ಮಂಗಳೂರಿನಲ್ಲೊಂದು ಸಿನಿಮೀಯ ಮಾದರಿ ಬೈಕ್ ಅಪಘಾತ

ಬೈಕ್ ಸವಾರ ಸಾವು, ದೃಶ್ಯ ಸಿಸಿಟಿವಿಯಲ್ಲಿ ಸೆರೆ

 | 
CCTV Image of Accident

ಮಂಗಳೂರು: ಮಂಗಳೂರಿನ ಪವಿನಂಗಡಿ ಬಳಿ ಸಿನಿಮೀಯ ಮಾದರಿಯ ರಸ್ತೆ ಅಪಘಾತವೊಂದು ಸಂಭವಿಸದೆ. ಮುಖ್ಯ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ವೇಗವಾಗಿ ಬರುತ್ತಿದ್ದ ಯುವಕ ರಸ್ತೆಗೆ ಅಡ್ಡಲಾಗಿ ಬಂದ ಇನ್ನೊಂದು ದ್ವಿಚಕ್ರ ವಾಹನವನ್ನು ತಪ್ಪಿಸಲು ಹೋಗಿ ಕಿರಾಣಿ ಅಂಗಡಿಗೆ ಡಿಕ್ಕಿ ಹೊಡೆದ್ದಿದ್ದಾನೆ. ಇದರ ಪರಿಣಾಮ ಕಿರಾಣಿ ಅಂಗಡಿಗೆ ಡಿಕ್ಕಿ ಹೊಡೆದ ದ್ವಿಚಕ್ರ ವಾಹನ ಸವಾರ ಸಾವನ್ನಪ್ಪಿದ್ದಾನೆ.

ಈ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕಿರಾಣಿ ಅಂಗಡಿಗೆ ಡಿಕ್ಕಿ ಹೊಡೆದ ಸವಾರ ಸಿನಿಮೀಯ ರೀತಿಯಲ್ಲಿ ಹಾರಿ ಕೆಳಗೆ ಬಿದ್ದಿದ್ದಾನೆ. ನಂತರ ಇನ್ನೊಂದು ದ್ವಿಚಕ್ರ ವಾಹನ ಹಿಂದೆಯಿಂದ ಬಂದು ಗುದ್ದಿದೆ, ನಂತರ ಆ ಬೈಕ್ ನ ಸವಾರನೂ ಬಿದ್ದಿದ್ದಾನೆ.

ಸಾವನ್ನಪಿಪಿರುವ ಯುವಕನನ್ನು ಪ್ರಶಾಂತ್ ಎಂದು ಗುರುತಿಸಲಾಗಿದ್ದು, ಈತ ಬೊಂಡಲ್ ನ ಕೃಷ್ಣನಗರದ ನಿವಾಸಿ ಎಂದು ತಿಳಿದು ಬಂದಿದೆ. ಘಟನೆ ನಡೆದ ತಕ್ಷಣ ಪ್ರಶಾಂತ್ ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.