆ ಈ ಹಿನ್ನೆಲೆ ಕಳೆದ ವಾರ ನಾವು ನೋಂದಾಯಿತ ಕಟ್ಟಡ ಕರ್ಮಿಕರಿ ಮತ್ತು ಕಡುಬಡವಗೆ 5000 ರೂ. ಧನಸಹಾಯ ಆದೇಶಿಸಲಾಗಿತ್ತು. ಈಗ ಎಲ್ಲಾ ಪಡಿತರ ಚೀಟಿದಾರರಿಗೆ ಎರಡು ತಿಂಗಳು ಉಚಿತ ಪಡಿತರ ನೀಡಲು ನಿರ್ಧಾರಿಸಲಾಗಿದೆ.

ಆಟೋ ಮತ್ತು ಟ್ಯಾಕ್ಸಿ ಚಾಲಕರು ದಿನಗೂಲಿ ರೂಪದಲ್ಲಿ ದುಡಿಯುತ್ತಾರೆ. ಅವರಿಗೆ ಯಾವುದೆ ತರಹದ ಉಳಿತಾಯ ಇರುವುದಿಲ್ಲ. ಕಳೆದ ಕೆಲ ವಾರಗಳಿಂದ ಲಾಕ್ ಡೌನ್ ಮಾಡಿದ್ದು, ಅವರಗೆ ಯಾವುದೇ ತರಹದ ಆದಾಯ ಇಲ್ಲ. ಆದ್ದರಿಂದ ಹಿಂದಿನ ವರ್ಷದಂತೆ ಈ ವರ್ಷವೂ 5000 ರೂ. ಕೊಟ್ಟು ಅವರ ಆರ್ಥಿಕ ಹೊರೆಯನ್ನು ತಗ್ಗಿಸಲು ನಿರ್ಧರಿಸಲಾಗಿದೆ. ಇದರಿಂದ 1.56 ಲಕ್ಷ ಡ್ರೈವರ್ ಗಳಿಗೆ ಸಹಾಯವಾಗಲಿದೆ ಎಂದು ತಿಳಿಸಿದ್ದಾರೆ.

.