ಕೊರೋನಾ ಸೋಂಕಿತರಿಗೆ ಅವಶ್ಯಕತೆ ಇದ್ದರೆ ಮನೆ ಬಾಗಿಲಿಗೆ ಆಕ್ಸಿಜನ್ ಸೇವೆ: ದೆಹಲಿ ಸಿಎಂ

ಪ್ರತೀ ಜಿಲ್ಲೆಯಲ್ಲೂ ಆಕ್ಸಿಜನ್ ಕಾನ್ಸೆಂಟ್ರೇಟರ್ ಬ್ಯಾಂಕ್ ಸ್ಥಾಪನೆಯ ಘೋಷಣೆ

 | 
ಕೊರೋನಾ ಸೋಂಕಿತರಿಗೆ ಅವಶ್ಯಕತೆ ಇದ್ದರೆ ಮನೆ ಬಾಗಿಲಿಗೆ ಆಕ್ಸಿಜನ್ ಸೇವೆ: ದೆಹಲಿ ಸಿಎಂ

ನವದೆಹಲಿ: ಕೊರೋನಾ ಮಾಹಾಮಾರಿಯ ವಿರುದ್ಧ ಹೋರಾಡಲು ದೆಹಲಿಯ ಪ್ರತೀ ಜಿಲ್ಲೆಯಲ್ಲೂ ಆಕ್ಸಿಜನ್ ಕಾನ್ಸೆಂಟ್ರೇಟರ್ ಬ್ಯಾಂಕ್ ಗಳನ್ನು ಸ್ಥಾಪಿಸಲಾಗುತ್ತಿದ್ದು, ಕೊರೋನಾ ರೋಗಿಗಳಿಗೆ ಬಯಸಿದರೆ ಮನೆ ಬಾಗಿಲೆಗೆ ಆಕ್ಸಿಜನ್ ಕಾನ್ಸೆಂಟ್ರೇಟರ್ ಸೇವೆಯನ್ನು ನೀಡಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಹೇಳಿದ್ದಾರೆ.

ದೆಹಲಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇವತ್ತು ನಾವು ತುಂಬಾ ಮುಖ್ಯವಾದ ಸೇವೆಗಳನ್ನು ನಿಡಲು ಭಯಸಿದ್ದು, ದೆಹಲಿಯಾದ್ಯಂತ ಸುಮಾರು 200 ಆಕ್ಸಿಜನ್ ಕಾನ್ಸೆಂಟ್ರೇಟರ್ ಬ್ಯಾಂಕ್ ಗಳನ್ನು ಸ್ಥಾಪಿಸಲಾಗುತ್ತಿದೆ. ಅವಶ್ಯಕತೆ ಇರುವವರಿಗೆ ಈ ಬ್ಯಾಂಕ್ ಗಳ ಮೂಲಕ ಆಕ್ಸಿಜನ್ ಸರಬರಾಜು ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಮನೆಯಲ್ಲಿ ಪ್ರತ್ಯೇಕ ವಾಸದಲ್ಲಿರುವ ಕೊರೋನಾ ಸೋಂಕಿತರಿಗೆ ಆಕ್ಸಿಜನ್ ಕಾನ್ಸೆಂಟ್ರೇಟರ್ ಅವಶ್ಯಕತೆ ಇದ್ದರೆ ಅವರಿಗೆ ನಮ್ಮ ತಂಡವೇ ಒಂದೆರಡು ಗಂಟೆಗಳಲ್ಲಿ ಅವರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡಲಿದೆ. ಹಾಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ರೋಗಿಗಳಿಗೆ ಆಕ್ಸಿಜನ್ ಬೇಕಾದರೂ ಅವರೂ ಸಹ ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.

ದೆಹಲಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ ನಿನ್ನೆ 8,500 ಪ್ರಕರಣಗಳು ಕಂಡುಬಂದಿದ್ದವು, ಇಂದು 6,500 ಪ್ರಕರಣಗಳು ಪತ್ತೆಯಾಗಿವೆ. ಇನ್ನು ಮುಂದೆ ಪ್ರಕರಣಗಳ ಸಂಖ್ಯೆ ಹೆಚ್ಚುವುದಿಲ್ಲ ಎಂದು ಭಾವಿಸಿದ್ದೇವೆ ಎಂದು ತಿಳಿಸಿದ್ದಾರೆ.