ಕೊರೋನಾಗೆ ಕಳೆದ 24ಗಂಟೆಯಲ್ಲಿ 3,980 ಬಲಿ
4,12,262 ಹೊಸ ಕೊವಿಡ್ ಪ್ರಕರಣಗಳು ಪತ್ತೆ
ದೇಶದಲ್ಲಿ ಕಳೆದ 24ಗಂಟೆಯಲ್ಲಿ ದಾಖಲೆಯ 4,12,262 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ ಮತ್ತು 3,980 ಸಾವುಗಳು ಸಂಭವಿಸಿವೆ. ಈವರೆಗೆ ಒಟ್ಟಾರೆ ಸಾವಿನ ಸಂಖ್ಯೆ 2,30,168ಕ್ಕೆ ತಲುಪಿದೆ ಎಂದು ಕೇಂದ್ರ ರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ವರದಿಯಿಂದ ತಿಳಿದುಬಂದಿದೆ.
ಮಹಾರಾಷ್ಟ್ರದಲ್ಲಿ 57,640, ಕರ್ನಾಟಕದಲ್ಲಿ 50,112, ಕೇರಳದಲ್ಲಿ 41,953, ಉತ್ತರಪ್ರದೇಶದಲ್ಲಿ 31,111, ತಮಿಳುನಾಡಿನಲ್ಲಿ 23,310 ಪ್ರಕರಣಗಳು ದಾಖಲಾಗಿವೆ. ಈ ಐದು ರಾಜ್ಯಗಳಿಂದ ದೇಶದ 49.56 ಶೇಖಡವಾರು ಪ್ರಕರಣಗಳು ಕಂಡ ಬಂದಿವೆ.
ಮಹಾರಾಷ್ಟ್ರವೊಂದರಲ್ಲೆ ಶೇಖಡ 13.98 ರಷ್ಟು ಪ್ರಕರಣಗಳು ಪತ್ತೆಯಾಗಿವೆ. ಮಹಾರಾಷ್ಟ್ರದಲ್ಲಿ ಮತ್ತು ಉತ್ತರಪ್ರದೇಶದಲ್ಲಿ ಹೆಚ್ಚು ಸಾವುಗಳು ಸಂಭವಿಸಿದ್ದು, ಈ ರಾಜ್ಯಗಳಲ್ಲಿ ಕ್ರಮವಾಗಿ 920 ಮತ್ತು 353 ಜನ ಕೊರೋನಾಗೆ ಬಲಿಯಾಗಿದ್ದಾರೆ
ಕಳೆದ 24 ಗಂಟೆಯಲ್ಲಿ 3,29,113 ಜನ ಆಸ್ಪತ್ರಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ದೇಶದಲ್ಲಿ ಈವರೆಗೆ ಒಟ್ಟಾರೆ 1,72,80,844 ಜನರು ಕೊರೋನಾದಿಂದ ಚೇತರಿಸಿಕೊಂಡಿದ್ದಾರೆ. 35,66,398 ಸಕ್ರಿಯ ಪ್ರಕರಣಗಳಿವೆ ಎಂದು ತಿಳಿದುಬಂದಿದೆ.