ಪಶ್ಚಿಮ ಬಂಗಾಳ ಮುಖ್ಯಮಂತ್ರಿಯಾಗಿ ದಿದಿ ಮಮತಾ ಪ್ರಮಾಣ

ಹಿಂಸಾಚಾರ ನಿಯಂತ್ರಿಸಲು ಮಮತಾ ಬ್ಯಾನರ್ಜಿ ಆದೇಶ

 | 
Mamatha Banarjee oath taking ceremony

ಕೊಲ್ಕತ್ತಾ: ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರು ಇಂದು ಪಶ್ಚಿಮ ಬಂಗಾಳದ ಮುಖ್ಯಮಂತ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ಪ್ರಾದೇಶಿಕ ಪಕ್ಷ ಟಿಎಂಸಿ ಅಭೂತಪೂರ್ವ ಜಯ ಸಾಧಿಸಲು ಕಾರಣಕರ್ತರಾದ ಮಮತಾ ಇಂದು ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ರಾಜಭವನದಲ್ಲಿ ನಡೆದ ಸರಳ ಸಮಾರಂಭಕ್ಕೆ ಬಿಳಿ ಸೀರೆ ಮತ್ತು ಶಾಲು ಹೊದ್ದು ಆಗಮಿಸಿದ ಮಮತಾ ತಮ್ಮ ಮತೃಭಾಷೆ ಬಂಗಾಳಿಯಲ್ಲೆ ಪ್ರಮಾಣವಚನ ಸ್ವೀಕರಿಸಿದರು, ರಾಜ್ಯಪಾಲರಾದ ಜಗದೀಪ್ ಧನ್ಕರ್ ಅವರು ದಿದಿ ಮಮತಾಗೆ ಪ್ರಮಾನ ವಚನ ಬೋಧಿಸಿದರು. ನೂತನ ಶಾಸಕರು ರವೀಂದ್ರನಾಥ ಟ್ಯಾಗೋರ್ ಅವರ ಜನ್ಮದಿನ ಮೇ 9ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಮುಖ್ಯಮಂತ್ರಿಯಾಗ ಮಮತಾ ಬ್ಯಾನರ್ಜಿಯವರು ಅಧಿಕಾರಿ ಸ್ವೀಕರಿಸಿದ ನಂತರ ಅಭಿನಂದನೆ ಸಲ್ಲಿಸದ ರಾಜ್ಯಪಾಲ ಜಗದೀಪ್ ಧನ್ಕರ್ ಅವರು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಮನವಿ ಮಾಡಿದ್ದಾರೆ. ರಾಜ್ಯದಲ್ಲಿ ತಲೆದೂರಿರುವ ಹಿಂಸಾಚಾರವನ್ನು ನಿಲ್ಲಿಸುವುದು ಆಧ್ಯ ಕರ್ತವ್ಯ ಆಗಬೇಕು ಎಂದು ಹಿಂಸಾಚಾರವನ್ನು ಶೀಘ್ರ ತೆಡೆಯುವಂತೆ ಕೋರಿದ್ದಾರೆ.

ಹಿಂಸಾಚಾರದಿಂದ ಕಳೆದ ಎರಡು ದಿನಗಳಲ್ಲಿ ಸುಮಾರು 14 ಸಾವುಗಳು ಸಂಭವಿಸಿದ್ದು, ಹಿಂಸಾಚಾರವನ್ನು ನಿಯಂತ್ರಿಸಲು ಸಿಎಂ ಮಮತಾ ಬ್ಯಾನರ್ಜಿ ಆದೇಶ ನೀಡಿದ್ದಾರೆ.