ಕೊರೋನಾ ಸಂಕಷ್ಟಕ್ಕೆ ಮತ್ತೆ 100 ಕೋಟಿ ನೀಡಿದ ಇನ್ಫೋಸಿಸ್

ಆಕ್ಸಿಜನ್, ವೆಂಟಿಲೇಟರ್, ಔಷಧಿ ಖರೀದಿಗೆ ಬಳಸಿ ಎಂದ ಸುಧಾ ಮೂರ್ತಿ

 | 
ಕೊರೋನಾ ಸಂಕಷ್ಟಕ್ಕೆ ಮತ್ತೆ ₹100 ಕೋಟಿ ನೀಡಿದ ಇನ್ಫೋಸಿಸ್

ಬೆಂಗಳೂರು: ದೇಶದಲ್ಲಿ ನಿರಂತರವಾಗಿ ಹೆಚ್ಚಾಗುತ್ತಿರುವ ಮಹಾಮಾರಿ ಕೊರೋನಾ ಸೋಂಕಿನ ವಿರುದ್ಧ ಹೋರಾಡಲು ಇನ್ಫೋಸಿಸ್ ಫೌಂಡೇಷನ್ ಮತ್ತೆ ಧನ ಸಹಾಯ ನೀಡಿದೆ. ಕಳೆದ ವರ್ಷ ನೂರು ಕೋಟಿ ರೂಪಾಯಿಗಳ ಧನ ಸಹಾಯ ನೀಡಿದ್ದ ಇನ್ಫೋಸಿಸ್ ಫೌಂಡೇಷನ್ ಈ ಬಾರಿಯೂ 100 ಕೋಟಿ ರೂಪಾಯಿಗಳನ್ನು ನೀಡಿದೆ.

ಈ ಬಾರಿಯ ಧನ ಸಹಾಯವನ್ನು ಮಂಗಳೂರು, ಹೈದರಾಬಾದ್, ಪುಣೆ, ನಾಗ್ಪುರ, ದೆಹಲಿ ಮತ್ತು ತಿರುವನಂತಪುರಂಗೆ ನೀಡುತ್ತಿದ್ದು, ಇದನ್ನು ಕೋವಿಡ್ ರೋಗಿಗಳಿಗೆ ಅವಶ್ಯಕವಿರುವ ಆಕ್ಸಿಜನ್, ವೆಂಟಿಲೇಟರ್, ಔಷಧ ಖರೀದಿ ಸೇರಿದಂತೆ ಮೂಲಭೂತ ಸೌಕರ್ಯಗಳ ಬಳಕೆಗೆ ನೀಡಲಾಗುತ್ತಿದೆ ಎಂದು ಇನ್ಫೋಸಿನಸ್ ಫೌಂಡೇಷನ್ ಅಧ್ಯಕ್ಷೆ ಸುಧಾ ಮೂರ್ತಿ ಹೇಳಿದ್ದಾರೆ.