ಇತರೆ ರಾಜ್ಯಗಳಂತೆ ರಾಜ್ಯದಲ್ಲೂ ಲಾಕ್ಡೌನ್ ಮುಂದುವರಿಸಿದರೆ ಉತ್ತಮ: ಸಚಿವ ಆರ್. ಅಶೋಕ್
ಲಾಕ್ ಡೌನ್ ಜೊತೆ ಪ್ಯಾಕೇಜ್ ಘೋಷಿಸುತ್ತಾರೆ ಸಿಎಂ ಎಂದು ಹೇಳಿದ ಸಚಿವ

ಕಾರವಾರ: ಮಹಾರಾಷ್ಟ್ರ, ಕೇರಳ, ದಹಲಿ ರಾಜ್ಯಗಳಂತೆ ರಾಜ್ಯದಲ್ಲೂ ಲಾಕ್ ಡೌನ್ ಮುಂದುವರಿಸಿದರೆ ಉತ್ತಮ, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಲಾಕ್ ಡೌನ್ ಜೊತೆಗೆ ವಿಶೇಷ ಪ್ಯಾಕೇಜ್ ಘೋಷಿಸಿಲಿದ್ದಾರೆ ಎಂದು ಭಟ್ಕಾಳದಲ್ಲಿ ಸಚಿವ ಆರ್.ಅಶೊಕ್ ಹೇಳಿದ್ದಾರೆ.
ತೌಕ್ತೆ ಚಾಂಡಮಾರುತದಿಂದ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಅವರು ಮಾತನಾಡಿದರು, ಎರಡನೇ ಹಂತದ ಲಾಕ್ಡೌನ್ ಘೋಷಣೆಯಾಗುತ್ತಿದ್ದಂತೆಯೇ ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿ ಮುಖ್ಯಮಂತ್ರಿಗಳು ರಾಜ್ಯದ ಜನತೆಗೆ ಪ್ಯಾಕೇಜ್ ಘೋಷಿಸಿಲಿದ್ದಾರೆ ಎಂದರು.
ಕೋವಿಡ್ ಮೂರನೇ ಅಲೆ ತಡೆಯಲ ಸರ್ಕಾರ ಸನ್ನದ್ದವಾಗಿದ್ದು, ಈ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಹೆಚ್ಚು ಮಕ್ಕಳ ಆಸ್ಪತ್ರೆಗಳನ್ನು ತೆರೆಯಲು ನಿರ್ಧಾರಿಸಲಾಗಿದೆ. ಕೊರೋನಾ ಈಗ ಹಳ್ಳಿಗಳಿಗೂ ತಲುಪಿರುವುದರಿಂದ ವೈದ್ಯರುಗಳನ್ನು ಹಳ್ಳಿಗಳಿಗೆ ಕಳುಹಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.